ಪಂಜಾಬ್ನ ಜಾನಪದ ಹಬ್ಬ ಲೋಹ್ರಿ. ಕೃಷಿ ಕಾಯ್ದೆಗಳ ಪ್ರತಿಯನ್ನು ಸುಟ್ಟು ಲೋಹ್ರಿ ಹಬ್ಬವನ್ನು ಪಂಜಾಬ್ ರೈತರು ಆಚರಿಸಿದ್ದಾರೆ. ಇತ್ತ, ರಾಹುಲ್ ಗಾಂಧಿ ಟ್ರ್ಯಾಕ್ಟರ್ ಮೆರವಣಿಗೆಯ ಪರ ಟ್ವೀಟ್ ಮಾಡಿದ್ದು. ಮಥುರಾ ಸಂಸದೆ ಹೇಮಮಾಲಿನಿ ಉದ್ದೇಶವಿಲ್ಲದೇ ರೈತರು ಚಳುವಳಿ ನಡೆಸುತ್ತಿದ್ದಾರೆ ಎಂದಿದ್ದಾರೆ.
ದೆಹಲಿ: ಪಂಜಾಬ್ ರೈತರು ತಮ್ಮ ಜಾನಪದ ಹಬ್ಬ ‘ಲೋಹ್ರಿ’ ಆಚರಣೆಯ ನಿಮಿತ್ತ ಸಿಂಘು ಗಡಿಯಲ್ಲಿ ಮೂರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಬೆಂಕಿಯಲ್ಲಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಜಾಬ್ನ ವಕೀಲರು ಸಹ ಈ ಲೋಹ್ರಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಲುಧಿಯಾನದಲ್ಲಿ ಆಮ್ಆದ್ಮಿ ಪಕ್ಷದ ಭಗ್ವಂತ್ ಮನ್ ಸಹ ಕೃಷಿ ಕಾಯ್ದೆಗಳ ಪ್ರತಿಯನ್ನು ಸುಟ್ಟು ರೈತರ ಜತೆ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಪರ ಮಾತನಾಡಿದ್ದಾರೆ. ದೆಹಲಿ ಚಲೋ ಚಳುವಳಿಯಲ್ಲಿ ಈವರೆಗೆ 60 ರೈತರು ಮೃತಪಟ್ಟಿದ್ದಾರೆ. ಈ ಕುರಿತು ಸಂತಾಪ ಸೂಚಿಸದ ಕೇಂದ್ರ ಸರ್ಕಾರ, ಟ್ರ್ಯಾಕ್ಟರ್ ಮೆರವಣಿಗೆ ಮುಜುಗರದ ಸಂಗತಿ ಎಂದು ಭಾವಿಸುವುದು ತರವಲ್ಲ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
60 से ज़्यादा अन्नदाता की शहादत से मोदी सरकार शर्मिंदा नहीं हुई लेकिन ट्रैक्टर रैली से इन्हें शर्मिंदगी हो रही है!
— Rahul Gandhi (@RahulGandhi) January 13, 2021
ರೈತರಿಗೆ ಹೋರಾಟದ ಉದ್ದೇಶವೇ ತಿಳಿದಿಲ್ಲ: ಹೇಮಮಾಲಿನಿ
ಪಂಜಾಬ್ ರೈತರಿಗೆ ತಾವು ಕೈಗೊಳ್ಳುತ್ತಿರುವ ಚಳುವಳಿಯ ಉದ್ದೇಶವೇ ತಿಳಿದಿಲ್ಲ ಎಂದು ಮಥುರಾ ಸಂಸದೆ, ಬಿಜೆಪಿ ನಾಯಕಿ ಹೇಮಮಾಲಿನಿ ಹೇಳಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿರುವ ಅವರು, ರೈತರಿಗೆ ಕೃಷಿ ಕಾಯ್ದೆಗಳ ಒಳ ಹೊರಗಿನ ಪರಿಚಯವೇ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಣದ ಕೈಗಳು ಪಂಜಾಬ್ ರೈತರನ್ನು ಮುನ್ನಡೆಸುತ್ತಿವೆ ಎಂದಿದ್ದಾರೆ.
3 ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ನಿಂದ ತಡೆ; ನಾಲ್ವರು ತಜ್ಞರನ್ನೊಳಗೊಂಡ ಸಮಿತಿ ರಚನೆ