ಕೊಪ್ಪಳ: ದಂಪತಿ ಮೇಲೆ ದುಷ್ಕರ್ಮಿಗಳ ಭೀಭತ್ಸ ಹಲ್ಲೆ, ಪತ್ನಿ ಸಾವು

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಖಾಸಗಿ ಬ್ಯಾಕೊಂದರ ಮ್ಯಾನೇಜರ್ ಮತ್ತು ಅವರ ಪತ್ನಿಯ ಮೇಲೆ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಭೀಕರವಾಗಿ ಹಲ್ಲೆಯ ಪರಿಣಾಮವಾಗಿ ತ್ರಿವೇಣಿಯೆಂದು ಗುರುತಿಸಲಾಗಿರುವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ವಿನೋದ್ ಎಂದು ಗುರುತಿಸಲ್ಪಟ್ಟಿರುವ ಮ್ಯಾನೇಜರ್, ಗಂಗಾವತಿ ಉಪವಿಭಾಗದ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಕೊಲೆಗಡುಕರು ಕಬ್ಬಿಣದ ರಾಡ್​ನಿಂದ ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾಗಿರುವ ದಂಪತಿ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಗಳೆಂದು ತಿಳಿದುಬಂದಿದೆ. 6 ತಿಂಗಳ ಹಿಂದೆ ತ್ರಿವೇಣಿಯವರನ್ನು ಪ್ರೀತಿಸಿ ಮದುವೆಯಾಗಿದ್ದ ವಿನೋದ್ ಐಡಿಎಫ್​ಸಿ ಬ್ಯಾಂಕಿನ ಕಾರಟಗಿ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದ್ದರಿಂದ ಅದೇ ಊರಲ್ಲಿ ವಾಸವಾಗಿದ್ದರು.

ಕಾರಟಗಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಹಂತಕರನ್ನು ಬಂಧಿಸಲು ಬಲೆ ಬೀಸಿದ್ದಾರೆ. ಹಲ್ಲೆಗೆ ಕಾರಣ ಗೊತ್ತಾಗಿಲ್ಲವೆಂದು ಅವರು ಹೇಳಿದ್ದಾರೆ.

Related Tags:

Related Posts :

Category:

error: Content is protected !!