ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಬೆಲೆ ಬಾಳುವ ಮೊಬೈಲ್ ಮಂಗಮಾಯ

ನೆಲಮಂಗಲ: ಊಟಕ್ಕೆಂದು ಹೋಟೆಲ್‌ಗೆ ಬಂದಿದ್ದ ತಂದೆ ಮತ್ತು ಮಗಳ ಮೊಬೈಲ್​ಗಳು ಕಳ್ಳತನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ4ರ ಕಾಮಧೇನು ಹೋಟೆಲ್‌ನಲ್ಲಿ ನಡೆದಿದೆ.

ತಂದೆ ಲಕ್ಷ್ಮಣ ಮತ್ತು ಮಗಳು ಮೋನಿಕಾ ಇಬ್ಬರು ಹೋಟೆಲ್​ನಲ್ಲಿ ಊಟ ಮಾಡಲು ಬಂದಿದ್ದರು. ಊಟ ಮಾಡಿ ಕೈ ತೊಳೆದು ಹಿಂತಿರುಗುವಷ್ಟರಲ್ಲಿ ಇಬ್ಬರ ಬೆಲೆ ಬಾಳುವ ಮೊಬೈಲ್ ಕಳ್ಳತನವಾಗಿದೆ. ಹೋಟೆಲ್ ಸಿಬ್ಬಂದಿಯೇ ಕಳ್ಳತನ ಮಾಡಿರುವುದಾಗಿ ತಂದೆ, ಮಗಳು ಆರೋಪಿದ್ದಾರೆ. ಈ ಹಿಂದೆಯೂ ಈ ರೀತಿಯ ಘಟನೆಗಳು ಸಂಭವಿಸಿದ್ದರೂ ಹೋಟೆಲ್ ಮಾಲೀಕ ಸಿಸಿಟಿವಿ ಅಳವಡಿಸದೆ ನಿರ್ಲಕ್ಷ್ಯವಹಿಸಿದ್ದಾನೆ ಎನ್ನಲಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Tags:

Related Posts :

Category: