Home » ತಾಜಾ ಸುದ್ದಿ » Photo Gallery | ಕೊರೊನಾ ಸಂಕಷ್ಟ; 17 ಮತ್ತು 20 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್ ರದ್ದುಪಡಿಸಿದ FIFA
Photo Gallery | ಕೊರೊನಾ ಸಂಕಷ್ಟ; 17 ಮತ್ತು 20 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪ್ ರದ್ದುಪಡಿಸಿದ FIFA
2021 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ -17 ಮಹಿಳಾ ವಿಶ್ವಕಪ್ ಕೂಡ ರದ್ದುಗೊಂಡಿತ್ತು. ಪಂದ್ಯಾವಳಿಯನ್ನು 2020 ರಲ್ಲಿ ನಡೆಸಬೇಕಿತ್ತು ಆದರೆ ಕೋವಿಡ್ ಕಾರಣ ನೀಡಿ 2021ರ ಫೆಬ್ರವರಿ ವರೆಗೆ ಮುಂದೂಡಲಾಯಿತು. ಆದರೆ ಈಗ ಅದನ್ನು ಸಹ ರದ್ದುಪಡಿಸಲಾಗಿದೆ.
ಕೊರೊನಾ ಸೋಂಕಿನ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಹಾಗಾಗಿ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಚಿಸುವುದು ತೀರ ಕಷ್ಟಕರವಾದ ಸಂಗತಿಯಾಗಿದೆ. ಹೀಗಾಗಿ ಫಿಫಾ ಅಂಡರ್ -17 ಮತ್ತು 20 ವರ್ಷದೊಳಗಿನವರ ಫುಟ್ಬಾಲ್ ವಿಶ್ವಕಪನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಇದಕ್ಕೂ ಮೊದಲು 2021 ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ -17 ಮಹಿಳಾ ವಿಶ್ವಕಪ್ ಕೂಡ ರದ್ದುಗೊಂಡಿತ್ತು. ಪಂದ್ಯಾವಳಿಯನ್ನು 2020 ರಲ್ಲಿ ನಡೆಸಬೇಕಿತ್ತು ಆದರೆ ಕೋವಿಡ್ ಕಾರಣ ನೀಡಿ 2021ರ ಫೆಬ್ರವರಿ ವರೆಗೆ ಮುಂದೂಡಲಾಯಿತು. ಆದರೆ ಈಗ ಅದನ್ನು ಸಹ ರದ್ದುಪಡಿಸಲಾಗಿದೆ.