4 ಬಾರಿ ನಿಗದಿಯಾಗಿ ಕ್ಯಾನ್ಸಲ್ ಆಗಿದ್ದ ಆಸ್ಪತ್ರೆ ಕೊನೆಗೂ ಉದ್ಘಾಟನೆಯಾಯ್ತು!

ಕೋಲಾರ: ರಾಜಕೀಯ ನಾಯಕರ ಪ್ರತಿಷ್ಠೆಗೆ ಬಲಿಯಾಗಿ, 6 ತಿಂಗಳಿಂದ ಬಿಡುಗಡೆ ಭಾಗ್ಯ ಸಿಗದೇ ದೂಳು ಹಿಡಿದಿದ್ದ ಆತ್ಪತ್ರೆಗೆ ಅಂತೂ, ಇಂತೂ ಉದ್ಘಾಟನೆ ಭಾಗ್ಯ ದೊರಕಿದೆ. ಸಚಿವ ಶ್ರೀರಾಮುಲು ಆಸ್ಪತ್ರೆಯನ್ನ ಉದ್ಘಾಟಿಸಿದರಾದ್ರು, ಈ ವೇಳೆ ನಾಯಕರ ಸ್ವಪ್ರತಿಷ್ಠೆಯ ಕದನ ಮತ ಹಾಕಿದವರಲ್ಲಿ ಬೇಸರ ತರಿಸುವಂತಿತ್ತು.

ಹೌದು, ರಾಜಕೀಯ ನಾಯಕರು ವೈಮನಸ್ಸು, ಸ್ವಪ್ರತಿಷ್ಠೆಯಿಂದ ಕಳೆದ 6 ತಿಂಗಳಿಂದ 4 ಬಾರಿ ಉದ್ಘಾಟನೆಗೆ ದಿನಾಂಕ ನಿಗದಿಯಾಗಿ ಮುಂದೂಡಲಾಗಿದ್ದ ಆಸ್ಪತ್ರೆಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಕುರಿತು ಟಿವಿ9 ಮಾಡಿದ್ದ ವರದಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತ್ತು. ಹೀಗಾಗಿ ನಿನ್ನೆ ಆರೋಗ್ಯ ಸಚಿವ ಶ್ರೀರಾಮುಲು ನೂತನ ಆಸ್ಪತ್ರೆಯ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ ಮಾತಾಡಿದ ಶ್ರೀರಾಮುಲು, ಆರೋಗ್ಯ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದ್ರು.

ಕಾಯಲು ಆಗದೆ ನಾಯಕರು ಎಸ್ಕೇಪ್..!
ಇನ್ನು ಈ ಕಾರ್ಯಕ್ರಮದಲ್ಲೂ ರಾಜಕೀಯ ನಾಯಕರ ಸ್ವಪ್ರತಿಷ್ಠೆ ಸದ್ದು ಮಾಡ್ತು. 11.30 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಶ್ರೀರಾಮುಲು ತಡವಾಗಿ ಬಂದ್ರು. ಉಸ್ತುವಾರಿ ಸಚಿವ ಹೆಚ್​.ನಾಗೇಶ್​, ಶಾಸಕ ಶ್ರೀನಿವಾಸಗೌಡ ಪ್ರವಾಸಿ ಮಂದಿರದಲ್ಲಿ 1 ಗಂಟೆ ಕಾಲ ಕಾದು ಸುಸ್ತಾಗಿದ್ದರು. ಇತ್ತ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಆಸ್ಪತ್ರೆ ಬಳಿ ಬಹಳ ಹೊತ್ತು ಕಾದರೂ, 1 ಗಂಟೆಯಾದ್ರು ಕಾರ್ಯಕ್ರಮ ಆರಂಭವಾಗದ ಹಿನ್ನೆಲೆ ರಮೇಶ್​ ಕುಮಾರ್ ವಾಷ್​ ರೂಂಗೆ ಹೋಗಿ ಬರ್ತೀನಿ ಇರಿ ಎಂದು ಕಾಲು ಕಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀನಿವಾಸಗೌಡ ಶ್ರೀರಾಮುಲು ಬರುವ ಹೊತ್ತಿಗೆ ಕಾಣಿಯಾಗಿದ್ರು. ಮಾಲೂರು ಕಾಂಗ್ರೆಸ್​ ಶಾಸಕ ನಂಜೇಗೌಡ ಕೂಡಾ ಉದ್ಘಾಟನೆ ನಂತರ ವೇದಿಕೆಯಲ್ಲಿ ಕೆಲಹೊತ್ತು ಇದ್ದು ನಿರ್ಗಮಿಸಿದ್ರು. ಇನ್ನು ವೇದಿಕೆ ಕೇವಲ ಬಿಜೆಪಿ ಪಕ್ಷದ ನಾಯಕರಿಂದಲೇ ಭರ್ತಿಯಾಗಿತ್ತು.

ಒಟ್ನಲ್ಲಿ ಜನರಿಗಾಗಿ ತಲೆಕೆಡಿಸಿಕೊಳ್ಳಬೇಕಿದ್ದ ಜನಪ್ರತಿನಿಧಿಗಳು, ಅದರ ಹೊರತು ಪ್ರತಿಷ್ಠೆಗಾಗಿ ಹೋರಾಡುವ ಸ್ಥಿತಿ ತಲುಪಿದ್ದಾರೆ. ಇದು ಭಾರಿ ಚರ್ಚೆ ಕಾರಣವಾಗಿದ್ದು, ಮುಂದೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!