16 ವರ್ಷಗಳ ಬಳಿಕ ತನ್ನ ಪ್ರಿಯತಮನನ್ನ ವರಿಸಿದ ಜಗತ್ತಿನ ಅತಿ ಕಿರಿಯ ಪ್ರಧಾನಿ!

ಬರೋಬ್ಬರಿ 16 ವರ್ಷಗಳ ಬಳಿಕ ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್ ತನ್ನ ಪ್ರಿಯಕರನನ್ನ ವರಿಸಿದ್ದಾರೆ. ಕಳೆದ ಶನಿವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ 34 ವರ್ಷದ ಪ್ರಧಾನಿ ಮರಿನ್​ ತನ್ನ ಬಹುದಿನಗಳ ಸಂಗಾತಿ ಹಾಗೂ ಮಾಜಿ ಫುಟ್​ಬಾಲ್​ ಆಟಗಾರ ಮಾರ್ಕಸ್​ ರಾಯಿಕೋನೆನ್​ರನ್ನ ವರಿಸಿದ್ದಾರೆ.

ವಿವಾಹದ ಬಳಿಕ ಮಾತನಾಡಿದ ಸನ್ನಾ ಮರಿನ್ ನಾನು ಪ್ರೀತಿಸಿದ ಪುರುಷನೊಟ್ಟಿಗೆ ಬದುಕು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದುಕೊಟ್ಟಿದೆ ಎಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು. ನಾನು ಹಾಗೂ ನನ್ನ ಬಾಳ ಸಂಗಾತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದೇವೆ. ಆದರೆ, ಈ ಪಯಣದಲ್ಲಿ ನನ್ನೊಟ್ಟಿಗೆ ಸದಾ ಇದ್ದ ಮಾರ್ಕಸ್​ಗೆ ತುಂಬು ಹೃದಯದಿಂದ ಧನ್ಯವಾದ ಹೇಳುತ್ತೇನೆ ಎಂದರು.

ತಮ್ಮ 18 ನೇ ವಯಸ್ಸಿಗೇ ಪ್ರೀತಿಯಲ್ಲಿ ಬಿದ್ದ ಮರಿನ್​ ಹಾಗೂ ಮಾರ್ಕಸ್​ ಕಳೆದ 16 ವರ್ಷಗಳಿಂದ ಒಟ್ಟಾಗಿದ್ದಾರೆ. ಪ್ರೇಮ ಪಕ್ಷಿಗಳಿಗೆ ಮುದ್ದಾದ ಎರಡು ವರ್ಷದ ಹೆಣ್ಣುಮಗಳು ಸಹ ಇದ್ದಾಳೆ. ಕಳೆದ ಡಿಸೆಂಬರ್​ನಲ್ಲಿ ದೇಶದ ಪ್ರಧಾನ ಮಂತ್ರಿಯಾದ ಮರಿನ್​ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 40 ಅತಿಥಿಗಳನ್ನ ಒಳಗೊಂಡ ಮದುವೆ ಸಮಾರಂಭದಲ್ಲಿ ಸನ್ನಾ ಮರೀನ್​ ಆಕರ್ಷಕ ವೈಟ್​ ಗೌನ್​ ಧರಿಸಿದ್ದು ಮಾರ್ಕಸ್​ ಟಕ್ಸೀಡೋದಲ್ಲಿ ಮಿಂಚುತ್ತಿದ್ದರು. ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ವಿವಾಹದ ಫೋಟೋಗಳನ್ನ ದಂಪತಿ ಹಂಚಿಕೊಂಡಿದ್ದು ಹಸನ್ಮುಖಿ ದಂಪತಿಯ ಕ್ಯೂಟ್​ ಫೋಟೋಗಳು ಇದೀಗ ಸಖತ್​ ಟ್ರೆಂಡ್​ ಆಗ್ತಿದೆ.

Related Tags:

Related Posts :

Category: