ಲಾಕ್​ಡೌನ್​ ಉಲ್ಲಂಘಿಸಿ ಕಾರು ಅಪಘಾತ: KAS ಅಧಿಕಾರಿ ವಿರುದ್ಧ FIR

ಬೆಂಗಳೂರು: ಸಂಡೇ ಲಾಕ್​ಡೌನ್​ ಉಲ್ಲಂಘಿಸಿದ್ದ KAS ಅಧಿಕಾರಿ ವಿರುದ್ಧ FIR ದಾಖಲಿಸಲಾಗಿದೆ. ಟಿವಿ 9 ವರದಿ ಬಳಿಕ ಅಲರ್ಟ್ ಆದ ಕೆ.ಆರ್. ಪುರಂ ಸಂಚಾರಿ ಪೊಲೀಸರು KAS ಅಧಿಕಾರಿ ಡಾ.ಕೆ.ಎನ್.ಅನುರಾಧಾ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.

ಡಾ.ಕೆ.ಎನ್.ಅನುರಾಧಾ KIADB ಯಲ್ಲಿ ADC ಅಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜುಲೈ 26 ರ ಭಾನುವಾರ ಸಂಡೇ ಲಾಕ್​ಡೌನ್​ ವೇಳೆ ತಮ್ಮ ಖಾಸಗಿ ಕಾರಿನಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಅಪಘಾತಕ್ಕೆ ಈಡಾಗಿದ್ದರು.
ಇದನ್ನೂ ಓದಿ: ಕಾರು ಅಪಘಾತದಲ್ಲಿ KAS ಅಧಿಕಾರಿ ಪ್ರಾಣಾಪಾಯದಿಂದ ಪಾರು, ಎಲ್ಲಿ?

ಹೀಗಾಗಿ, ಕಾರನ್ನು ವಶಕ್ಕೆ ಪಡೆದು ಐಪಿಸಿ ಸೆಕ್ಷನ್ 279, 337 ಅಡಿ FIR ದಾಖಲಿಸಿರುವ ಕೆ.ಆರ್. ಪುರಂ ಸಂಚಾರಿ ಪೊಲೀಸರು ರಾಮಮೂರ್ತಿನಗರ ಠಾಣೆಗೆ ವರದಿ ನೀಡಿದ್ದಾರೆ. ಲಾಕ್​ಡೌನ್ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ NDMA ಕಾಯ್ದೆ ಅಡಿ ಮತ್ತೊಂದು ಕೇಸ್ ದಾಖಲಿಸುವಂತೆ ವರದಿ ನೀಡಿದ್ದಾರೆ. ಇದೀಗ, ನ್ಯಾಯಾಲಯದ ಅನುಮತಿ ಬಳಿಕ ಡಾ. ಅನುರಾಧ ವಿರುದ್ಧ ಕೇಸ್ ದಾಖಲಿಸಲು ರಾಮಮೂರ್ತಿನಗರ ಠಾಣೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

Related Tags:

Related Posts :

Category:

error: Content is protected !!