ಸಿನಿಮಾ ಚಾನ್ಸ್ ನೆಪದಲ್ಲಿ ರೇಪ್, ಕಿರುತೆರೆ ನಟಿಯಿಂದ ಆರೋಪ

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಕಿರುತೆರೆ ನಟಿ ಮೇಲೆ ಅತ್ಯಾಚಾರ ಎಸೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಕಿರುತೆರೆಯ ನಟಿ ನೀಡಿದ ದೂರು ಆಧರಿಸಿ ಹೈದರಾಬಾದ್‌ನ ನಿರ್ಮಾಪಕ ಸಂಗಮೇಶ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನ ಹೆಬ್ಬಾಳ ನಿವಾಸಿಯಾಗಿರುವ ಕಿರುತೆರೆ ನಟಿಗೆ 6 ವರ್ಷಗಳ ಹಿಂದೆ ಸಿನಿಮಾಮದಲ್ಲಿ ಚಾನ್ಸ್ ಕೊಡಿಸುವುದಾಗಿ ನಿರ್ಮಾಪಕ ಸಂಗಮೇಶ್ ಹೇಳಿದ್ದಾನೆ. 2013ರಲ್ಲಿ ಹೈದರಾಬಾದ್​ನ ಹೋಟೆಲ್​ಗೆ ಕರೆಸಿಕೊಂಡು ಮತ್ತು ಬರಿಸೋ ತಂಪುಪಾನಿಯ ನೀಡಿ ಅತ್ಯಾಚಾರವೆಸಗಿದ್ದಾನೆ. ಬಳಿಕ 2014ರಲ್ಲಿ ಮತ್ತೆ ನಗ್ನ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡೋದಾಗಿ ಹೇಳಿ ಗೋವಾಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನಿರ್ಮಾಪಕನ ವಿರುದ್ಧ ಕಿರುತೆರೆ ನಟಿ ಆರೋಪಿಸಿದ್ದಾರೆ.

ಅಲ್ಲದೆ ಮದುವೆಯಾಗುವುದಾಗಿ ಭರವಸೆ ನೀಡಿ ನಿರಂತರವಾಗಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗೆ ಈಗಾಗ್ಲೇ ಮದುವೆಯಾಗಿದ್ದು, ಮಕ್ಕಳಿದ್ದನ್ನ ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿರೋ ಆರೋಪ ಕೇಳಿ ಬಂದಿದೆ. ರಾಜಿ ಮಾಡೋದಾಗಿ ಕರೆಸಿದ ಸಂಗಮೇಶ್ ಪತ್ನಿ ತನ್ನ ವಿರುದ್ದವೇ ಸ್ಥಳೀಯ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿರೋದಾಗಿ ದೂರಿನಲ್ಲಿ ಯುವತಿ ಮಾಹಿತಿ ನೀಡಿದ್ದಾರೆ. ವಂಚನೆ ಮತ್ತು ಬ್ಲಾಕ್ ಮೇಲ್ ಮಾಡ್ತಿದ್ದ ನಿರ್ಮಾಪಕನ ವಿರುದ್ದ ಸಂತ್ರಸ್ಥೆ ಕಿರುತೆರೆ ನಟಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ಸೂಚನೆ ಹಿನ್ನಲೆ ಅಮೃತಹಳ್ಳಿ ಪೊಲೀಸ್ರು ಎಫ್​ಐಆರ್ ದಾಖಲಿಸಿದ್ದಾರೆ.

Related Tags:

Related Posts :

Category: