ನಟಿ ರಿಷಿಕಾ ಕಾರು ಅಪಘಾತ ಪ್ರಕರಣ: ಚಾಲಕ ವಿರುದ್ಧ FIR ದಾಖಲು

ಬೆಂಗಳೂರು: ಚಿತ್ರನಟಿ ರಿಷಿಕಾ ಸಿಂಗ್​ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾಲಕ ಆರ್ಯ ವಿರುದ್ಧ FIR ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‌ 279, 338ರ ಅಡಿಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ: ಚಿತ್ರನಟರ ಪುತ್ರಿಯರ ಕಾರು ಅಪಘಾತ, ಮೂವರಿಗೆ ಗಾಯ

ಯಲಹಂಕ ಸಂಚಾರಿ ಠಾಣೆಯಲ್ಲಿ FIR ದಾಖಲಾಗಿದ್ದು ಗಾಯಾಳು ರೋಹಿಣಿ ಸಿಂಗ್ ಅಲಿಯಾಸ್ ರಿಷಿಕಾ ಸಿಂಗ್​ರ ದೂರಿನ ಮೇರೆಗೆ ಕೇಸ್​ ದಾಖಲಿಸಲಾಗಿದೆ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್​ರ ಕಾರಿನ ಚಾಲಕ ಆರ್ಯನ ಅಜಾಗರೂಕ ಚಾಲನೆಯಿಂದ ಮರಕ್ಕೆ ಕಾರು ಡಿಕ್ಕಿ ಹೊಡೆಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜುಲೈ 29ರಂದು ಯಲಹಂಕದ ಮಾವಳ್ಳಿಪುರ ಬಳಿ ಅಪಘಾತ ಸಂಭವಿಸಿದ್ದು ಇದರಲ್ಲಿ ನಟ ಜೈ ಜಗದೀಶ್ ಪುತ್ರಿಯೊಬ್ಬರು ಸಹ ಗಾಯಗೊಂಡಿದ್ದರು.

Related Tags:

Related Posts :

Category:

error: Content is protected !!