ಇನ್ನು ಮುಂದೆ ಬೆಂಗಳೂರಿನಲ್ಲಿ ಆನ್​ಲೈನ್​ನಲ್ಲೇ ಪಡೆಯಿರಿ ತಾಜಾ ಮೀನಿನ ಚಿಪ್ಸ್..!

  • pruthvi Shankar
  • Published On - 13:19 PM, 21 Nov 2020

ಬೆಂಗಳೂರು: ಇನ್ನು 15 ದಿನದಲ್ಲಿ ಹೆಜಮಾಡಿ ಬಂದರು ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗುವುದು ಎಂದು ವಿಧಾನಸೌಧದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಆನ್​ಲೈನ್​ನಲ್ಲಿ ತಾಜಾ ಮೀನು ಮಾರಾಟ.. ಅಲ್ಲದೆ ಮೀನಿನ ಚಿಪ್ಸ್ ಸೇರಿದಂತೆ ಮೀನು ಖಾದ್ಯಗಳಿಗೆ ಭಾರಿ ಬೇಡಿಕೆ ಇದೆ. ಹಾಗಾಗಿ ರೈಲ್ವೆ ಜತೆ ಒಪ್ಪಂದ ಮಾಡಿಕೊಂಡು ಮೀನು ಖಾದ್ಯಗಳ ಮಾರಾಟದ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಇಂದಿನಿಂದ ಬೆಂಗಳೂರಿನಲ್ಲಿ ಆನ್​ಲೈನ್​ನಲ್ಲಿ ತಾಜಾ ಮೀನು ಮಾರಾಟದ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅಲ್ಲದೆ ಆರ್ಡರ್ ಮಾಡಿದ ಒಂದು ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸುವರ್ಣತ್ರಿಭುಜ ದೋಣಿ ದುರಂತ: 7 ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ
ಕೆಲವು ತಿಂಗಳುಗಳ ಹಿಂದೆ ಸುವರ್ಣ ತ್ರಿಭುಜ ಮೀನುಗಾರಿಕಾ ದೋಣಿ ಅಪಘಾತವಾಗಿ ಏಳು ಮೀನುಗಾರರು ನಾಪತ್ತೆಯಾಗಿದ್ದರು. ನಾಪತ್ತೆಯಾದ ಮೀನುಗಾರರ ಮೃತದೇಹಗಳೂ ಸಹ ಸಿಕ್ಕಿರಲಿಲ್ಲ. ಹೀಗಾಗಿ ಅವರ ಕುಟುಂಬಗಳಿಗೆ ಸಿಎಂ ಬಿ ಎಸ್​ ಯಡಿಯೂರಪ್ಪನವರು ತಲಾ ಹತ್ತು ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ.