ಯೋಧನ ಕುಟುಂಬಕ್ಕೆ BBMP, BWSSB ಮೋಸ?

ಬೆಂಗಳೂರು: ಗಡಿ ಕಾಯುವ ಯೋಧನ ಕುಟುಂಬಕ್ಕೆ ಕಿಂಚಿತ್ತೂ ಸೌಲಭ್ಯ ಒದಗಿಸದೆ ಕಿರುಕುಳ ನೀಡಿದೆ ಎಂದು ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್​ಎಸ್​ಬಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
6 ತಿಂಗಳ ಮಗುವಿನೊಂದಿಗೆ ಯೋಧ ಕೃಷ್ಣಮೂರ್ತಿ ಪತ್ನಿ ಶೃತಿ ವಿದ್ಯಾರಣ್ಯಪುರದ ರಾಮಚಂದ್ರಪುರದಲ್ಲಿ ವಾಸವಿದ್ದಾರೆ. ಕೃಷ್ಣಮೂರ್ತಿ ಜಮ್ಮ-ಕಾಶ್ಮೀರದಲ್ಲಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಅವರ ಕುಟುಂಬಸ್ಥರು ಕಳೆದ 3 ವರ್ಷದಿಂದ ಕುಡಿಯಲು ನೀರಿಲ್ಲದೆ, ಮನೆಗೆ ರಸ್ತೆ ಇಲ್ದೆ, ಒಳಚರಂಡಿ ವ್ಯವಸ್ಥೆ ಇಲ್ದೆ ಪರದಾಡುತ್ತಿದ್ದಾರೆ.

ಮನೆ ಮುಂದೆಯಿರುವ ಸೈಟ್ ಮಾಲೀಕರ ಗಲಾಟೆಗೆ ನೀರಿನ ಲೈನ್ ಸಹ ಕಟ್ ಆಗಿದೆ. ಈ ಬಗ್ಗೆ ಬಿಬಿಎಂಪಿ ಮೇಯರ್, ಕೇಂದ್ರ ಸಚಿವ ಸದಾನಂದ ಗೌಡಗೆ ಪತ್ರ ಬರೆದರು ಏನು ಪ್ರಯೋಜನೆ ಆಗಿಲ್ಲ ಎಂದು ಟಿವಿ9ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more