ಆ್ಯಸಿಡ್ ಸಂತ್ರಸ್ತೆಯ ನೈಜ ಪಾತ್ರದಲ್ಲಿ ಬಾಲಿವುಡ್​ನ ಪದ್ಮಾವತಿ

ಬಾಲಿವುಡ್​ನಲ್ಲಿ ಇತ್ತೀಚೆಗೆ ನೈಜ ಕಥೆಗಳನ್ನಾಧರಿಸಿದ ಸಿನಿಮಾಗಳು ಕಮಾಲ್ ಮಾಡ್ತಿವೆ. ಇಂಥಾ ರಿಯಾಲಿಸ್ಟಿಕ್ ಸಿನಿಮಾಗಳ ಸಾಲಿಗೆ ಸೇರ್ತಿರೋದು ದೀಪಿಕಾ ಪಡುಕೋಣೆ ಅಭಿನಯದ ಚಾಪಕ್ ಚಿತ್ರ. ಹೌದು, ಸದ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತ್ರ ಬಾಲಿವುಡ್​ನ ಪದ್ಮಾವತಿ ಎಕ್ಸ್​ಪರಿಮೆಂಟ್ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡೋಕೆ ರೆಡಿಯಾಗಿದ್ದಾರೆ.

ಸದ್ಯ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡೋಕೆ ಕಾರಣ ಆಗಿರೋದು ಚಾಪಕ್ ಟ್ರೈಲರ್. ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯೋ ಶೋಷಣೆ, ದೌರ್ಜನ್ಯದಂಥಹ ಘಟನೆಗಳು ನಡೀತಾನೆ ಇರ್ತವೆ. ಅಂತಹದ್ದೇ ಸಂಚಲನಕ್ಕೆ ಕಾರಣವಾಗಿದ್ದ ಘಟನೆ ಅಂದ್ರೆ ಅದು 15 ವರ್ಷಗಳ ಹಿಂದೆ ದೆಹಲಿ ಮೂಲದ ಯುವತಿ ಲಕ್ಷ್ಮೀ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ ಪ್ರಕರಣ.

2005ರಲ್ಲಿ 32 ವರ್ಷದ ವ್ಯಕ್ತಿಯಿಂದ ಲಕ್ಷ್ಮೀ ಆ್ಯಸಿಡ್ ದಾಳಿಗೆ ತುತ್ತಾದ ನಂತರ ಅನುಭವಿಸೋ ಯಾತನೆ, ನೋವು, ಅವಮಾನ ಮತ್ತು ಆಕೆಯ ಬದುಕಿನ ಕಥೆಯ ಹಲವು ಘಟನಾವಳಿಗಳನ್ನ ದೀಪಿಕಾ ಪಡುಕೋಣೆ ಪಾತ್ರದ ಮೂಲಕ ಹೇಳಲಾಗಿದೆ. ಸದ್ಯ ರಿಲೀಸ್ ಆಗಿರೋ ಟ್ರೈಲರ್ ಸಂಚಲನ ಮೂಡಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಚಾಪಕ್ ಸಿನಿಮಾದಲ್ಲಿ ನೈಜ ಘಟನೆ ಜೊತೆಗೆ ಕೆಲವು ಎಲ್ಲಿಯೂ ರಿವೀಲ್ ಆಗದ ಸತ್ಯಘಟನೆಗಳನ್ನ ಹೇಳಲಾಗಿದೆಯಂತೆ. ಇನ್ನು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತ್ರ ದೀಪಿಕಾ ಎಕ್ಸ್ ಪರಿಮೆಂಟಲ್ ಪಾತ್ರಗಳಿಗೆ ತಮ್ಮನ್ನ ತಾವು ಒಗ್ಗಿಸಿಕೊಳ್ತಿದ್ದಾರೆ.

ಹೀಗಾಗಿ, ಸದ್ಯ ರಿಲೀಸ್ ಆಗಿರೋ ಟ್ರೈಲರ್ ದೀಪಿಕಾ ಹೀಗೂ ಕಮಾಲ್ ಮಾಡಬಹುದಾ ಅನ್ನೋ ಪ್ರಶ್ನೆಗೆ ಎಡೆಮಾಡಿಕೊಟ್ಟಿದೆ. ಇನ್ನು ಜನವರಿಯಲ್ಲಿ ರಿಲೀಸ್ ಆಗ್ತಿರೋ ಮಹಿಳೆ ಮೇಲಿನ ದೌರ್ಜನ್ಯದ ಕಥೆ ಹೇಳಿರೋ ಚಾಪಕ್​ನಲ್ಲಿ ದೀಪಿಕಾ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾ ಸಮಾಜದಲ್ಲಿನ ಒಂದಿಷ್ಟು ವಿಕೃತ ಮನಸ್ಸುಗಳನ್ನ ಬದಲಾಯಿಸುವಲ್ಲಿ ಸಕ್ಸಸ್ ಆಗುತ್ತಾ ನೋಡಬೇಕಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more