ಐಟಿ ದಾಳಿ ಮರುದಿನ ಪರಮೇಶ್ವರ್ ಪಿಎ ಆತ್ಮಹತ್ಯೆಗೆ ಶರಣಾಗಿದ್ದೇಕೆ?

ಬೆಂಗಳೂರು: ಹಳೆಯದ್ದೆಲ್ಲಾ ಮರೆಯಬೇಕು. ಹೊಸದನ್ನ ಶುರು ಮಾಡಬೇಕು. ಆದ್ರೆ, 2019 ಕೆಲ ಮರೆಯಲಾಗದ ಘಟನೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೊಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್‌ ಪಿಎ ಆತ್ಮಹತ್ಯೆ. ಜೊತೆಗೆ ಐಎಂಎ ಸ್ಕೀಮ್‌ ನಂಬಿ ನಿರಾಶರಾದ ಬರೊಬ್ಬರಿ 62 ಸಾವಿರ ಮಂದಿ. ಎಂಎಲ್‌ಎಗಳ ಹನಿಟ್ರ್ಯಾಪ್ ಮತ್ತು ಕೆಪಿಎಲ್‌ ಮ್ಯಾಚ್ ಫಿಕ್ಸಿಂಗ್‌.

ಪರಮೇಶ್ವರ್‌ ಒಡೆತನದ ಕಾಲೇಜ್‌ಗಳ ಮೇಲೆ IT ರೇಡ್:
2019ರ ಅಕ್ಟೋಬರ್‌ 10.. ಕಾಂಗ್ರೆಸ್‌ ನಾಯಕ, ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಮನೆ, ಕಚೇರಿಗಳು ಅವರ ಒಡೆತನದ ಕಾಲೇಜ್‌ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ಬೆಳಗಿನ ಏಕಕಾಲಕ್ಕೆ 300 ಅಧಿಕಾರಿಗಳು 30ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದರು. ಪರಮೇಶ್ವರ್‌ ಏನೇ ತನಿಖೆ ನಡೆಸಿದ್ರೂ ಅದನ್ನು ಎದುರಿಸಲು ಸಿದ್ಧನಿದ್ದೇನೆ ಎಂದಿದ್ರು. ಆದ್ರೆ ಇದಾಗಿ ಎರಡು ದಿನ ಕಳೆಯುತ್ತಿದ್ದಂತೆ ಅಂದ್ರೆ ಅಕ್ಟೋಬರ್‌ 12ರಂದು ನಡೆಯಬಾರದ್ದು ನಡೆದು ಹೋಗಿತ್ತು.

ಪರಮೇಶ್ವರ್‌ ಪಿಎ ಆತ್ಮಹತ್ಯೆ
ಎರಡು ದಿನಗಳ ಹಿಂದೆ ಐಟಿ ದಾಳಿ ನಡೆದಾಗ ಅಲ್ಲೇ ಹಾಜರಿದ್ದ. ಪರಮೇಶ್ವರ್​ಗೆ ಹಲವು ವರ್ಷಗಳಿಂದ ಆಪ್ತ ಸಹಾಯಕನಾಗಿ ಕೆಲಸ ಮಾಡ್ತಿದ್ದ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ರು. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್​ನ ಸಾಯಿಗ್ರೌಂಡ್​ನ ಬಳಿಯ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು.

ಆವತ್ತು ಬೆಳಗ್ಗೆ 9.30ರ ಸುಮಾರಿಗೆ ಕೆಲ ಮಾಧ್ಯಮದ ವರದಿಗಾರರಿಗೆ ಹಾಗೂ ತಮ್ಮ ಆಪ್ತರಿಗೆ ಕರೆ ಮಾಡಿದ್ದ ರಮೇಶ್‌ ಡಿ.ಕೆ.ಶಿವಕುಮಾರ್​ರಂಥವರನ್ನೇ ಬಿಟ್ಟಿಲ್ಲ ಇನ್ನು ನನ್ನನ್ನು ಬಿಡ್ತಾರಾ ಅಂತಾ ಆತಂಕ ಹೇಳಿಕೊಂಡಿದ್ರು. ಅಷ್ಟೇ ಅಲ್ಲ ನಾನಿನ್ನೂ ಬದುಕಿರಲ್ಲ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾನೂ ಹೇಳಿದ್ರು. ಸ್ನೇಹಿತರು ಅದೆಷ್ಟೇ ಧೈರ್ಯ ಹೇಳಿದ್ರು, ಕೇಳೋ ಸ್ಥಿತಿಯಲ್ಲಿ ಇರದ ರಮೇಶ್, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ರು.

ನೈಟ್ ಪ್ಯಾಂಟ್‌ನಿಂದಲೇ ನೇಣಿಗೆ ಶರಣು:
ಜ್ಞಾನಭಾರತಿ ಕ್ಯಾಂಪಸ್​ನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ 200 ಮೀಟರ್​ನಷ್ಟು ನಡೆದುಕೊಂಡು ಹೋಗಿ ತಾವು ಮನೆಯಿಂದ ತಂದಿದ್ದ ನೈಟ್ ಪ್ಯಾಂಟ್‌ನಿಂದಲೇ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು. ರಮೇಶ್ ಆತ್ಮಹತ್ಯೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಕಣ್ಣಿಗೆ ಎದೆಯೇ ಒಡೆದು ಹೋಗುವಂಥ ದೃಶ್ಯ ಎದುರಾಗಿತ್ತು. ರಮೇಶ್ ಮೃತದೇಹ ಮರದಲ್ಲಿ ನೇತಾಡ್ತಿದ್ದನ್ನ ಕಂಡು ಪತ್ನಿ ಸೌಮ್ಯಾ, ಸೋದರ ಸೋದರಿಯರು ಅಕ್ಷರಶ ಕುಸಿದು ಹೋಗಿದ್ರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ರಮೇಶ್‌ ಡೆತ್‌ನೋಟ್‌ ಒಂದನ್ನ ಬರೆದಿಟ್ಟಿದ್ದು ತನ್ನ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಅಂತಾ ಬರೆದಿಟ್ಟಿದ್ರು. ಆದ್ರೆ ಐಟಿ ಇಲಾಖೆ ತಾವು ರಮೇಶ್‌ ಮನೆ ಸರ್ಚ್ ಮಾಡಿಲ್ಲ. ಅವರ ವಿಚಾರಣೆ ಮಾಡಿಲ್ಲ ಅಂತಾ ತಿಳಿಸಿತ್ತು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!