ಹೊಸ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಿದ ರಾಜಧಾನಿ ಜನ

ಬೆಂಗಳೂರು: ಕಲರ್​ಫುಲ್ ಲೈಟಿಂಗ್ಸ್, ಕಿಕ್ಕೇರಿಸೋ ಡಿಜೆ ಮ್ಯೂಸಿಕ್. ಅದ್ಧೂರಿ ಸ್ಟೇಜು. ಇಷ್ಟ್ ಇದ್ರೆ ಕೇಳ್ಬೇಕಾ? ಸಿಕ್ಕಿದ್ದೇ ಚಾನ್ಸು ಅಂತಾ ಜನ ಹುಚ್ಚೆದ್ದು ಕುಣಿದಿದ್ದೇ ಕುಣಿದಿದ್ದು. ನಿಜ.. ಆ ಡಿಜೆ ಮ್ಯೂಸಿಕ್ಕು.. ಅದ್ಧೂರಿ ಲೈಟಿಂಗ್ಸ್​.. ಬಿರುಸು ಬಾಣಗಳ ಚಿತ್ತಾರಕ್ಕೆ ಜನ ಹುಚ್ಚರಂತಾಗಿದ್ರು.. ಕೇಕೆ ಸಿಳ್ಳೆ ಹೊಡೆಯುತ್ತಾ.. ಕಿಕ್ಕಿರಿದು ಜನರೆಲ್ಲಾ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕ್ತಿದ್ರೆ ಸಿಲಿಕಾನ್ ಸಿಟಿಯಲ್ಲಿ ಹೊಸ ಲೋಕವೇ ತೆರೆದುಕೊಂಡಿತ್ತು.

ಹೊಸ ವರ್ಷಕ್ಕೆ ಭರ್ಜರಿ ವೆಲ್​ಕಮ್​
ಬೆಂಗಳೂರಲ್ಲಿ ಹೊಸ ವರ್ಷ 2020ಕ್ಕೆ ಅದ್ಧೂರಿಗೆ ಸ್ವಾಗತ ಸಿಕ್ತು. ಜನರು ಡ್ಯಾನ್ಸು.. ಪಟಾಕಿ.. ಕೇಕೆ ಸಿಳ್ಳೆಗಳ ಭರ್ಜರಿ ವೆಲ್ಕಮ್ ಮಾಡ್ಕೊಂಡ್ರು. ಅದ್ರಲ್ಲೂ ಬೆಂಗಳೂರಿನ ಬ್ರಿಗೇಡ್ ರೋಡ್ ಮತ್ತು ಎಂಜಿ ರೋಡ್ ಜಾತ್ರೆಯಂತೆ ಕಂಗೊಳಿಸುತ್ತಿತ್ತು. ಮಧುವಣಗಿತ್ತಿಯ ಸಿಂಗಾರ, ಡಿಜೆ ಮ್ಯೂಸಿಕ್, ವಿದ್ಯುತ್ ದೀಪಾಲಂಕಾರ ಯುವಕ-ಯುವತಿಯರಿಗೆ ಭರ್ಜರಿ ಥ್ರಿಲ್ ಕೊಡ್ತು. ಅದೇ ಜೋಶ್​ನಲ್ಲಿ ಸಖತ್ ಸ್ಟೆಪ್ಸ್ ಹಾಕಿ ಹೊಸ ವರ್ಷವನ್ನ ಬರಮಾಡಿಕೊಂಡ್ರು.

ಇನ್ನು, ಕೋರಮಂಗಲದಲ್ಲೂ ಭರ್ಜರಿ ಸೆಲೆಬ್ರೆಷನ್ ಮಾಡ್ಲಾಯ್ತು. ಕಿಕ್ಕಿರಿದು ಸೇರಿದ್ದ ಯುವಕ-ಯುವತಿಯರು ಹೊಸ 2020ಕ್ಕೆ ಅದ್ಧೂರಿಯಾಗಿ ವೆಲ್​ಕಮ್ ಮಾಡ್ಕೊಂಡ್ರು. ಅದ್ರಲ್ಲೂ ಸ್ಯಾಂಡಲ್​ವುಡ್ ಬ್ಯೂಟಿ ಹರ್ಷಿಕಾ ಪೂಣಚ್ಚ ಫುಲ್ ಜೋಶ್​ನಲ್ಲಿದ್ರು. ಟಗರು ಹಾಡಿಗೆ ಮಸ್ತ್ ಹೆಜ್ಜೆ ಹಾಕಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು.

ಹೊಸ ವರ್ಷಾಚರಣೆಗೆ ಟೈಟ್ ಸೆಕ್ಯೂರಿಟಿ!
ಹೊಸವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂತಾ ಪೊಲೀಸ್ ಪಡೆ ಹದ್ದಿನ ಕಣ್ಣಿಟ್ಟಿತ್ತು. ಕಾವೇರಿ ಜಂಕ್ಷನ್​ನಲ್ಲಿ ಮೆಟಲ್ ಡಿಟೆಕ್ಟರ್ ಅಳವಡಸಿ ಪ್ರತಿಯೊಬ್ಬರ ಬ್ಯಾಗ್​ಗಳನ್ನು ಪೊಲೀಸರು ತಪಾಸಣೆ ಮಾಡಿ ಒಳಗೆ ಬಿಡ್ತಿದ್ರು. ಅಲ್ದೆ, 1500ಕ್ಕೂ ಹೆಚ್ಚು ಸಿಸಿಟಿವಿ, 5 ಡ್ರೋಣ್ ಕ್ಯಾಮರಾ ಅಳವಡಿಸಿ ಖಾಕಿ ಫುಲ್ ಅಲರ್ಟ್ ಆಗಿತ್ತು. ಒಟ್ನಲ್ಲಿ, ಹೊಸ ವರ್ಷ 2020ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ಜನರು ಹೊಸ ಜೋಶ್​ನಲ್ಲಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರಮಾಡಿಕೊಂಡ್ರು. ಈ ಹೊಸ ವರುಷ ಎಲ್ಲರಿಗೂ ಹೊಸ ಹರುಷ ತರಲಿ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!