2019ರಲ್ಲಿ ಬಾಲಿವುಡ್​ಗೆ ಎಂಟ್ರಿ ಕೊಟ್ಟ ನವ ಮುಖಗಳು

ಸ್ಟಾರ್ ಆಗ್ಬೇಕು ಅನ್ನೋ ಕನಸು ಹೊತ್ತು ಬಾಲಿವುಡ್ ಮೆಟ್ಟಿಲೇರುವವರಿಗೇನು ಕಮ್ಮಿಯಿಲ್ಲ. ಆದ್ರೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋಕೆ ಗಾಢ್ ಫಾದರ್ ಇರ್ಬೇಕು ಅನ್ನೋದನ್ನ ಈ ವರ್ಷವೂ ಸಾಬೀತಾಗಿದೆ. 2019ರಲ್ಲೂ ಬಾಲಿವುಡ್ ದಿಗ್ಗಜರ ಪುತ್ರಿಯರು ಸಹ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು ಅನ್ನೋದನ್ನ ಇಲ್ಲಿ ತಿಳಿಯಿರಿ.

ಸಾರಾ ಅಲಿಖಾನ್:
ಸಾರಾ ಅಲಿಖಾನ್. ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿಖಾನ್ ಹಾಗೂ ನಟಿ ಅಮೃತಾ ಸಿಂಗ್ ಪುತ್ರಿ. 2018 ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಾಲಿವುಡ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ರು. ಸುಶಾಂತ್ ಸಿಂಗ್ ರಜಪೂತ್ ಜೊತೆ ಸಾರಾ ಅಲಿಖಾನ್ ನಟಿಸಿದ ಕೇದಾರ್​ನಾಥ್ ಬಿಡುಗಡೆ ಗೊಂಡ ಮೊದಲ ಸಿನಿಮಾ.

ಸಾರಾ ಅಲಿಖಾನ್ ನಟಿಯಾಗ್ಬೇಕು ಅಂತ ಭಯಸಿದಾಗ 96 ಕೆಜಿ ತೂಕವಿದ್ದಳು. ಆಗ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಡಿಸಾರ್ಡರ್ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ರು. ಹೀಗಾಗಿ ದಿನದಿಂದ ದಿನಕ್ಕೆ ದೇಹದ ತೂಕ ಹೆಚ್ಚಾಗುತ್ತಲೇ ಇತ್ತು. ಮಗಳ ಆಸೆಯನ್ನ ಅರಿತಿದ್ದ ತಾಯಿ ಅಮೃತಾ ಸಿಂಗ್ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ರು. ಆಗಲೇ ಸಾರಾ ಅಲಿಖಾನ್ ದೇಹದ ತೂಕ ಇಳಿಸಿಕೊಳ್ಳಲು ಮುಂದಾದ್ರು.

ಕೇವಲ ಒಂದೂವರೆ ವರ್ಷದಲ್ಲಿ ಬರೊಬ್ಬರಿ 30ಕೆಜಿ ತೂಕ ಇಳಿಸಿಕೊಂಡ್ರು. ಒಂದಲ್ಲ ಎರಡು ಸಿನಿಮಾಗಳ ಮೂಲಕ ಬಾಲಿವುಡ್ ಮಂದಿ ಹುಬ್ಬೇರಿಸಿದ್ರು. ಕೇದರನಾಥ್ ಸಿನಿಮಾದ ಹಿಂದೆನೇ ಸ್ಟಾರ್ ನಟ ರಣ್ವೀರ್ ಸಿಂಗ್ ಜೊತೆ ನಟಿಸಿದ ಸಿಂಬಾ ಕೂಡ ರಿಲೀಸ್ ಆಗಿತ್ತು. ರೋಹಿತ್ ಶೆಟ್ಟಿ ನಿರ್ದೇಶಿಸಿದ ಸಿಂಬಾ ಬಾಲಿವುಡ್ ಬಾಕ್ಸಾಫೀಸ್ ಅನ್ನ ಚಿಂದಿ ಮಾಡಿತ್ತು. ಸದ್ಯ ಸಾರಾ ಅಲಿಖಾನ್ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಒಂದು ಸಿನಿಮಾ ಹಾಗೂ ಡೇವಿಡ್ ಧವನ್ ನಿರ್ದೇಶನದ ಕೂಲಿ ನಂಬರ್ 1 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅನನ್ಯ ಪಾಂಡೆ:
ಅನನ್ಯ ಪಾಂಡೆ. ಬಾಲಿವುಡ್ ಹಿರಿಯ ನಟ ಚುಂಕಿ ಪಾಂಡೆಯ ಪುತ್ರಿ. 21 ವರ್ಷದ ಅನನ್ಯ ಪಾಂಡೆ ಈ ವರ್ಷ ಬಾಲಿವುಡ್​ಗೆ ಭರ್ಜರಿ ಎಂಟ್ರಿಕೊಟ್ಟಿದ್ರು. ಕರಣ್ ಜೋಹರ್ ನಿರ್ಮಿಸಿದ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ರು. ಆದ್ರೆ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾ ಬಾಕ್ಸಾಫೀಸ್​ನಲ್ಲಿ ಸದ್ದು ಮಾಡ್ಲಿಲ್ಲ.

ಮೊದಲ ಸಿನಿಮಾದಲ್ಲಿ ಅನನ್ಯ ಪಾಂಡೇಗೆ ಯುವನಟ ಟೈಗರ್ ಶ್ರಾಫ್ ಸಾಥ್ ನೀಡಿದ್ರು. ಆದ್ರೂ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಗಳಿಕೆಯಲ್ಲಿ ಹಿಂದೆ ಬಿದ್ದಿತ್ತು. ಆದ್ರೆ, ಅನನ್ಯ ಪಾಂಡೆಗೆ ಎರಡನೇ ಸಿನಿಮಾ ಪತಿ ಪತ್ನಿ ಔರ್ ವೋ ಗೆಲುವು ತಂದುಕೊಟ್ಟಿದೆ. ಬಾಲಿವುಡ್​ನ ಯೂತ್ ಸ್ಟಾರ್ ಕಾರ್ತಿಕ್ ಆರ್ಯನ್ ಜೊತೆ ಅನನ್ಯ ಅಭಿನಯಿಸಿದ್ದರು. ಅನನ್ಯ ಪಾಂಡೆಯ ಪತಿ ಪತ್ನಿ ಔರ್ ವೋ 2019ರ ಬಾಲಿವುಡ್​ನ ಬೆಸ್ಟ್ ಸಿನಿಮಾಗಳಲ್ಲೊಂದು. ಈಗ ಅನನ್ಯ ಪಾಂಡೇ ಮೂರನೇ ಸಿನಿಮಾ ‘ಕಾಲಿ ಪೀಲಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಸಾಯಿ ಮಂಜ್ರೇಕರ್:
2019ರಲ್ಲಿ ಬಾಲಿವುಡ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ಸಾಯಿ ಮಂಜ್ರೇಕರ್. ಈಕೆ ಬಾಲಿವುಡ್​ನ ನಟ ಹಾಗೂ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವ್ರ ಪುತ್ರಿ. ಬಾಲಿವುಡ್​ನ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಟಿಸಿದ ದಬಾಂಗ್ ಮೂರನೇ ಚಾಪ್ಟರ್​ನಲ್ಲಿ ಸಾಯಿ ನಟಿಸಿದ್ದಾರೆ. ದಬಾಂಗ್ ಇದೇ ತಿಂಗಳು ವಿಶ್ವದಾದ್ಯಂತ ತೆರೆಕಂಡಿದೆ. ಪ್ರೇಕ್ಷಕರು ಸಾಯಿ ಮಂಜ್ರೇಕರ್ ಅಭಿನಯವನ್ನ ಹೊಗಳಿ ಕೊಂಡಾಡಿದ್ದಾರೆ.

ತಾರಾ ಸುತಾರಿಯಾ:
ಬಾಲಿವುಡ್ ಅಂಗಳದಲ್ಲಿ ಈ ವರ್ಷ ಗಮನ ಸೆಳೆದ ಮತ್ತೊಬ್ಬ ನಟಿ ತಾರಾ ಸುತಾರಿಯಾ. ಕರಣ್ ಜೋಹರ್ ನಿರ್ಮಾಣದ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರ ತಾರಾಳನ್ನ ಬಾಲಿವುಡ್ ಪರಿಚಯಿಸಿತು. ಬಾಲಿವುಡ್ ನಂಟು ಇರದೆ ಚಿತ್ರರಂಗಕ್ಕೆ ಧುಮುಕಿದ ತಾರಾ ಸುತಾರಿಯಾಗೆ ಬಾಲಿವುಡ್ ರೆಡ್ ಕಾರ್ಪೆಟ್ ಹಾಸಿದೆ. ಇದೇ ವರ್ಷ ತಾರಾ ನಟಿಸಿದ ಮತ್ತೊಂದು ಸಿನಿಮಾ ಮರ್ಜಾವಾ ತೆರೆಕಂಡಿತ್ತು. ಆದ್ರೆ, ಮರ್ಜಾವಾ ಕೂಡ ಸೋಲಿನ ಕಹಿ ತೋರಿಸಿತ್ತು. ಸದ್ಯ ತಾರಾ ತೆಲುಗಿನ ಆರ್​ಎಕ್ಸ್ 100 ರಿಮೇಕ್ ತಡಪ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಮೂಲಕ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಬಾಲಿವುಡ್ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ಪ್ರನೂತನ್ ಬೆಹಲ್:
ಈ ವರ್ಷ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ಸ್ಟಾರ್ ಕುಟುಂಬದ ನಟಿ ಪ್ರನೂತನ್ ಬೆಹಲ್. ಬಾಲಿವುಡ್​ನ ಪ್ರಖ್ಯಾತ ನಟಿ ನೂತನ್ ಅವರ ಮೊಮ್ಮಗಳು. ಪ್ರನೂತನ್ ತಂದೆ ಮೊಹ್ನಿಶ್ ಬೆಹಲ್ ಕೂಡ ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮತ್ತೊಬ್ಬ ಸ್ಟಾರ್ ನಟಿ ಕಾಜೋಲ್ ಈಕೆ ಸಂಬಂಧಿ. ಹೀಗಾಗಿ ಪ್ರನೂತನ್ ಬಾಲಿವುಡ್ ಎಂಟ್ರಿ ಸಹಜವಾಗಿ ಕುತೂಹಲ ಕೆರಳಿಸಿತ್ತು. ಅದ್ರಲ್ಲೂ ಬಾಲಿವುಡ್ ಸೂಪರ್​ಸ್ಟಾರ್ ಸಲ್ಮಾನ್ ಖಾನ್ ಬಾಲಿವುಡ್​ಗೆ ಪ್ರನೂತನ್ ಬೆಹಲ್​ರನ್ನ ಪರಿಚಯಿಸಲು ಮುಂದೆ ಬಂದಿದ್ರು. ಆ ಸಿನಿಮಾವೇ ನೋಟ್ ಬುಕ್.

ನೋಟ್​ಬುಕ್ ಸಿನಿಮಾ ಮೂಲಕ ಸಲ್ಮಾನ್ ಖಾನ್ ಮತ್ತೊಬ್ಬ ಹೊಸ ಪ್ರತಿಭೆಯನ್ನ ಪರಿಚಯಿಸಿದ್ರು. ಸಲ್ಲು ಗರಡಿಯಲ್ಲಿ ಬೆಳೆದ ಜಾಹೀರ್ ಇಕ್ಬಾಲ್ ಬಾಲಿವುಡ್​ಗೆ ನೋಟ್​ಬುಕ್ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ರು. ಜಾಹೀರ್, ಸಲ್ಮಾನ್ ಖಾನ್ ಬಾಲ್ಯದ ಗೆಳೆಯ ಈಕ್ಬಾಲ್ ರತ್ನಾಸಿಯ ಪುತ್ರ. ಸ್ವತ: ಸಲ್ಮಾನ್ ಖಾನ್ ಮುಂದೆ ನಿಂತು ನೋಟ್​ಬುಕ್ ಸಿನಿಮಾವನ್ನ ಪ್ರಚಾರ ಮಾಡಿದ್ರೂ ಬಾಕ್ಸಾಫೀಸ್​ನಲ್ಲಿ ಗೆಲ್ಲಲಿಲ್ಲ. 15 ಕೋಟಿ ವೆಚ್ಚದ ಸಿನಿಮಾ ಕೇವಲ 3 ಕೋಟಿ ಗಳಿಸಿತ್ತು. ಹೀಗಾಗಿ ಚೊಚ್ಚಲ ಸಿನಿಮಾದಲ್ಲೇ ಪ್ರನೂತನ್ ಬೆಹಲ್ ಸೋಲಿನ ಕಹಿ ಉಣ್ಣಬೇಕಾಯ್ತು. ಹೀಗಾಗಿ 2019ರಲ್ಲಿ ಬಾಲಿವುಡ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಯುವ ನಟಿಯರಲ್ಲಿ ಕೆಲವ್ರಿಗೆ ಸಿಹಿ ಮತ್ತೆ ಕೆಲವ್ರಿಗೆ ಕಹಿ ಸಿಕ್ಕಂತಾಗಿದೆ.

ಪ್ರಿಯಾ ಪ್ರಕಾಶ್ ವಾರಿಯರ್:
ಕಳೆದ ವರ್ಷ ಒಂದೇ ಒಂದು ಕಣ್ಸನ್ನೆಯಿಂದ ಕಣ್ಣು ಕುಕ್ಕಿದ ನಟಿ ಪ್ರಿಯಾ ವಾರಿಯರ್. ಈಕೆ ಕಣ್ಮಿಟುಕಿಸಿ ರಾತ್ರೋ ರಾತ್ರಿ ದೇಶಾದ್ಯಂತ ಪ್ರಿಯಾ ವಾರಿಯರ್ ಸೆನ್ಸೇಷನ್ ಸೃಷ್ಟಿಸಿದ್ದಳು. ಈಕೆ ನಟಿಸಿದ ಒರು ಅಡಾರ್ ಲವ್ ಸಿನಿಮಾನೂ ಬೇಜಾನ್ ಸದ್ದು ಮಾಡಿತ್ತು. ಕೇವಲ ಪಾತ್ರವಾಗಿದ್ದ ಪ್ರಿಯಾ ಕಣ್ಸನ್ನೆಯಿಂದ ಸ್ಟಾರ್ ಆಗ್ಬಿಟ್ಲು. ಈಕೆಗಾಗಿಯೇ ನಿರ್ದೇಶಕ ಓಮರ್ ಲುಲು ಹೊಸದಾಗಿ ಸ್ಕ್ರೀನ್ ಪ್ಲೇ ಬರೆದು ಹೊಸದಾಗಿ ಸಿನಿಮಾ ಚಿತ್ರೀಕರಿಸಿದ್ರು. ಪ್ರಿಯಾ ನ್ಯಾಷನಲ್ ಸೆನ್ಸೇಷನ್ ಆಗಿದ್ರಿಂದ ಒರು ಅಡಾರ್ ಲವ್ ಸಿನಿಮಾವನ್ನ ಕನ್ನಡ, ತಮಿಳು ತೆಲುಗು ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಯ್ತು.

ಒರು ಅಡಾರ್ ಲವ್ ಸಿನಿಮಾ ಮಲಯಾಳಂ ಸೇರಿದಂತೆ ಡಬ್ ಆದ ಮೂರು ಭಾಷೆಗಳಲ್ಲೂ ಚಮತ್ಕಾರ ಮಾಡಲಿಲ್ಲ. ಇಲ್ಲಿಗೆ ಪ್ರಿಯಾ ವಾರಿಯರ್ ಕಥೆ ಮುಗೀತು ಅಂದ್ಕೊಂಡಿದ್ರು. ಆದ್ರೆ ಪ್ರಿಯಾ ಮತ್ತೆ ಶ್ರೀದೇವಿ ಬಂಗ್ಲೆ ಕಥೆಯೊಂದು ಬಾಲಿವುಡ್​ಗೆ ಲಗ್ಗೆ ಇಟ್ಟು ಸದ್ದು ಮಾಡಿದ್ಲು. ಸದ್ಯ ಶ್ರೀದೇವಿ ಬಂಗ್ಲೇ ವಿವಾದದ ಸುಳಿಗೆ ಸಿಲುಕಿದೆ.

ಒಟ್ನಲ್ಲಿ 2019 ಕೇವಲ ಸ್ಯಾಂಡಲ್​ವುಡ್​ನಲ್ಲಷ್ಟೇ ಅಲ್ಲ. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಹೊಸ ಹೊಸ ನಟಿಯರ ಆಗಮನ ಆಗಿತ್ತು. ಬಣ್ಣ ಹಚ್ಚಿ ಅಭಿನಯಿಸಿದ ಬಹುತೇಕ ಎಲ್ಲಾ ನಟಿಯರೂ ಚಿತ್ರರಂಗದಲ್ಲಿ ನೆಲೆಕಂಡುಕೊಂಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more