ನೀರಿನಲೆಗಳ ನಡುವೆ ಫಾರಿನ್ ಅತಿಥಿಗಳು.. ಸಂಗಾತಿಗಳ ಜೊತೆಗೂಡಿ ಚೆಲ್ಲಾಟ!

ಗದಗ: ಅವ್ರೆಲ್ಲಾ ಫಾರಿನ್ ಅತಿಥಿಗಳು.. ವರ್ಷಕ್ಕೊಮ್ಮೆ ಈ ಕೆರೆಗೆ ಜಾಲಿ ಟ್ರಿಪ್ ಬರ್ತಾರೆ. ಸಂಗಾತಿಯೊಡಗೂಡಿ ಮಸ್ತಿ ಮಾಡ್ತಾರೆ. ತಾವು ಜಾಲಿ ಮಾಡೋದ್ರ ಜತೆಗೆ ಬಾನಂಗಳದಲ್ಲಿ ಚಿತ್ತಾರ ಮೂಡಿಸ್ತಾರೆ. ವಿಶೇಷ ಏನಂದ್ರೆ ಈಗ ಅವ್ರನ್ನ ನೋಡೋಕಂತಲೇ ನೂರಾರು ಜನ ಬರ್ತಾರೆ.

ಬಾನಂಗಳದಲ್ಲಿ ಬಾನಾಡಿಗಳ ಚಿತ್ತಾರ:
ವ್ಹಾವ್.. ತಮ್ಮದೇ ಲೋಕದಲ್ಲಿ ಹೀಗೆ ಸ್ವಚ್ಛಂದವಾಗಿ ವಿಹರಿಸ್ತಿರೋ ಪಕ್ಷಿಪ್ರಪಂಚವನ್ನ ನೋಡೋದೇ ಸುಂದರ. ಎಲ್ಲಿಂದಲೋ ಬಂದಿರೋ ಈ ಅಪರೂಪದ ಅತಿಥಿಗಳ ಆನಂದಕ್ಕಿಲ್ಲಿ ಪಾರವೇ ಇಲ್ಲ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೇರಿ ಗ್ರಾಮದ ಹೊರವಲಯದ ಕೆರೆಯಲ್ಲೀಗ ಈ ಬಾನಾಡಿಗಳದ್ದೇ ಕಲರವ. ಎರಡು ವರ್ಷಗಳ ಹಿಂದೆ ಜನ ಈ ಕೆರೆಯತ್ತ ಬರೋಕೆ ಹಿಂದೇಟು ಹಾಕ್ತಿದ್ರು. ಆದ್ರೆ, ವಿದೇಶಿ ಹಕ್ಕಿಗಳ ಕಲರವ ಜನ್ರು, ಪ್ರವಾಸಿಗರನ್ನು ಕೆರೆಯತ್ತ ಸುಳಿಯುವಂತೆ ಮಾಡಿದೆ. ಸತತ ಬರಗಾಲದಿಂದ ಕಂಗಾಲಾಗಿದ್ದ ಈ ಭಾಗದ ಜನ್ರಿಗೆ, ವಿದೇಶಿ ಹಕ್ಕಿಗಳ ಆಗಮನ ಖುಷಿ ನೀಡ್ತಿದೆ.

ನೀರಿನಲೆಗಳ ನಡುವೆ ಚಿಲಿಪಿಗಳ ಕಲರವ:
ಇನ್ನು ಈ ಕೆರೆಯಲ್ಲಿ ಬಾರ್ ಹೆಡೆಡ್ ಗೂಸಾ, ಬ್ರಾಹ್ಮಿಣಿ ಡೆಕ್, ಬ್ಯ್ಲಾಕ್ ಐಬೀಸ್, ಇಟಲ್ ಗಿಬ್ಸ್, ರೆಡ್ ಥ್ರಾಟ್, ಪಾಂಟೆಡ್ ಸ್ಪಾರ್ಕ್, ರೆಡ್ ವೆಟೆಡ್ ಸೇರಿದಂತೆ ಹಲವು ಜಾತಿಗೆ ಸೇರಿದ ಸಾವಿರಾರು ವಿದೇಶಿ ಪಕ್ಷಿಗಳು ಆಗಮಿಸಿವೆ. ವಿಶೇಷ ಅಂದ್ರೆ ಈ ಹಕ್ಕಿಗಳು ಇಲ್ಲಿಗೆ ಬರೋದೇ ಸಂತಾನೋತ್ಪತ್ತಿಗೆಂದು. ಹೀಗಾಗಿ ಈ ಕೆರೆಯಲ್ಲಿ ಪುಟ್ಟ ಪುಟ್ಟ ಪಕ್ಷಿಗಳ ಸಂಖ್ಯೆಯೂ ಹೆಚ್ಚಾಗಿವೆ. ಇನ್ನೊಂದು ವಿಶೇಷ ಅಂದ್ರೆ ದೊಡ್ಡ ಹಕ್ಕಿಗಳು ಬೆಳಗ್ಗೆ ಆಗ್ತಿದ್ದಂತೆ ಆಹಾರ ಹರಸಿ ಹಾರಿ ಹೋದ್ರೆ ಸಂಜೆ ಬಳಿಕವೇ ವಾಪಸ್ ಬರ್ತಾವೆ. ದೊಡ್ಡ ಪಕ್ಷಿಗಳು ಮರಳಿದ ವೇಳೆ ಮರಿಗಳ ಚಿಲಿಪಿಲಿ ಜೋರಾಗಿರುತ್ತೆ.

ಇನ್ನು ಈ ಕೆರೆ 700ಎಕರೆ ವಿಶಾಲವಾಗಿದ್ದು, 10 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಬೀಡು ಬಿಟ್ಟು ಎಂಜಾಯ್ ಮಾಡ್ತಿವೆ. ಸದ್ಯ ಬರಡಾಗಿದ್ದ ಕೆರೆ ತುಂಬಿದೆ. ಜನರೇ ಸುಳಿಯದ ಕೆರೆಯಲ್ಲಿ ಸಾವಿರಾರು ಪಕ್ಷಿಗಳ ನೋಟ ಎಲ್ಲರನ್ನೂ ಸೆಳೀತಿದೆ. ಎಲ್ಲಿಂದಲೋ ಬಂದಿರೋ ಬಾನಾಡಿಗಳು ತಮ್ಮದೇ ಲೋಕದಲ್ಲಿ ವಿಹರಿಸ್ತಿವೆ.


Related Posts :

Category:

error: Content is protected !!