ಮಾಜಿ‌ ಸ್ಪೀಕರ್‌ ಅನುಮಾನಾಸ್ಪದ ಸಾವು, ಬಂಜಾರಾ ಹಿಲ್ಸ್​​ ಪೊಲೀಸರಿಂದ ತನಿಖೆ‌ ಆರಂಭ

ಹೈದಾರಾಬಾದ್​: ಮಾಜಿ‌ ಸ್ಪೀಕರ್‌ ಡಾ. ಕೋಡಲ ಶಿವಪ್ರಸಾದ ಇಂದು ಮೃತಪಟ್ಟಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಹೈದರಾಬಾದಿನ ಬಂಜಾರಾ ಹಿಲ್ಸ್​​ ಠಾಣೆ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ.

ಡಿ.ಸಿ.ಪಿ. ಎ.ಆರ್. ಶ್ರೀನಿವಾಸ್​ ನೇತೃತ್ವದಲ್ಲಿ ಬಸವ ತಾರಕ‌ ಆಸ್ಪತ್ರೆಗೆ‌‌ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಒಂದು‌ ತಂಡ ಶಿವಪ್ರಸಾದ ಮನೆಗೆ‌ ಸಹ ಭೇಟಿ ನೀಡಿದೆ.

ಮೃತ ಆಂಧ್ರ ಪ್ರದೇಶ ಮಾಜಿ ಸ್ಪೀಕರ್‌ ಕೋಡಲ ಶಿವಪ್ರಸಾದ ಮೂಲತಃ ವೈದ್ಯರು, ಎಂ.ಬಿ.ಬಿ.ಎಸ್  ಮತ್ತು ಎಂ.ಎಸ್ ವ್ಯಾಸಂಗ‌ ಮಾಡಿದ್ದರು. ಬಡವರ ಪರ, ಸೇವಾ ಪರ, ಜನಪರ ವೈದ್ಯರೆಂದು ಹೆಸರಾಗಿದ್ದರು. ಮಾಜಿ ಸಿಎಂ ಎನ್.ಟಿ. ರಾಮರಾವ್ ಕರೆಯ ಮೇರೆಗೆ ರಾಜಕೀಯಕ್ಕೆ‌ ಧುಮುಕಿ, ಟಿಡಿಪಿ ಸೇರಿದ್ದರು. ಮುಂದೆ, 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಅವಿಭಜಿತ ಆಂಧ್ರಪ್ರದೇಶ ಸರ್ಕಾರದಲ್ಲಿ ವೈದ್ಯಕೀಯ ಸಚಿವರಾಗಿ ಸೇವೆ ಮಾಡಿದ್ದರು. ನೂತನ‌ ಆಂಧ್ರ ಸರ್ಕಾರದಲ್ಲಿ ಪ್ರಥಮ ಸ್ಪೀಕರ್ ಆಗಿದ್ದರು. ಇತ್ತೀಚಿನ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ನಂತರದಲ್ಲಿ ವೈಸಿಪಿ ನಾಯಕರಿಂದ ನಾನಾ‌ ರೀತಿ ಕಿರುಕುಳಕ್ಕೊಳಗಾದ ಆರೋಪ‌ ಕೇಳಿ ಬಂದಿತ್ತು.

ಟಿಡಿಪಿ ಸರ್ಕಾರವಿದ್ದಾಗ ಶಿವಪ್ರಸಾದ ಸ್ಪೀಕರ್ ಆಗಿದ್ದರು. ಟಿಡಿಪಿ‌‌ ನಾಯಕ ಚಂದ್ರಬಾಬು ನಾಯ್ಡು, ವೈಸಿಪಿಯ 23 ಶಾಸಕರನ್ನು ಪಕ್ಷಾಂತರ ಮಾಡಿಸಿದ್ದರು. ಆ ವೇಳೆ, ಸ್ಪೀಕರ್ ಶಿವಪ್ರಸಾದ ಟಿಡಿಪಿ ಪರ ತೀರ್ಮಾನ‌ ನೀಡಿದ್ದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!