ಸಿಬ್ಬಂದಿಗೆ ಸೋಂಕು, ಸ್ವಯಂ ಕ್ವಾರಂಟೈನ್‌ಲ್ಲಿ ದಿನೇಶ್‌ ಗುಂಡೂರಾವ್‌ ಕುಟುಂಬ

ಬೆಂಗಳೂರು: ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕುಟುಂಬ ಈಗ ಕೊರೊನಾ ಭಯದಲ್ಲಿದೆ. ಇದಕ್ಕೆ ಕಾರಣ ದಿನೇಶ್‌ ಗುಂಡೂರಾವ್‌ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರೋದು.

ಹೌದು ದಿನೇಶ್‌ ಗುಂಡೂರಾವ್‌ ಅವರ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್‌ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರೋದು ದೃಡವಾಗಿದೆ. ಹೀಗಾಗಿ ದಿನೇಶ್‌ ಗುಂಡೂರಾವ್‌ ಅವರ ಕುಟುಂಬ ಸದಸ್ಯರು ಕೊರೊನಾ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ.

ಕೊರೊನಾ ಟೆಸ್ಟ್‌ನಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ. ಎಲ್ಲರ ವರದಿ ನೆಗಟಿವ್‌ ಬಂದಿದೆ. ಆದ್ರೂ ನಿಯಮದಂತೆ ಕುಟುಂಬ ಸದಸ್ಯರೆಲ್ಲಾ ಕ್ವಾರಂಟೈನ್‌ನಲ್ಲಿದ್ದೇವೆ ಎಂದು ಸ್ವತಃ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

Related Tags:

Related Posts :

Category:

error: Content is protected !!