ದಿನಬೆಳಗಾದ್ರೆ ವರ್ಗಾವಣೆ ದಂಧೆ; ಬಿಜೆಪಿ ವಿರುದ್ಧ ಹರಿಹಾಯ್ದ ಹೆಚ್​ಡಿ ರೇವಣ್ಣ

ಹಾಸನ: ಪ್ರಧಾನಿ ಮೋದಿ ಅವ್ರು ನಮ್ಮ ಸರ್ಕಾರವನ್ನು 20 ಪರ್ಸೆಂಟ್ ಸರ್ಕಾರ ಎಂದು ಹೇಳುತ್ತಿದ್ರು. ಆದ್ರೆ ಇದೀಗ ದಿನ ಬೆಳಗಾದ್ರೆ ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಬಹುಶಃ ಈ ದಂಧೆಯಿಂದ ಬರುವ ಹಣವನ್ನೇ ನೆರೆ ಪರಿಹಾರಕ್ಕೆ ಕೊಡೋಕೆ ಕಾಯ್ತಿದ್ದಾರೆ ಎಂದು ಹೆಚ್​.ಡಿ.ರೇವಣ್ಣ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಒಂದು ಸಮಾಜದ ಅಧಿಕಾರಿಗಳನ್ನ ಗುರಿಯಾಗಿಸಿ ವರ್ಗಾವಣೆ ದಂಧೆ ನಡೆಯುತ್ತಿದೆ. ಹುದ್ದೆಗೆ ಬಂದ ಆರೇ ತಿಂಗಳಿಗೆ ಮಹಿಳಾ‌ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲೇ ಹೀಗೆ ನಡೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಹೆಚ್​ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಸರ್ಕಾರ ಏನಾದ್ರು ಪಾಪರ್ ಚೀಟಿ ತಗೊಂಡಿದ್ಯಾ? ಅಥವಾ ಸರ್ಕಾರ ದಿವಾಳಿ ಆಗಿದ್ಯಾ ಅಂತ ಘೋಷಣೆ ಮಾಡಲಿ. ಬಿಜೆಪಿ ಸರ್ಕಾರ ನೆರೆ‌ಹಾನಿಗೆ ಪರಿಹಾರ ನೀಡುತ್ತಿಲ್ಲ. ವರ್ಗಾವಣೆ ದಂಧೆಯಾದ್ರೂ ಮಾಡ್ಲಿ, ಏನಾದ್ರು ಮಾಡ್ಲಿ ಮೊದಲು ನೆರೆ ಹಾನಿಗೆ ಪರಿಹಾರ ನೀಡ್ಲಿ.  ಈ ಕುರಿತು ಕೂಡಲೆ ವಿಧಾನಸಭೆ ಅಧಿವೇಶನ ಕರೆದು, ನೆರೆ ಹಾನಿ ಬಗ್ಗೆ ಸಮಗ್ರ ಚರ್ಚೆ ಮಾಡಿ ಎಂದು ಹೆಚ್.​ಡಿ.ರೇವಣ್ಣ ಆಗ್ರಹಿಸಿದ್ದಾರೆ.

ದೋಸ್ತಿ ಸರ್ಕಾರ ಅಧಿಕಾರದಲ್ಲಿದ್ದಾಗ ಹೆಚ್​.ಡಿ.ರೇವಣ್ಣ ವಿರುದ್ಧವೇ ವರ್ಗಾವಣೆ ದಂಧೆ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದವು. ಆದ್ರೆ ಇದೀಗ ಮಾಜಿ ಸಚಿವ ಹೆಚ್.​ಡಿ.ರೇವಣ್ಣ ಅವರೇ ಬಿಜೆಪಿ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡ್ತಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!