‘ವಿಧಾನಸೌಧದಲ್ಲಿ ಸಾಚಾ ಅಂತೀಯ! ನೋಡಿದ್ರೆ ಸರ್ಕಾರಿ ಜಮೀನೇ ನುಂಗಿದ್ದೀಯ!?’

ಕೋಲಾರ: ವಿಧಾನಸೌಧದಲ್ಲಿ ನಾನು ಸಾಚಾ, ಬಡವ ಅಂತಾ ಮಾತಾಡ್ತೀಯ. ಪ್ರಾಮಾಣಿಕ, ಸತ್ಯ ಹರಿಶ್ಚಂದ್ರ ಅಂತಾ ಮಾತಾಡಿ ತಾಲೂಕಿನ ಜನರನ್ನು ವಂಚಿಸಿದ್ದೀಯ. ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರೋ ನಿನಗೆ ನಾಚಿಕೆ ಇದ್ಯಾ? ನಿನಗೆ ತಾಕತ್ ಇದ್ರೆ ಜೈಲಿಗೆ ಅಲ್ಲ, ನನ್ನನ್ನ ಗಲ್ಲಿಗೆ ಹಾಕಿಸು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಕಿಡಿಕಾರಿದ್ದಾರೆ.

ಪುತ್ರ ಹರ್ಷ ಹೆಸರಿನಲ್ಲಿ ಬೆಂಗಳೂರಿನ ಥಣಿಸಂದ್ರ, ಹೆಗ್ಗಡೆ ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆ ನಿರ್ಮಾಣ ಮಾಡಿದ್ದೀಯ. ಇಂದಿರಾ ನಗರದಲ್ಲಿ ಕೋಟ್ಯಂತರ ರೂ. ಮೌಲ್ಯದ ಶಾಪಿಂಗ್ ಕಾಂಪ್ಲೆಕ್ಸ್ ಇದೆ. ಅಕ್ರಮವಾಗಿ ಸರ್ಕಾರಿ ಅಧಿಕಾರಿಗಳನ್ನ ಬೆದರಿಸಿ ಜಮೀನು ಕಬಳಿಸಿದ್ದೀಯ. ನಿನಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ತಿಕುಂಟೆ ಕೊಲೆ ಕೇಸ್​ನಲ್ಲಿ ಆರೋಪಿ?:
ರಮೇಶ್ ಕುಮಾರ್ ಕಪಟ ನಾಟಕದಾರಿ. ಅತ್ತಿಕುಂಟೆಯ ಅಡ್ಡಗಲ್ ಶ್ಯಾಮಸುಂದರ ರೆಡ್ಡಿ ಕೊಲೆ ಕೇಸ್​ನಲ್ಲಿ ರಮೇಶ್ ಕುಮಾರ್ 11ನೇ ಆರೋಪಿಯಾಗಿದ್ದರು. ತನ್ನ ಪ್ರಭಾವ ಬಳಸಿ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿಸಿ ತನ್ನ ಹೆಸರನ್ನು ತೆಗೆದು ಹಾಕಿಸಿದ್ದಾರೆ ಎಂದು ವೆಂಕಟಶಿವಾರೆಡ್ಡಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಜ.9ರಂದು ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್​ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!