ಮತ್ತದೇ ವಲಸೆ ಕಾರ್ಮಿಕರ ದುರಂತ: ಪಾಳು ಬಾವಿಗೆ ಬಿದ್ದು ನಾಲ್ವರು ಆತ್ಮಹತ್ಯೆ

ಹೈದರಾಬಾದ್: ತೆಲಂಗಾಣದ ವರಂಗಲ್ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ಘಟನೆಯೊಂದು ನಡದಿದೆ. ಬಳಕೆಯಲ್ಲಿ ಇಲ್ದಲ ಪಾಳು ಬಾವಿಗೆ ಬಿದ್ದು ನಾಲ್ವರು ವಲಸೆ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರಂಗಲ್ ಜಿಲ್ಲೆಯ ಗೊಲ್ಲಕುರ್ರಕುಂಟ ಗ್ರಾಮದಲ್ಲಿ ಕೋಲ್ಡ್ ಸ್ಟೋರೇಜ್ ವೊಂದರ ಮುಂದೆ ಇದ್ದ ಬಾವಿಯಲ್ಲಿ ಬಿದ್ದು ನಾಲ್ವರು ವಲಸೆ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನ ಸಾಗಿಸಲೆಂದು ವರಂಗಲ್ ಜಿಲ್ಲೆಯ ಗೊರ್ರಕುಂಟಕ್ಕೆ ಬಂದಿದ್ದ ಪಶ್ಚಿಮ‌ ಬಂಗಾಳದ ವಲಸೆ ಕಾರ್ಮಿಕರು ಇವರು. ಸ್ಥಳೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಲಾಕ್ ಡೌನ್ ಕಾರಣ ಆರ್ಥಿಕ ಸಮಸ್ಯೆಗಳುಂಟಾಗಿದ್ದು, ಸ್ವಂತ ಊರಿಗೆ ಹೋಗಲು ಮನಸ್ಸಿಲ್ಲದೇ, ಈ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವರಂಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Related Posts :

Category:

error: Content is protected !!