ಬ್ರೆಜಿಲ್​ ಆಮದು ಮಾಂಸದಲ್ಲಿ ಕೊರೊನಾ ಪತ್ತೆಯಾಗಿದೆ ಎಂದ ಚೀನಾ! ಮುಂದೇನು?

ಚೀನಾದ ವುಹಾನ್​ನಲ್ಲಿ ಹುಟ್ಟಿ ಇಡೀ ವಿಶ್ವವನ್ನೇ ನಲುಗುವಂತೆ ಮಾಡಿದ ಕೊರೊನಾ ವೈರಸ್ ಮನುಷ್ಯರನ್ನಷ್ಟೇ ಅಲ್ಲದೆ ಪ್ರಾಣಿಗಳಿಗೂ ಹರಡಿದೆ ಎಂಬ ಆತಂಕಕಾರಿ ಸಂಗತಿ ವರದಿಯಾಗಿದೆ. ಇದರಂತೆ ಈಗ ಚೀನಾ ನಗರದ ಶೆನ್‌ಝೆನ್​ನಲ್ಲಿನ ಗ್ರಾಹಕರು ಆಮದು ಮಾಡಿಕೊಳ್ಳುವ ಮಾಂಸವನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ  ಸ್ಥಳೀಯ ಆಡಳಿತ ತಿಳಿಸಿದೆ.

ಬ್ರೆಜಿಲ್​ನಿಂದ ಆಮದು ಮಾಡಿಕೊಂಡಿದ್ದ ಮಾಂಸದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಚೀನಾ ಹೇಳಿದೆ. ಅಲ್ಲದೆ ಚೀನಾದ ಶೆನ್‌ಝೆನ್​ಗೆ ಬ್ರೆಜಿಲ್​ನಿಂದ ಆಮದು ಮಾಡಿಕೊಂಡಿದ್ದ ಚಿಕನ್​ ಸೀಫುಡ್​ನನ್ನು ಕೆಲ ತಿಂಗಳಿನಿಂದ ಅಲ್ಲಿಯ ಸ್ಥಳೀಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದರ ಭಾಗವಾಗಿ ಬ್ರೆಜಿಲ್​ನಿಂದ ಇಂಪೋರ್ಟ್ ಮಾಡಿಕೊಳ್ಳಲಾದ ಚಿಕನ್ ವಿಂಗ್ಸ್​ನ ಕೊರೊನಾ ಟೆಸ್ಟ್​ಗೆ ಒಳಪಡಿಸಿದಾಗ ಅದರಲ್ಲಿ ಕೊರೊನಾ ಸೋಂಕು ಇರುವುದು ದೃಢವಾಗಿದೆ ಎಂದು ಅಲ್ಲಿಯ ಆಡಳಿತ ಮಂಡಳಿ ತಿಳಿಸಿದೆ.

ನೋಂದಣಿ ಸಂಖ್ಯೆಯ ಪ್ರಕಾರ ಕೋಳಿ ಮಾಂಸವು ದಕ್ಷಿಣ ರಾಜ್ಯ ಸಾಂಟಾ ಕ್ಯಾಟರಿನಾದ ಅರೋರಾ ಅಲಿಮೆಂಟೋಸ್ ಸ್ಥಾವರದಿಂದ ಬಂದಿದೆ. ಉತ್ಪನ್ನದೊಂದಿಗೆ ಸಂಪರ್ಕಕ್ಕೆ ಬಂದಿರುವ ಸಿಬ್ಬಂದಿ ಹಾಗೂ ಕೊರೊನಾ ಸೋಂಕಿತ ಚಿಕನ್ ಬಳಿ ಇರಿಸಲಾದ ಆಹಾರ ಪದಾರ್ಥಗಳನ್ನು ಟೆಸ್ಟ್​ಗೆ ಒಳಪಡಿಸಲಾಗಿದೆ. ಆದರೆ ವರದಿ ನೆಗೆಟಿವ್ ಬಂದಿದೆ. ಆದರೂ ಆಮದು ಮಾಡಿಕೊಳ್ಳಲಾದ ಮಾಂಸ ಸೀಫುಡ್ ಬಳಕೆ ಮಾಡುವಾಗ ಎಚ್ಚರದಿಂದ ಇರಲು ಹಾಗೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಇಲ್ಲಿಯ ಸರ್ಕಾರ ತಿಳಿಸಿದೆ.

Related Tags:

Related Posts :

Category: