ಡಿ. 1 ರವರೆಗೆ ಮತ್ತೆ ಲಾಕ್​ಡೌನ್ ಜಾರಿ, 2 ರಾಷ್ಟ್ರಗಳಲ್ಲಿ ಮತ್ತೆ ಅಪ್ಪಳಿಸಿದ ಕೊರೊನಾ, ಜನ ತತ್ತರ

  • sadhu srinath
  • Published On - 12:54 PM, 29 Oct 2020

ಮಹಾಮಾರಿ ಕೊರೊನಾ ತನ್ನ ರಣಕೇಕೆಯನ್ನು ಕಡಿಮೆ ಮಾಡಿಲ್ಲ. ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣಿಸಿದ ಜನರ ದೇಹವನ್ನು ಸೇರುತ್ತಿದೆ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿ 2ನೇ ಹಂತದಲ್ಲಿ ಕೊರೊನಾ ಅಲೆ ಅಪ್ಪಳಿಸಿದೆ. ಹೀಗಾಗಿ ಈ ಎರಡೂ ರಾಷ್ಟ್ರಗಳಲ್ಲಿ ಮತ್ತೆ ಎರಡನೇ ಹಂತದ ಲಾಕ್​ಡೌನ್ ಜಾರಿಯಾಗಿದೆ.

ಡಿಸೆಂಬರ್ 1 ರವರೆಗೆ ಮತ್ತೆ ಲಾಕ್​ಡೌನ್ ಜಾರಿ
ನವೆಂಬರ್ 2 ರಿಂದ 30 ರವರಗೆ ಲಾಕ್​ಡೌನ್ ಜಾರಿ ಮಾಡಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಘೋಷಣೆ ಮಾಡಿದ್ದಾರೆ. ಆದರೆ ಲಾಕ್​ಡೌನ್ ವೇಳೆಯೂ ಶಾಲೆಗಳು ತೆರೆದಿರುತ್ತವೆ ಎಂದಿದ್ದಾರೆ. ಇನ್ನು ಫ್ರಾನ್ಸ್​ನಲ್ಲಿ ನಿತ್ಯ 36 ಸಾವಿರ ಹೊಸ ಕೊರೊನಾ ಕೇಸ್​ಗಳು ಪತ್ತೆಯಾಗುತ್ತಿವೆ. ಇದರಿಂದಾಗಿ ಅಧ್ಯಕ್ಷ ಇಮ್ಯೂನ್ಯುಯಲ್ ಮಾಕ್ರನ್ ಡಿಸೆಂಬರ್ 1 ರವರೆಗೆ ಮತ್ತೆ ಲಾಕ್​ಡೌನ್ ಜಾರಿ ಮಾಡಿದ್ದಾರೆ.