32 ಲಕ್ಷ ಮೌಲ್ಯದ ಚಿನ್ನ ಮೈಗೆ ಮೆತ್ತಿಕೊಂಡು ದುಬೈನಿಂದ ಹಾರಿ ಬಂದ ಭೂಪ.. ಕೊನೆಗೆ ಏನಾದ?

  • sadhu srinath
  • Published On - 10:36 AM, 29 Oct 2020

ಮಂಗಳೂರು:ಇಲ್ಲೊಬ್ಬ ಭೂಪ ಲಕ್ಷಾಂತರ ಮೌಲ್ಯದ ಚಿನ್ನ ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ನೀಡಿದ್ದಾನೆ. ಏನಿಲ್ಲಾ ಸಿಂಪಲ್ಲಾಗಿ 24 ಕ್ಯಾರೆಟ್ ನ 614 ಗ್ರಾಂ ಚಿನ್ನವನ್ನು ಪುಡಿಪುಡಿ ಮಾಡಿ, ಮೈಗೆಲ್ಲಾ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಸ್ಪೈಸ್ ವಿಮಾನದ ಮೂಲಕ ಹಾರಿ ಬಂದಿದ್ದಾನೆ.

ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ಧರಿಸಿದ ಭೂಪ!
ಆದ್ರೆ ಹೀಗೆ ಚಿನ್ನದ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಚಿನ್ನವನ್ನು ಪೌಡರ್ ರೂಪದಲ್ಲಿ ಮಾರ್ಪಾಟು ಮಾಡಿ ಅನುಮಾನ ಬಾರದಂತೆ ದೇಹಕ್ಕೇ ಚಿನ್ನವನ್ನು ಲೇಪಿಸಿಕೊಂಡು ಬಂದಿದ್ದ. ಹೀಗೆ ಬಂದಿದ್ದ ಆರೋಪಿಯ ದೇಹದಿಂದ 24 ಕ್ಯಾರೆಟ್ ನ 614 ಗ್ರಾಂ ತೂಕದಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 32,96,300 ರೂಪಾಯಿಯಷ್ಟಿದೆ ಎಂದು ಅಂದಾಜಿಸಲಾಗಿದೆ.