BREAKING NEWS
India vs Australia, 2nd ODI, LIVE Score: ಫಿಂಚ್-ವಾರ್ನರ್ ಭರ್ಜರಿ ಜೊತೆಯಾಟ

ಲಾಕ್​ಡೌನ್ ಬಳಿಕ ಮೊದಲ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ, ಇಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡಿರುವ ಭಾರತಕ್ಕೆ ಇಂದಿನ ಆಟವನ್ನು ಗೆಲ್ಲಲೇಬೇಕಾದ ಒತ್ತಡವಿದೆ‌. ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಇರುವ ಭಾರತವು, ಸರಣಿ ಸಮಬಲ ಕಾಯ್ದುಕೊಳ್ಳಲು ಹೋರಾಡಬೇಕಿದೆ. ಗೆಲ್ಲುವ ಉತ್ಸಾಹದಲ್ಲಿ ಕೊಹ್ಲಿ-ಫಿಂಚ್ ಪಡೆ! ಮೊದಲ ಪಂದ್ಯದ ತಪ್ಪುಗಳನ್ನು ಮತ್ತೆ ಮರುಕಳಿಸದೆ, ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿ ಕೊಹ್ಲಿ

x

ಪುಷ್ಪರಥದ ಬದಲಿಗೆ ಕೊಲ್ಲೂರಿನಲ್ಲಿ ಚಿನ್ನದ ರಥೋತ್ಸವ: ಶಾಸಕರ ನಿರ್ಧಾರಕ್ಕೆ ಹಲವರ ಬೇಸರ

  • KUSHAL V
  • Published On - 17:14 PM, 25 Oct 2020

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪುಷ್ಪರಥದ ಬದಲಿಗೆ ಚಿನ್ನದ ರಥದಲ್ಲಿ ಮೆರವಣಿಗೆ ನಡೆಸಲಾದ ಹಿನ್ನೆಲೆಯಲ್ಲಿ ಹಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾನವಮಿ ಪ್ರಯುಕ್ತ ಶನಿವಾರ ರಾತ್ರಿ ನಡೆದ ಉತ್ಸವದಲ್ಲಿ ಸಂಪ್ರದಾಯದಂತೆ ಪುಷ್ಪರಥವನ್ನು ಸಜ್ಜುಗೊಳಿಸಲಾಗಿತ್ತು. ಆದರೆ, ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಸೂಚನೆಯಂತೆ ಅದರ ಬದಲಿಗೆ ಚಿನ್ನದ ರಥದಲ್ಲಿ ರಥೋತ್ಸವ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ. ಹಾಗಾಗಿ, ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯದಂತೆ ರಥೋತ್ಸವ ಮಾಡಿಲ್ಲವೆಂದು ಕೆಲವರು ತಮ್ಮ ಅಸಮಾಧಾನ ತೋಡಿಕೊಂಡರು.

ಸುಕುಮಾರ ಶೆಟ್ಟಿ ಈ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಶಾಸಕರ ಕಾಲದಲ್ಲಿ ಚಿನ್ನದ ರಥವೊಂದು ದೇವಾಲಯಕ್ಕೆ ಅರ್ಪಣೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಚಿನ್ನದ ರಥವನ್ನು ಬಳಸಲು ಶಾಸಕರು ಸೂಚನೆ ನೀಡಿದ್ದರು. ಹಾಗಾಗಿ, ಸಂಪ್ರದಾಯ ಬದಲಾಯಿಸಿದ ಬಗ್ಗೆ ಹಲವರು ಬೇಸರಗೊಂಡಿದ್ದರು. ಆದರೆ, ಇದೆಲ್ಲದರ ನಡುವೆಯೂ ಚಿನ್ನದ ರಥೋತ್ಸವ ಸುಸೂತ್ರವಾಗಿ ನೆರವೇರಿತು ಎಂದು ಹೇಳಲಾಗಿದೆ.