ಯಾದಗಿರಿಯಲ್ಲಿ ಪ್ಲಾಟ್​ಫಾರ್ಮ್ ಹತ್ತಿದ ಗೂಡ್ಸ್ ರೈಲು, ಮುಂದೇನಾಯ್ತು?

ಯಾದಗಿರಿ: ನಗರದಲ್ಲಿ ಬೆಳಗ್ಗೆ ಬೆಳಗ್ಗೆಯೇ ಭಾರೀ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಯಾದಗಿರಿ ರೈಲ್ವೆ ನಿಲ್ದಾಣದಲ್ಲಿಯೇ ಈ ಘಟನೆ ನಡೆದಿದ್ದು, ಗೂಡ್ಸ್ ರೈಲೊಂದು ಟ್ರ್ಯಾಕ್ ಬಿಟ್ಟು ಪ್ಲಾಟ್ ಫಾರ್ಮ್ ಮೇಲೆ ಹತ್ತಿಕೊಂಡು ಹೋಗಿದೆ.

ಈ ರೈಲು, ಪ್ಲಾಟ್ ಫಾರ್ಮ್ ಮೇಲಿದ್ದ ಬುಕ್ ಸ್ಟಾಲ್ ಅನ್ನು 10 ಅಡಿಯಷ್ಟು ದೂರ ತಳ್ಳಿಕೊಂಡು ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಗೆ ಸ್ಥಳದಲ್ಲಿ ರೈಲ್ವೆಯ ಪಾಯಿಂಟ್ ಯಾರೂ ಇಲ್ಲದ ಕಾರಣ ಈ ಅಚಾತುರ್ಯ ಘಟಿಸಿದೆ ಎಂದು ಹೇಳಲಾಗುತ್ತಿದೆ. ಗೂಡ್ಸ್ ರೈಲು ಖಾಲಿ ಮಾಡುವಾಗ ಈ ಘಟನೆ ನಡೆದಿದೆ.
ಸ್ಥಳಕ್ಕೆ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Related Tags:

Related Posts :

Category: