ಭಾರತದಲ್ಲಿ ಡಿಜಿಟಲ್​ ಕ್ರಾಂತಿ: ಗೂಗಲ್‌ನಿಂದ 75,000 ಕೋಟಿ ರೂ. ಹೂಡಿಕೆ

ದೆಹಲಿ: ಪ್ರಧಾನಿ ಮೋದಿ ಡಿಜಿಟಲ್‌ ಇಂಡಿಯಾ ಅಭಿಯಾನ ಶುರು ಮಾಡುವ ಮೂಲಕ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಯಿತು. ಇದೀಗ, ಗೂಗಲ್​ ಸಂಸ್ಥೆಯು ಸಹ ಈ ಅಭೀಯಾನದಲ್ಲಿ ಕೈಜೋಡಿಸಲು ಮುಂದಾಗಿದೆ.

ಗೂಗಲ್​ ಸಂಸ್ಥೆಯ CEO ಸುಂದರ್ ಪಿಚೈ ತಮ್ಮ ಕಂಪನಿಯ ವತಿಯಿಂದ ಮುಂದಿನ 5-7 ವರ್ಷದಲ್ಲಿ ಬರೋಬ್ಬರಿ ಒಂದು ಬಿಲಿಯನ್​ ಡಾಲರ್ ಅಥವಾ 75,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸುಂದರ್​ ಪಿಚೈ ತಮ್ಮ ಸಂಸ್ಥೆ ವತಿಯಿಂದ ಪ್ರಾರಂಭಿಸಿರುವ ಗೂಗಲ್​ ಫಾರ್​ ಇಂಡಿಯಾ ಡಿಜಿಟೈಸೇಷನ್​ ಫಂಡ್​ ಮೂಲಕ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಈ ಬೃಹತ್​ ಮೊತ್ತ ಭಾರತದಲ್ಲಿ ಡಿಜಿಟಲೀಕರಣವನ್ನು Next Level ಗೆ ಕೊಂಡೊಯ್ಯಲು ಸಹಕಾರಿ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.

Related Tags:

Related Posts :

Category:

error: Content is protected !!