ಚಿಕಿತ್ಸೆ ಸಿಗದೆ ಸರ್ಕಾರಿ ನೌಕರ ಸಾವು

ಬೆಂಗಳೂರು: ಚಿಕಿತ್ಸೆ ಸಿಗದೆ ಕೊರೊನಾ ಶಂಕಿತ ಸರ್ಕಾರಿ ನೌಕರ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಮಾರಸ್ವಾಮಿ(58) ಮೃತ ದುರ್ದೈವಿ. ಇವರು ಅಬಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಮೃತ ಕುಮಾರಸ್ವಾಮಿ ಇಂದು ಬೆಳಗ್ಗೆ ಮನೆಯ ಬಳಿ ಕುಸಿದು ಬಿದ್ದಿದ್ದರು. ಕುಟುಂಬಸ್ಥರು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅವರನ್ನು ವಿಕ್ಟೋರಿಯಾಗೆ ಕರೆದೊಯ್ಯಲು ಸೂಚಿಸಿದ್ದಾರೆ. ಹೀಗಾಗಿ ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬೆಡ್​ಗಳು ಖಾಲಿ‌ ಇಲ್ಲದ ಹಿನ್ನೆಲೆಯಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ವ್ಯಕ್ತಿ ಮೃತಪಟ್ಟಿದ್ದಾರೆ.

Related Tags:

Related Posts :

Category:

error: Content is protected !!