ಶಾಲಾ ಆವರಣದಲ್ಲಿ ಕೆಟ್ಟು ನಿಂತಿದ್ದ ಸರ್ಕಾರಿ ಜೀಪ್ ಏಕಾಏಕಿ ಬೆಂಕಿಗಾಹುತಿ!

ಬೆಳಗಾವಿ: ಕೆಟ್ಟು ನಿಂತಿದ್ದ ಸರ್ಕಾರಿ ಜೀಪ್ ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದಿದೆ. ಸರ್ಕಾರಿ ಜೀಪ್ ಒಂದು ಹಲವು ದಿನಗಳಿಂದ ಶಾಲೆ ಆವರಣದಲ್ಲಿಯೇ ಕೆಟ್ಟು ನಿಂತಿತ್ತು. ಆದರೆ ಇಂದು ಬೆಳ್ಳಂಬೆಳ್ಳಗ್ಗೆ ಏಕಾಏಕಿ ಜೀಪು ಬೆಂಕಿಗೆ ಹತ್ತಿ ಉರಿದಿದೆ.

ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಈ ರೀತಿ ಕೆಟ್ಟು ನಿಂತ ಜೀಪು ಬೆಂಕಿಗಾಹುತಿಯಾಗಲು ಏನು ಕಾರಣ ಅಥವಾ ಯಾರಾದರೂ ಬೇಕು ಎಂದೇ ಬೆಂಕಿ ಹಚ್ಚಿದ್ದಾರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಈ ಪ್ರಕರಣ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

Related Tags:

Related Posts :

Category:

error: Content is protected !!