ಕ್ಲಾಸ್ ಇಲ್ಲ ಅಂದರೂ ಸ್ಕೂಲ್ ಫೀಸ್ ಕಟ್ಟಿ, ಶುಲ್ಕ ಪಾವತಿಗೆ ಸರ್ಕಾರದಿಂದ ಅಧಿಕೃತ ಆದೇಶ

  • TV9 Web Team
  • Published On - 7:01 AM, 6 Sep 2020

ಬೆಂಗಳೂರು: ಕೊರೊನಾ ರಣಕೇಕೆಯಿಂದಾಗಿ ಸ್ಕೂಲ್ ತೆರೆಯಲು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಒಂದು ವೇಳೆ ಸ್ಕೂಲ್ ಓಪನ್ ಆದ್ರೂ ಬಹುತೇಕ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿಲು ತಯಾರಿಲ್ಲ. ಮಕ್ಕಳಿಗೆ ಕೇವಲ ಆನ್‌ಲೈನ್ ಕ್ಲಾಸ್ ಮಾತ್ರ ಅಂಟೆಂಡ್ ಮಾಡಿಸ್ತಯಿದ್ದಾರೆ. ಈ ಮಧ್ಯೆ ಸರ್ಕಾರದ ಒಂದು ಆದೇಶ ಪೋಷಕರನ್ನ ಇಕ್ಕಟ್ಟಿಗೆ ಸಿಲುಕಿಸಿದೆ.

ಡೆಡ್ಲಿ ವೈರಸ್ ಕೊರೊನಾ ಅಟ್ಟಹಾಸದಿಂದ ಈ ವರ್ಷ ಶಾಲೆಗಳನ್ನ ತೆರೆದಿಲ್ಲ. ಅನ್‌ಲಾಕ್‌ 4ನಲ್ಲಾದ್ರೂ ಶಾಲೆಗಳು ತೆರೆಯಬಹುದು ಅಂತಾ ಅಂದುಕೊಂಡಿದ್ದವರ ಊಹೆಯೂ ಸುಳ್ಳಾಗಿದೆ. ಯಾಕಂದ್ರೆ ಕೊರೊನಾ ವೈರಸ್‌ನ ಆರ್ಭಟ ಇನ್ನೂ ನಿಂತಿಲ್ಲ. ಹಾಗಾಗಿ ಸರ್ಕಾರ ಆನ್‌ಲೈನ್ ಕ್ಲಾಸ್ ಮಾತ್ರ ನಡೆಸಿ, ಸದ್ಯಕ್ಕೆ ಶಾಲೆ ತೆರೆಯೋದು ಬೇಡ ಎಂದು ಸೂಚಿಸಿದೆ. ಆದ್ರೆ ಶುಲ್ಕದ ವಿಚಾರದಲ್ಲಿ ಮಾತ್ರ ಸರ್ಕಾರ ತೆಗೆದುಕೊಂಡಿರೋ ತೀರ್ಮಾನವೇ ಬೇರೆ.

ದಾಖಲಾತಿ ಪೂರ್ತಿಗೊಳಿಸಲು ಶಾಲೆಗಳಿಗೆ ಸೂಚನೆ
ಕೊರೊನಾದಿಂದಾಗಿ ಶಾಲೆಗಳು ಇನ್ನೂ ಬಂದ್ ಆಗಿವೆ. ಆದ್ರೆ ಶಿಕ್ಷಣ ಇಲಾಖೆ ಮಾತ್ರ ಪ್ರಸಕ್ತ ಸಾಲಿನ ಶೈಕ್ಷಣಿಕ ದಾಖಲಾತಿಗಳನ್ನ ಮುಗಿಸಲು ಗಡುವು ನೀಡಿದೆ. ಈ ತಿಂಗಳಾಂತ್ಯದೊಳಗೆ ದಾಖಲಾತಿ ಮುಗಿಸಲು ಸೂಚನೆ ನೀಡಿ, ಈ ಮೂಲಕ ಪೋಷಕರಿಗೆ ಬಿಗ್ ಶಾಕ್ ನೀಡಿದೆ.

ಶಾಲಾ ಶುಲ್ಕ ಹೆಚ್ಚಳ ಮಾಡ್ಬೇಡಿ. ಆದ್ರೆ ಶಾಲಾ ಶುಲ್ಕವನ್ನ ಹಿಂದಿನ ವರ್ಷಕ್ಕಿಂತ ಕಡಿಮೆ ಮಾಡಿ, ಮೊದಲ ಹಂತದ ಫೀಸ್ ಮಾತ್ರ ಕಟ್ಟಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಸರ್ಕಾರದಿಂದ ಅನುಮತಿ ಸಿಗುತ್ತಿದ್ದಂತೆ ಖಾಸಗಿ ಶಾಲೆಗಳು ಶುಲ್ಕ ಪಡೆಯಲು ಸಜ್ಜಾಗಿವೆ.

ಈಗಾಗಲೇ ಆನ್‌ಲೈನ್ ಶಿಕ್ಷಣದ ಹೆಸರಲ್ಲಿ ಫೀಸ್ ವಸೂಲಿ!
ಆನ್‌ಲೈನ್ ಶಿಕ್ಷಣದ ಹೆಸರಲ್ಲಿ ಈಗಾಗಲೇ ಬಹುತೇಕ ಶಾಲೆಗಳು ಫೀಸ್ ಪಡೆದಿದೆ. ಇದೀಗ ಆನ್ ಲೈನ್ ಶಿಕ್ಷಣಕ್ಕಾಗಿ ಪಡೆದಿರೊ ಫೀಸ್ ಹೊರತುಪಡಿಸಿ, ಉಳಿಕೆ ಹಣ ಪಡೆಯಲಿದೆಯಾ? ಅಥವಾ ಆನ್‌ಲೈನ್ ಶಿಕ್ಷಣ ಬಿಟ್ಟು, ವಾರ್ಷಿಕ ಫೀಸ್ ಪಡೆಯಲಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಈಗಾಗಲೇ ಶಾಲೆಯಿಲ್ಲದಿದ್ರೂ ಪೋಷಕರಿಂದ ಬಿಲ್ಡಿಂಗ್ ಫೀಸ್, ಡೆವಲಪ್ಮೆಂಟ್ ಫೀಸ್, ಕಲ್ಚರಲ್ ಌಕ್ಟಿವಿಟಿ ಫೀಸ್ ಸೇರಿದಂತೆ ವಿವಿಧ ಫೀಸ್ ಪಡೆದಿವೆ.

ಒಟ್ನಲ್ಲಿ, ಈಗಾಗಲೇ ಶೈಕ್ಷಣಿಕ ವರ್ಷದಲ್ಲಿ ಅರ್ಧ ವರ್ಷ ಮುಗಿದಿದೆ. ಇದೀಗ ಮೊದಲ ಹಂತದ ಫೀಸ್ ಯಾವ ರೀತಿಯಾಗಿ ಪಡೆಯಲಿದೆ? ಪೋಷಕರಿಗೆ ಫೀಸ್ ಏಕಾಏಕಿ ಕಟ್ಟಲು ಸಾಧ್ಯವೆ? ಅನ್ನೋ ಪ್ರಶ್ನೆ ಜೊತೆ ಮೊದಲ ಹಂತದ ಫೀಸ್ ಕಟ್ಟಲು ಪೋಷಕರ ಹೆಣಗಾಟ ಶುರುವಾಗಿದೆ. ಶಾಲೆಗೆ ಮಕ್ಕಳನ್ನು ಕಳುಹಿಸಿಲ್ಲಾ, ಆದ್ರೂ ಫೀಸ್ ಕಟ್ಟುವುದು ಹೇಗೆ? ಶಾಲೆಯ ಖರ್ಚು ವೆಚ್ಚವೇ ಇಲ್ಲದಿದ್ರೂ, ಫೀಸ್ ಪಡೆಯೊದು ಏಕೆ? ಅನ್ನೋ ಪ್ರಶ್ನೆಗಳು ಪೋಷಕರಲ್ಲಿ ಕಾಡುತ್ತಿವೆ.