ಮೃತ ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ 10 ಕಡೆ ಜಾಗ ನಿಗದಿ..

ಬೆಂಗಳೂರು: ಟಿವಿ9 ಪ್ರಸಾರ ಮಾಡಿದ್ದ ವರದಿಗೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ. ಕೊರೊನಾದಿಂದ ಮೃತರಾದವರ ಅಂತ್ಯಕ್ರಿಯೆಗೆ ಸರ್ಕಾರ ಜಾಗ ಮೀಸಲಿಟ್ಟಿದೆ. ಬೆಂಗಳೂರು ನಗರದೊಳಗೆ, ಜನ ವಸತಿ ಪ್ರದೇಶದಲ್ಲಿರುವ ಸ್ಮಶಾನದೊಳಗೆ ಕೊರೊನಾ ಸೋಂಕಿನಿಮದ ಮೃತಪಟ್ಟವರ ಅಂತ್ಯಕ್ರಿಯೆ ನಡೆಯುವುದನ್ನು ಟಿವಿ9 ವರದಿ ಮಾಡಿತ್ತು. ಕೂಡಲೇ ಟಿವಿ9 ವರದಿಗೆ ಸ್ಪಂದಿಸಿದ್ದ ಸಚಿವ ಶ್ರೀರಾಮುುಲು ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗ ಮೀಸಲಿಡುವುದಾಗಿ ಹೇಳಿದ್ದರು. ಬೆಂಗಳೂರಿನ ಒಳಗೆ ಇರುವ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ಮಾಡುವಂತಿಲ್ಲ ಎಂದು ಆದೇಶಿಸಿದ್ದರು.

ಕಡೆಗೂ ಎಚ್ಚೆತ್ತುಕೊಂಡ ಸರ್ಕಾರ
ಸದ್ಯ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ಜಾಗ ನಿಗದಿಯಾಗಿದೆ. ಬೆಂಗಳೂರಿನ ಹೊರವಲಯದಲ್ಲಿ 10 ಕಡೆ ಅಂತ್ಯಸಂಸ್ಕಾರಕ್ಕೆ ಜಾಗ ನಿಗದಿ ಮಾಡಿದೆ. ಒಟ್ಟು 35 ಎಕರೆ 18 ಗುಂಟೆ ಜಾಗ ಕಾಯ್ದಿರಿಸಿದೆ. ಕೆಲ ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದೆ.

ದಾಸನಪುರ ಗಿಡ್ಡೇನಹಳ್ಳಿ ಸರ್ವೆ ನಂಬರ್ 80 ರಲ್ಲಿ 4 ಎಕರೆ, ಉತ್ತರಹಳ್ಳಿ ಗುಳಿಕಮಲೆ ಸರ್ವೆ ನಂಬರ್ 35 ರಲ್ಲಿ 4 ಎಕರೆ, ತಾವರೆಕೆರೆ ತಿಪ್ಪಗೊಂಡನಹಳ್ಳಿ ಸರ್ವೆ ನಂ. 4 ರಲ್ಲಿ 5 ಎಕರೆ, ಹೆಸರುಘಟ್ಟದ ಹುತ್ತನಹಳ್ಳಿಯಲ್ಲೂ 2 ಎಕರೆ ಜಾಗ ನಿಗದಿ, ಮಾರೇನಹಳ್ಳಿ ಸರ್ವೆ ನಂಬರ್ 182 ರಲ್ಲಿ 5 ಎಕರೆ ಜಾಗ, ಒಟ್ಟು 35ಎಕರೆ 18 ಗುಂಟೆ ಜಾಗ ಸ್ಮಶಾನಕ್ಕೆ ನಿಗದಿ ಮಾಡಲಾಗಿದೆ. ಸೋಂಕಿತರ ಅಂತ್ಯಸಂಸ್ಕಾರಕ್ಕೆ ಈ ಪ್ರದೇಶ ಬಳಕೆ ಮಾಡಿಕೊಳ್ಳಲಾಗುತ್ತೆ.

Related Tags:

Related Posts :

Category:

error: Content is protected !!