ಅಭಿವೃದ್ಧಿ ಕಾಣದ ಗ್ರಾಮ, ಗ್ರಾ.ಪಂ ಸಂಪೂರ್ಣ ವಿಫಲ: ಗ್ರಾಮಸ್ಥರು ಕೊಟ್ಟ ಎಚ್ಚರಿಕೆ ಏನು?

ಉಡುಪಿ: ಸರಕಾರದಿಂದ ಬರುವ ಅನುದಾನವನ್ನು ಬಳಸಿ ಗ್ರಾಮದ ಅಭಿವೃದ್ಧಿ ಪಡಿಸುವಲ್ಲಿ ಗ್ರಾಮ ಪಂಚಾಯತಿ ಸಂಪೂರ್ಣ ವಿಫಲವಾಗಿದೆ ಎಂದು ಗ್ರಾಮಸ್ಥರು ಉಚ್ಚಿಲ ಬಡಾ ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಗ್ರಾಮದ ಅಭಿವೃದ್ದಿಗಾಗಿ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ನೀಡಿದ ಮನವಿಗಳು ಮೂಲೆ ಸೇರಿವೆ.

ಮೂಲಭೂತ ಸೌಕರ್ಯ ನೀಡುವಲ್ಲಿ ಎಡವಿದ ಗ್ರಾ.ಪಂ:
ಅಧಿಕಾರಿಗಳು ಕೊಟ್ಟ ಯಾವ ಭರವಸೆಗಳು ಕೂಡ ಇದುವರೆಗೆ ಈಡೆರಲೇ ಇಲ್ಲ. ಇಲ್ಲಿನ ಗ್ರಾಮಸ್ಥರು ಇಂದಿಗೂ ಸಮಸ್ಯೆಗಳ ಸರಮಾಲೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮೂಲಭೂತ ಸೌಕರ್ಯ ನೀಡುವಲ್ಲಿ ಇಲ್ಲಿನ ಅಧಿಕಾರಿಗಳು ಸೋತಿದ್ದಾರೆ. ಮಳೆಗಾಲಕ್ಕೆ ಪೂರ್ವಭಾವಿಯಾಗಿ ಆಗಬೇಕಿದ್ದ ಚರಂಡಿ ನಿರ್ಮಾಣ, ನಿರ್ವಹಣೆ ಕಾಮಗಾರಿ ನಡೆಯುತ್ತಿಲ್ಲ.

ಜೋರಾಗಿ ಮಳೆ ಬಂತೆಂದರೆ ರಸ್ತೆಯಲ್ಲೇ ಕೆಂಪು ಮಣ್ಣು ಮಿಶ್ರಿತ ಮಳೆ ನೀರು ಹರಿದು ಬರುತ್ತಿದ್ದು, ಸಾರ್ವಜನಿಕರು ಇದರ ಪರಿಣಾಮ ಎದುರಿಸಬೇಕಾಗಿದೆ. ಗ್ರಾಮದ ಅತಿದೊಡ್ಡ ಕೆರೆ ಎನ್ನುವ ಸುಮಾರು 13 ಎಕರೆ ಜಾಗ ಹೊಂದಿರುವ ಕಟ್ಟಿಂಗೇರಿ ಕೆರೆ ಅಭಿವೃದ್ಧಿ ಕಾಣದೆ ನಿಷ್ಪ್ರಯೋಜಕ ಎನಿಸಿದೆ. ಗ್ರಾಮದಲ್ಲಿ ವ್ಯವಸ್ಥಿತವಾದ ಮೀನು ಮಾರುಕಟ್ಟೆ ಇಲ್ಲದೆ ವಂಚಿತರಾದ ಮೀನು ಮಾರಾಟಗಾರರು ರಸ್ತೆಯ ಪಕ್ಕದಲ್ಲಿ ಮೀನು ಮಾರುವಂತಾಗಿದೆ. ತ್ಯಾಜ್ಯ ವಿಲೇವಾರಿಗೆ ಸಮರ್ಪಕವಾದ ವ್ಯವಸ್ಥೆಗಳಿಲ್ಲದೆ ಜನ ಅಲ್ಲಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಕೆಲವೆಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿವೆ.

ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರ ಎಚ್ಚರಿಕೆ:
ಗ್ರಾಮದ ನಾಲ್ಕನೇ ವಾರ್ಡಿನಲ್ಲಿರುವ ಯುವಕ ಮಂಡಳಿ ವಾರಸುದಾರರಿಲ್ಲದೆ ಪಾಳುಬಿದ್ದು ಜಾನುವಾರುಗಳಿಗೆ ಮನೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ‌ವ್ಯಕ್ತಪಡಿಸಿದ್ದಾರೆ. ಸಂಪೂರ್ಣವಾಗಿ ಅಭಿವೃದ್ಧಿಯಲ್ಲಿ ವಿಫಲತೆ ಕಂಡಿರುವ ಈ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಒಂದು ವೇಳೆ ಸಮಸ್ಯೆ ಬಗ್ಗೆ ಕೂಡಲೇ ಸ್ಪಂದನೆ ದೊರಕದಿದ್ದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಗ್ರಾಮದ ಜನ ಎಚ್ಚರಿಕೆ ನೀಡಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more