ಗಡಿಯಲ್ಲಿ ದೇಶ ಸೇವೆ ಸಲ್ಲಿಸಿ ಮರಳಿದ ಯೋಧರಿಗೆ ಭರ್ಜರಿ ಸ್ವಾಗತ

ಹಾವೇರಿ: ಗಡಿಯಲ್ಲಿ ದೇಶ ಸೇವೆ ಸಲ್ಲಿಸಿ ಸುರಕ್ಷಿತವಾಗಿ ಊರಿಗೆ ಮರಳಿದ ಹೆಮ್ಮೆಯ ಪುತ್ರರಿಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ತಾಲೂಕಿನ ಅಗಡಿ ಗ್ರಾಮದ ಇಮ್ತಿಯಾಜ್ ಹಾವನೂರು ಮತ್ತು ಮಹೇಶ ಕುಂಬಾರ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಗ್ರಾಮಸ್ಥರು ಮನೆಗೆ ಕರೆತಂದಿದ್ದಾರೆ.

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ನಿವೃತ್ತ ಯೋಧರನ್ನ ಗ್ರಾಮಸ್ಥರು ಸ್ವಾಗತಿಸಿದ್ದಾರೆ. 17 ವರ್ಷಗಳ ಕಾಲ ಯೋಧರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜಮ್ಮು-ಕಾಶ್ಮೀರ, ಶ್ರೀನಗರ, ಮಣಿಪುರ, ನಾಗಾಲ್ಯಾಂಡ್ ಸೇರಿದಂತೆ ಹಲವೆಡೆ ದೇಶ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿ ಊರಿಗೆ ಮರಳಿದ್ದಾರೆ.

ನಿವೃತ್ತ ಯೋಧರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗ್ರಾಮಸ್ಥರು ಊರಿಗೆ ಕರೆದೊಯ್ದಿದ್ದಾರೆ. ಸ್ಥಳೀಯ ಶಾಸಕ ನೆಹರು ಓಲೇಕಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ನಿವೃತ್ತ ಯೋಧರ ಮೆರವಣಿಗೆಗೆ ಸಾಥ್ ನೀಡಿದ್ದಾರೆ.


Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!