ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಗ್ರೆನೇಡ್ ಆರ್ಮಿಯ ಬಾಕ್ಸ್​​ನಿಂದ ಬಿದ್ದಿದ್ದು..!

  • Tv9.com
  • Published On - 20:12 PM, 3 Jun 2019

ಬೆಂಗಳೂರು: ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಗ್ರೆನೇಡ್ ಸೇನೆಗೆ ಸೇರಿದ್ದು ಎಂದು ತಿಳಿದುಬಂದಿದೆ. ಅದು ಆರ್ಮಿಯ ಬಾಕ್ಸ್​​ನಿಂದ ಕೆಳಗೆ ಬಿದ್ದಿದ್ದು ಎಂಬ ಸತ್ಯ ರೈಲ್ವೆ ಪೊಲೀಸರ ತನಿಖೆಯಲ್ಲಿ ಬಯಲುಗೊಂಡಿದೆ.


ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದು ಸೇನೆಗೆ ಸೇರಿದ ಗ್ರೆನೇಡ್. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಭಾರತೀಯ ಸೇನೆಗೆ ಸೇರಿದ ಗ್ರೆನೇಡ್ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ. ಅದು ಸೇನೆಗೆ ಸೇರಿದ ನಿರ್ಜೀವ ಗ್ರೆನೇಡ್ ಅಂತಾ ತನಿಖೆಯಲ್ಲಿ ಬಹಿರಂಗವಾಗಿದೆ.