ವಿಶ್ವನಾಥ್‌ರ ‘Bombay Days’ ಬಾಂಬಿಗೆ BJP ಯಲ್ಲಿ ಶಾಕ್, JDS ‌ಗೆ ಆತಂಕ ಯಾಕೆ?

ಮೈಸೂರು: ರಾಜಕಾರಣಿ ಹೆಚ್ ವಿಶ್ವನಾಥ್‌ರಿಗೂ, ವಿವಾದಗಳಿಗೂ ಬಿಡದ ನಂಟು. ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಇರುವ ಈ ನಾಯಕ ಈಗ ಮತ್ತೊಂದು ವಿವಾದ ಮೈಮೈಲೆ ಎಳೆದುಕೊಳ್ಳೋಕೆ ರೆಡಿಯಾಗಿದ್ದಾರೆ.

ಹೌದು ಮೈಸೂರಿನ ಬಿಜಿಪಿ ನಾಯಕ ಹೆಚ್ ವಿಶ್ವನಾಥ್ ಇತ್ತೀಚೆಗಷ್ಟೆ ಬಿಜಿಪಿಯಿಂದ ವಿಧಾನಪರಿಷತ್ತಿಗೆ ನಾಮಕರಣಗೊಂಡಿದ್ದಾರೆ. ಈಗ ಅವರ ಕಣ್ಣು ಮಂತ್ರಿ ಸ್ಥಾನದ ಮೇಲೆ ನೆಟ್ಟಿದೆ. ಇದಕ್ಕಾಗಿ ಅವರು ಪಕ್ಷಾಂತರ ಮಾಡಿಯೂ ಆಗಿದೆ. ಅದಕ್ಕಾಗಿ ವಿಶ್ವನಾಥ್ ಪಟ್ಟ ಪಾಡು ಮಾತ್ರ ಯಾರಿಗೂ ಹೇಳತೀರದು. ಬೆಂಗಳೂರಿನಿಂದ ಮುಂಬೈ, ಮುಂಬೈನಿಂದ ದೆಹಲಿ, ದೆಹಲಿಯಿಂದ ಮತ್ತೆ ಮುಂಬೈ ನಂತರ ಬೆಂಗಳೂರು ಹೀಗೆ ಅಲೆಯಬೇಕಾಯಿತು.

ಈ ಸಮಯದಲ್ಲಿ ಅವರು ಸಾಕಷ್ಟು ಮುಜಗರವನ್ನ ಅನುಭವಿಸಬೇಕಾಯಿತು. ಈಗ ಅದನ್ನೇ ಪುಸ್ತಕ ರೂಪದಲ್ಲಿ ಜಗತ್ತಿನ ಮುಂದೆ ತೆರೆದಿಡಲು ಮುಂದಾಗಿದ್ದಾರೆ. ಈ ಪುಸ್ತಕಕ್ಕೆ ಬಾಂಬೇ ಡೇಸ್ ಎಂದು ಹೆಸರಿಡಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಇದರಲ್ಲಿ ಜೇಡಿಎಸ್‌ನಿಂದ ಬಿಜೆಪಿಗೆ ಹೋದ ವಿವರಗಳನ್ನು ಬರೆಯಲಿದ್ದಾರಂತೆ.

ಈ ಸಂಬಂಧ ಮೈಸೂರಿನ ಸಂವಾದದಲ್ಲಿ ಮಾತನಾಡಿದ ವಿಶ್ವನಾಥ್, ಬಾಂಬೆ ಡೇಸ್ ಪುಸ್ತಕ ಬರೆಯುವುದು ಮತ್ತು ಅದನ್ನು ಬಿಡುಗಡೆ ಮಾಡುವುದು ಎರಡು ಖಚಿತ ಎಂದಿದ್ದಾರೆ. ಅಷ್ಟೆ ಅಲ್ಲ ಸರ್ಕಾರದಿಂದ ನನ್ನ ಕೈ ಮತ್ತು ಬರಹ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಗುಟುರು ಹಾಕಿದ್ದಾರೆ.

ಹಾಗೇನೆ ಸರ್ಕಾರಕ್ಕೆ ಮುಜುಗರ ಥರವಂತಹದು ಅದರಲ್ಲಿ ಏನೂ ಇರಲ್ಲ, ಆದ್ರೆ ಯಾವ ಕಾರಣಕ್ಕೆ ನಾವು ಬಂಡೆದ್ದು ಹೋದೆವು, ಕೆಲವರು ಕಾನೂನನ್ನು ಹೇಗೆ ದುರುಪಯೋಗ ಪಡಿಸಿಕೊಂಡರು ಅನ್ನೋ ಡಿಟೇಲ್ಸ್ ಮಾಹಿತಿ ಪುಸ್ತಕದಲ್ಲಿ ಇರುತ್ತೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

Related Tags:

Related Posts :

Category:

error: Content is protected !!