H1N1ನಿಂದ ಬೆಚ್ಚಿಬಿತ್ತಾ ಬೆಂಗಳೂರು ಸಾಫ್ಟ್​ವೇರ್​ ವಲಯ?

ಬೆಂಗಳೂರು: ಕೊರೊನಾ ಆತಂಕದ ನಡುವೆ ಹಂದಿ ಜ್ವರ ನಗರದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಇಬ್ಬರು ಎಸ್​ಎಪಿ ಕಂಪನಿಯ ಉದ್ಯೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ ಈ ಹಿನ್ನೆಲೆ ಮನೆಯಿಂದಲೇ ಕೆಲಸ ಮಾಡಲು ಐಟಿ ಕಂಪನಿಯಿಂದ ಟೆಕ್ಕಿಗಳಿಗೆ ಸೂಚನೆ ನೀಡಲಾಗಿದೆ.

ಭಾರತದಲ್ಲಿರುವ ಕಚೇರಿಗಳಲ್ಲಿ ಶುದ್ಧೀಕರಣ ಕಾರ್ಯ ಮುಂದುವರೆದಿದ್ದು, ಬೆಂಗಳೂರು, ಗುರುಗ್ರಾಮ, ಮುಂಬೈನಲ್ಲಿರುವ ಕಚೇರಿಗಳನ್ನು ತಾತ್ಕಾಲಿಕವಾಗಿ ಕ್ಲೋಸ್ ಮಾಡಲಾಗಿದೆ. ಇನ್ನು ಇಕೋ ವರ್ಲ್ಡ್​​ ಕ್ಯಾಂಪಸ್​ನಲ್ಲಿರುವ ಎಸ್​ಎಪಿ, ವಾಲ್​ಮಾರ್ಟ್, ಸಿಸ್ಕೋ ಸೇರಿದಂತೆ ಹಲವು ಸಾಫ್ಟ್​ವೇರ್​ ಕಂಪನಿಗಳು ಉದ್ಯೋಗಿಗಳಿಗೆ ಫೆಬ್ರವರಿ 20ರಿಂದ 28ರವರೆಗೆ ಮನೆಯಿಂದಲೇ ಕೆಲಸ ಮಾಡಲು ಇ-ಮೇಲ್ ಮೂಲಕ ಸೂಚಿಸಲಾಗಿದೆ.

ನಿಮ್ಮ ಮನೆಯಲ್ಲಿ ಸಂಬಂಧಿಕರಿಗೆ ಶೀತ, ಕೆಮ್ಮು, ಜ್ವರ ಇದ್ದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಆದ್ರೆ ಇದರ ಬಗ್ಗೆ ಆರೋಗ್ಯ ಇಲಾಖೆ ಮಾತ್ರ ಕನ್ ಫ್ಯೂಸ್ ಆಗಿದೆ. ಈ ಸುದ್ದಿ ನಿಖರತೆ ತಿಳಿಯಲು ಕಂಪನಿಯವರನ್ನ ಸಂಪರ್ಕಿಸಲು ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಕಾಶ್ ಕುಮಾರ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಜನವರಿ ಇಂದ ಇಲ್ಲಿಯವರೆಗೂ 66 H1N1 ಪಾಸಿಟೀವ್ ಪ್ರಕರಣ ಪತ್ತೆಯಾಗಿದೆ. ಹಾಗೂ ರಾಜ್ಯದಲ್ಲಿ ಒಟ್ಟು 171 H1N1 ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದೆ. ದಿನದಿಂದ ದಿನಕ್ಕೆ H1N1 ಪ್ರಕರಣಗಳು ಹೆಚ್ಚಾಗ್ತಿದೆ. ಆದ್ರೆ ಅತ್ತ ಆರೋಗ್ಯ ಇಲಾಖೆಗೆ ಇದರ ಬಗ್ಗೆ ಕನ್ ಫ್ಯೂಸ್ ಶುರುವಾಗಿದೆ.

ನಾವೂ ಕೂಡ ಆ ಕಂಪನಿಯನ್ನ ಸಂಪರ್ಕಿಸಲು ಪ್ರಯತ್ನಿಸಿದ್ದೇವೆ ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. H1N1 ಕಳೆದ ವರ್ಷಕ್ಕಿಂತ ನಾರ್ಮಲ್ ಆಗಿದೆ, ಆಗಿದ್ರು ಯಾಕೆ ಈ ರೀತಿ ಹಬ್ಬಿದೆ ಅನ್ನೋದು ಗೊತ್ತಾಗ್ತಿಲ್ಲ ನಾಳೆ ಆ ಕಂಪನಿಗಳನ್ನ ಸಂಪರ್ಕಿಸುತ್ತೇವೆ. ಕಂಪನಿಗಳಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಇಲ್ಲ ಎಂದು ಡಾ. ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!