4 ತಿಂಗಳ ಹಿಂದೆಯೇ ಡೆಕತ್ಲಾನ್​ನಲ್ಲಿ ಚಾಕು ಖರೀದಿಸಿದ್ದ ಹಂತಕಿ ಪುತ್ರಿ!

ತಾಯಿ ಹತ್ಯೆಯ ವಿಚಾರವಾಗಿ ಇನ್ನಷ್ಟು ಮಾಹಿತಿ ನೀಡಿರುವ ಅಮೃತಾ, 4 ತಿಂಗಳ ಹಿಂದೆಯೇ ಹತ್ಯೆ ಪ್ಲ್ಯಾನ್ ಮಾಡಿದ್ದಳಂತೆ. ಸ್ಪೋರ್ಟ್ಸ್​ ಸಾಮಗ್ರಿಯ ಡೆಕತ್ಲಾನ್​ ಶಾಪ್​ನಿಂದ ಎರಡು ಚಾಕು ತಂದಿದ್ದಳಂತೆ. ಅಮ್ಮನನ್ನು ಸಾಯಿಸಲೇಬೇಕು ಎಂದು ನಿರ್ಧರಿಸಿ, ಸರಿಯಾದ ಸಮಯಕ್ಕಾಗಿ ಕಾದು ಕುಳಿತಿದ್ದೆ. ಅದರಂತೆ ಫೆಬ್ರವರಿ 2ರ ಬೆಳಗಿನ ಜಾವ 4 ಗಂಟೆಗೆ ಹತ್ಯೆ ಮಾಡಿಬಿಟ್ಟೆ ಎಂದು ಪೊಲೀಸರ ಎದುರು ಅಮೃತಾ ಅಲವತ್ತುಕೊಂಡಿದ್ದಾಳೆ.

ಮೊದಲಿಗೆ ತಾಯಿ ನಿರ್ಮಲಾ ಹತ್ಯೆ ಮಾಡಿದೆ. ಚಾಕುವಿನಿಂದ 8ಕ್ಕೂ ಹೆಚ್ಚು ಬಾರಿ ಇರಿದು ಹೆತ್ತಮ್ಮನನ್ನೇ ಸಾಯಿಸಿಬಿಟ್ಟೆ. ಬಳಿಕ ತಮ್ಮ ಹರೀಶನ ಕತ್ತು, ಬೆನ್ನು ಭಾಗಕ್ಕೆ ಇರಿದುಬಿಟ್ಟೆ. ಎಲ್ಲರೂ ಸತ್ತುಹೋದರು ಅಂದುಕೊಂಡು ಮನೆಯಿಂದ ಹೊರಬಿದ್ದೆ. ಅಲ್ಲಿ ನನಗಾಗಿ ಕಾಯುತ್ತಿದ್ದ ಗೆಳೆಯನ ಜೊತೆ ಬೈಕ್​ ಏರಿ ಪರಾರಿಯಾದೆ ಎಂದು ಅಮೃತಾ ಹೇಳಿದ್ದಾಳೆ.

ಪರಾರಿ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ಅಮೃತಾ: ಮನೆಯಿಂದ ಹೊರಡುವಾಗ ಮೊಬೈಲ್ ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದೆ. ಬಳಿಕ ದಾರಿಯಲ್ಲಿ ಬರುತ್ತಾ.. ರಾಮಮೂರ್ತಿನಗರ ರಸ್ತೆ ಪಕ್ಕ ಮೊಬೈಲ್ ಎಸೆದುಬಿಟ್ಟೆ ಎಂದೂ ಆರೋಪಿ ಅಮೃತಾ ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾಳೆ.

5 pm – TV9 Kannada Facebook Live ಟಿವಿ 9 ಕನ್ನಡ ಫೇಸ್ ಬುಕ್ ಲೈವ್

5 pm – TV9 Kannada Facebook Live ಟಿವಿ 9 ಕನ್ನಡ ಫೇಸ್ ಬುಕ್ ಲೈವ್ #TV9Kannada #KannadaNews #TV9FacebookLive #TV9KannadaFacebookLive #TV9KannadaFBLive #FBLive #TV9FBLive #FacebookLive

Tv9Kannada यांनी वर पोस्ट केले गुरुवार, ६ फेब्रुवारी, २०२०

 

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!