280 ನಿವೃತ್ತ ಯೋಧರನ್ನು ಕೆಲಸದಿಂದ ವಜಾಗೊಳಿಸಿದ HAL!

ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ರಾಜಧಾನಿಯಲ್ಲಿರುವ ಪ್ರತಿಷ್ಠಿತ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ (HAL) ಏಕಾಏಕಿ 280 ನಿವೃತ್ತ ಯೋಧರನ್ನು ಕೆಲಸದಿಂದ ವಜಾಗೊಳಿಸಿದೆ.

ಇವರೆಲ್ಲ ಕಳೆದ 8 ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡ್ತಿದ್ದರು. ಗಮನಾರ್ಹವೆಂದ್ರೆ ದೊಮ್ಮಲೂರಿನ SAS ಏಜೆನ್ಸಿ ಮೂಲಕ ಇವರು HALನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ಗಿಂತ ಮುಂಚೆ 25 ಸಾವಿರ ಸಂಬಳ ನೀಡುತ್ತಿದ್ದರು. ಈಗ 18 ಸಾವಿರ ಸಂಬಳ ನೀಡುತ್ತೇವೆ ಎಂದು HAL ಸಂಸ್ಥೆ SAS ಏಜೆನ್ಸಿಗೆ ತಿಳಿಸಿದೆ.

ಇದಕ್ಕೆ ಒಪ್ಪದ ನಿವೃತ್ತ ಯೋಧರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಏಕಾಏಕಿ ಕೆಲಸದಿಂದ ವಜಾಗೊಳಿಸಿದ ಆರೋಪ ಹೆಚ್‌ಎಎಲ್‌ ಮೇಲಿದೆ. ಇಂದಿನಿಂದಲೇ ಕೆಲಸಕ್ಕೆ ಬಾರದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ SAS ಏಜೆನ್ಸಿ ಕಚೇರಿ ಮುಂದೆ ನಿವೃತ್ತ ಯೋಧರು ಧರಣಿ ನಡೆಸುತ್ತಿದ್ದಾರೆ.

Related Posts :

Category:

error: Content is protected !!