IAS ಹರ್ಷ ಗುಪ್ತಾ ಬರೆದಿದ್ದ ಪತ್ರವೇ ಮುಳುವಾಯ್ತಾ ರೊಷನ್ ಬೇಗ್​ಗೆ? ಏನಿತ್ತು ಪತ್ರದಲ್ಲಿ?

  • TV9 Web Team
  • Published On - 15:21 PM, 23 Nov 2020
ಮಾಜಿ ಸಚಿವ ರೋಷನ್​ ಬೇಗ್

ಬೆಂಗಳೂರು: ಸಾವಿರಾರು ಜನರ ಕಣ್ಣೀರಿಗೆ ಕಾರಣವಾದ IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ರೋಷನ್ ಬೇಗ್ ಈಗ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದರೆ ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿದೆ ಎಂದು ಸ್ಪಷ್ಟಪಡಿಸುವ ಬಲವಾದ ಮಾಹಿತಿಯೊಂದು ಬಹಿರಂಗವಾಗಿದೆ.

ಬೇಗ್ ವಿರುದ್ಧ ಸಿಕ್ಕಿದೆ ಐಎಎಸ್ ಅಧಿಕಾರಿಯ ‘ಪತ್ರ’ ಸಾಕ್ಷ್ಯ!
SIT ಅಧಿಕಾರಿಗಳು IMA ವಂಚನೆಯಲ್ಲಿ ರೋಷನ್ ಬೇಗ್ ಪಾತ್ರವಿದೆ ಎಮಬುದನ್ನು ಬಯಲಿಗೆಳೆದಿದ್ದಾರೆ. ಐಎಂಎ ಪ್ರಕರಣದಲ್ಲಿ ರೊಷನ್ ಬೇಗ್ ಪಾತ್ರದ ಬಗ್ಗೆ IAS ಅಧಿಕಾರಿ ಹರ್ಷ ಗುಪ್ತ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರೋಷನ್ ಬೇಗ್ ಐಎಂಎ ಕಂಪನಿ ಬಗ್ಗೆ ಪ್ರಚಾರ ಮಾಡುವುದು ಹಾಗೂ ಅದರಿಂದ ಫಲಾನುಭವಿಯಾಗಿರುವ ಬಗ್ಗೆ ತಿಳಿಸಲಾಗಿದೆ.

SIT ಮುಖ್ಯಸ್ಥ ಹರ್ಷ ಗುಪ್ತ ದಾಖಲೆ ಸಮೇತ ಬಯಲಿಗೆಳೆದಿದ್ದಾರೆ. ಈ ಹಿಂದೆ ರೋಷನ್ ಬೇಗ್​ಗೆ ಸೇರಿದ ಕಚೇರಿಯಲ್ಲಿ IMAಗೆ ಸಂಬಂಧ ಪಟ್ಟ ದಾಖಲೆಗಳು ಲಭ್ಯವಾಗಿದ್ದವು. ಶಿವಾಜಿನಗರದ ಗಣೇಶ ಟವರ್ಸ್ ನಲ್ಲಿದ್ದ ರೋಷನ್ ಬೇಗ್ ಒಡೆತನದ ದಾನೀಶ್ ಪಬ್ಲಿಕೇಷನ್​ನಲ್ಲಿ ಬರುತಿದ್ದ ದಿ ಸಿಯಾಸತ್ ಡೈಲಿ ಎಂಬ ಉರ್ದು ಪತ್ರಿಕೆಯ ಕಚೇರಿಯಲ್ಲಿ ಕೆಲ ದಾಖಲೆಗಳು ಲಭ್ಯವಾಗಿದ್ದವು. ಐಎಂಎ ಒಡೆತನದ ಮಲ್ಬಾರಿ ಗ್ರೀನ್ ಸೂಪರ್ ಮಾರ್ಕೆಟ್​ನ ದಾಖಲೆಗಳನ್ನ ಬೆನ್ನತ್ತಿದ್ದ SITಗೆ ಮತ್ತಷ್ಟು ಸಾಕ್ಷ್ಯಗಳು ಲಭ್ಯವಾಗಿತ್ತು.

ಮನ್ಸೂರ್ ಅಲಿ ಖಾನ್ , ರೋಷನ್ ಬೇಗ್ ಇಬ್ಬರೂ ಬಳಸುತ್ತಿದ್ದದ್ದು ಒಂದೇ ಕಚೇರಿ:
ಮನ್ಸೂರ್ ಅಲಿ ಖಾನ್ ಮತ್ತು ರೋಷನ್ ಬೇಗ್ ಮಧ್ಯೆ ಸಾಕಷ್ಟು ವ್ಯವಹಾರ ನಡೆಯುತ್ತಿತ್ತು. ಇಬ್ಬರೂ ಒಂದೇ ಕಚೇರಿ ಬಳಕೆ ಮಾಡಿರೋದನ್ನ ಎಸ್ ಐಟಿ ಪತ್ತೆ ಹಚ್ಚಿದೆ. ವ್ಯಾವಹಾರಿಕ ಸಂಬಂಧದ ಜೊತೆ ಹಣಕಾಸಿನ ವ್ಯವಹಾರ ಕೂಡ ಇಬರಿಬ್ಬರ ನಡುವೆ ಇತ್ತು. ಅಲ್ಲದೆ ದಾನಿಶ್ ಪಬ್ಲಿಕೇಷನ್ ಕಚೇರಿಯಿಂದ್ಲೇ ಹಲವರನ್ನ ಸೆಳೆದು ಹಣ ಹೂಡಿಕೆ ಗೆ ಪ್ರೇರೇಪಿಸಿರುವ ವಿಚಾರವೂ ಬಯಲಾಗಿದೆ. ಐಎಂಎ ಪರ ಪ್ರಚಾರದಲ್ಲಿ ರೋಷನ್ ಬೇಗ್ ಪಾತ್ರವಹಿಸಿದ್ದಾಗಿ ಸಾಬೀತಾಗಿದೆ. ಇದ್ರಿಂದ ಹೆಚ್ಚು ‘ಫಲಾನುಭವ’ ಪಡೆದಿರೋದೇ ಬೇಗ್ ಎಂದು ಹರ್ಷ ಗುಪ್ತ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.