ಖ್ಯಾತ ಮಕ್ಕಳ ತಜ್ಞನನ್ನೇ ಬಲಿ ಪಡೆದ ಕೊರೊನಾ!

ಹಾಸನ: ಕಿಲ್ಲರ್ ಕೊರೊನಾ ಸೋಂಕಿಗೆ ಹಾಸನದ ಮತ್ತೊಬ್ಬ ವೈದ್ಯ ಬಲಿಯಾಗಿದ್ದಾರೆ. ಹಾಸನದ ಖ್ಯಾತ ಮಕ್ಕಳ ತಜ್ಞ ಡಾ. ರಾಜೀವ್ (64) ಇಂದು ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ.

ಎರಡು ವಾರಗಳ ಹಿಂದೆ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಶಕಗಳಿಂದ‌ ಜಿಲ್ಲೆಯಲ್ಲಿ ಸೇವೆ ಮಾಡುತ್ತಿದ್ದ ಡಾ.ರಾಜೀವ್ ವೈದ್ಯರಾಗಿ ಜಿಲ್ಲೆಯಲ್ಲಿ ಅಪಾರ ಹೆಸರು ಮಾಡಿದ್ದರು. ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಾನುಗೊಂದಿ ಗ್ರಾಮದವರಾಗಿದ್ದರು.

Related Tags:

Related Posts :

Category: