ರಾಗಿ ರೊಟ್ಟಿ, ಉಚ್ಚೆಳ್ಳು ಚಟ್ನಿ ಖಾದ್ಯ: ಅಜ್ಜಿಮನೆ ಕಾರ್ಯಕ್ರಮದಲ್ಲಿ ಕಲರ್​ಫುಲ್ ನೃತ್ಯ

ಹಾಸನ: ಕಾಲೇಜು ಅಂದ್ರೆ ಬರೀ ಎಕ್ಸಾಮ್, ಸಿಲಬಸ್​ಗೆ ಮಾತ್ರ ಸೀಮಿತವಲ್ಲ. ಕಾಲೇಜ್​ನಲ್ಲಿ ನಮ್ಮ ಸಂಸ್ಕೃತಿಯನ್ನ ಸಾರುವ ಚಟುವಟಿಕೆಗಳು ಕೂಡ ನಡೆಯಬೇಕು. ಇಲ್ಲೂ ಕೂಡ ಹಳ್ಳಿಹಬ್ಬದಲ್ಲಿ ಮಿಂದೆದ್ದ ಹೆಂಗಳೆಯರು ಸಖತ್ ಎಂಜಾಯ್ ಮಾಡಿದ್ರು. ಅಲ್ಲದೆ ಗ್ರಾಮೀಣ ಬದುಕಿನ ಶೈಲಿಯನ್ನೇ ಅನುಸರಿಸಿ ಗಮನ ಸೆಳೆದರು.

ಸವಿಯಲು ಸಿದ್ಧವಾಗಿರುವ ರಾಗಿ ಮುದ್ದೆ, ನೀರ್ ದೋಸೆ, ಇಡ್ಲಿ ಸಾಂಬಾರ್. ಮತ್ತೊಂದ್ಕಡೆ ರಾಗಿ ಬೀಸೋದನ್ನ ಕಲಿಯುತ್ತಿರುವ ಹೆಣ್​ಮಕ್ಕಳು. ಅಂದಹಾಗೆ ಈ ಸೀನ್ ಕಂಡಿದ್ದು ಹಾಸನದ ಗೃಹ ವಿಜ್ಞಾನ ಕಾಲೇಜಿನಲ್ಲಿ.

ಅಜ್ಜಿ ಮನೆ ಎಂಬ ವಿಶೇಷ ಕಾರ್ಯಕ್ರಮದ ಪ್ರಯುಕ್ತ, ಇಷ್ಟೆಲ್ಲಾ ವೈವಿಧ್ಯತೆಗಳು ಕಾಲೇಜಿನಲ್ಲಿ ಮೇಳೈಸಿದ್ದವು. ಹಳ್ಳಿ ಸೊಗಡು ಸಾರುವ ಆಹಾರ ಪದ್ಧತಿ ಬಗ್ಗೆ ಜ್ಞಾನ ನೀಡಲಾಯಿತು. ರಾಗಿರೊಟ್ಟಿ, ಉಚ್ಚೆಳ್ಳು ಚಟ್ನಿ, ಸೊಪ್ಪಿನ ಸಾರು, ಮುದ್ದೆ, ಬಗೆಬಗೆಯ ಸೊಪ್ಪಿನ ಪಲ್ಯ, ಗಿಣ್ಣು, ಕಡುಬು ಹೀಗೆ ಹತ್ತಾರು ಗ್ರಾಮೀಣ ಸೊಗಡಿನ ಖಾದ್ಯಗಳು ಲಭ್ಯವಿದ್ದವು.

ಈ ರೀತಿಯ ಕಾರ್ಯಕ್ರಮಗಳು ಅಂದ್ರೆ ಬರೀ ಆಹಾರಕ್ಕೆ ಸೀಮಿತವಾಗಿರುತ್ತಾ..? ಇಲ್ಲ ಇಲ್ಲ ಅದರ ಜೊತೆಗೆ ಡ್ಯಾನ್ಸ್ ಝಲಕ್ ಕೂಡ ನಡೀತು. ಕಲರ್​ಫುಲ್ ಸ್ಯಾರಿಗಳನ್ನ ತೊಟ್ಟು ಎಂಟ್ರಿಯಾಗಿದ್ದ ಹೆಣ್ ಮಕ್ಕಳು ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ರು. ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡ್ತು.

ಒಟ್ನಲ್ಲಿ ಆಧುನಿಕತೆಯ ಭರಾಟೆ ನಡುವೆ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಾಕಷ್ಟು ಕಲಿಸುತ್ತವೆ. ಗ್ರಾಮೀಣ ಸೊಗಡನ್ನು ಮರುಪರಿಚಯಿಸುವ ಕಾರ್ಯಕ್ರಮಗಳು ಜೀವನ ವಿಧಾನವನ್ನೂ ಹೇಳಿಕೊಡ್ತವೆ. ಹೀಗಾಗಿ, ಇದೊಂದು ಅಥಪೂರ್ಣ ಕಾರ್ಯಕ್ರಮವಾಗಿತ್ತು ಅಂದ್ರೆ ತಪ್ಪಾಗಲಿಕ್ಕಿಲ್ಲ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!