ಶಿರಾ ಜನ ನನಗೆ ವಿಷ ಕೊಡ್ತೀರೋ, ಹಾಲು ಕೊಡುತ್ತೀರೋ.. HD ಕುಮಾರಸ್ವಾಮಿ ಪ್ರಶ್ನೆ

ತುಮಕೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಹೀಗಾಗಿ ರಾಜಕೀಯ ಪ್ರಚಾರ, ಸಭೆ ಬಿಸಿಯೇರತೊಡಗಿದೆ. ಶಿರಾ ಕ್ಷೇತ್ರಕ್ಕೆ ಸಿಎಂ ಪುತ್ರ B.Y.ವಿಜಯೇಂದ್ರ ಭೇಟಿ ವಿಚಾರ ಸಂಬಂಧ HD ಕುಮಾರಸ್ವಾಮಿ ಮಾತನಾಡಿ,  ಕೆ.ಆರ್.ಪೇಟೆಯಲ್ಲಿ ಗೆದ್ದಂತೆ ಇಲ್ಲೂ ಗೆಲ್ತೇವೆಂದು ಅವರು ಬಂದಿದ್ದಾರೆ. ಶಿರಾ ಜನ ನನಗೆ ವಿಷ ಕೊಡ್ತೀರೋ, ಹಾಲು ಕೊಡುತ್ತೀರೋ ಎಂದು ಸಭೆಯಲ್ಲಿದ್ದ ಜನರನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಪ್ರಶ್ನಿಸಿದರು.

ಶಿರಾ ಕ್ಷೇತ್ರಕ್ಕೆ ಸಿಎಂ ಪುತ್ರ B.Y.ವಿಜಯೇಂದ್ರ ಭೇಟಿ ಕೊಟ್ಟಿದ್ದಾರೆ. ಅವರು ಶಿರಾ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಕ್ಕೆ ಬಂದಿದ್ದಾರೆ. ಲೂಟಿ ಸರ್ಕಾರದವರು ಶಿರಾ ಕ್ಷೇತ್ರ ಗೆಲ್ಲಲು ಹೊರಟಿದ್ದಾರೆ. ಕಾಂಗ್ರೆಸ್ ಸಹವಾಸ ಮಾಡಿದ್ದಕ್ಕೆ ಜನರು ನನ್ನ ಒಪ್ಪಿಕೊಂಡಿಲ್ಲ. ನನ್ನ ಕಾರ್ಯಕರ್ತರೂ ಒಪ್ಪಿಕೊಂಡಿಲ್ಲ. ಶಿರಾ ಜನ ನನಗೆ ವಿಷ ಕೊಡುತ್ತೀರೋ, ಹಾಲು ಕೊಡುತ್ತೀರೋ.. ಇದನ್ನು ಶಿರಾ ಕ್ಷೇತ್ರದ ಜನರಿಗೆ ಬಿಡುತ್ತೇನೆ ಎಂದು ಜನರನ್ನುದ್ದೇಶಿಸಿ ಹೆಚ್​ಡಿ ಕುಮಾರಸ್ವಾಮಿ ಗದ್ಗದಿತರಾಗಿ ಮಾತನಾಡಿದರು.

ಶಿರಾ ಕ್ಷೇತ್ರದಿಂದ್ಲೇ ಹೊಸ ರಾಜಕೀಯ ಆರಂಭವಾಗಬೇಕು. ಶಿರಾ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು. ಕಾರ್ಯಕರ್ತರ ನಿರ್ಧಾರದಂತೆ ಟಿಕೆಟ್ ಫೈನಲ್ ಮಾಡ್ತೇವೆ. ಇನ್ನೆರಡು ದಿನಗಳಲ್ಲಿ ಜೆಡಿಎಸ್ ಟಿಕೆಟ್ ಫೈನಲ್ ಮಾಡ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

Related Tags:

Related Posts :

Category:

error: Content is protected !!