ಮಗನ ಸೋಲನ್ನು ನೆನೆದು ಮತ್ತೆ ಕಣ್ಣೀರು ಹಾಕಿದ ಕುಮಾರಸ್ವಾಮಿ

ಮಂಡ್ಯ: ಕೆ.ಆರ್. ಪೇಟೆ ಕ್ಷೇತ್ರದ ಜೆಡಿಎಸ್​ ಸಮಾವೇಶದಲ್ಲಿ ಹೆಚ್​.ಡಿ. ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕಿದ್ದಾರೆ. ಹೆಚ್​ಡಿಕೆ ಸಿಎಂ ಆಗಿದ್ದಾಗ ಕೆ.ಸಿ.ನಾರಾಯಣಗೌಡ ಬರೆದಿದ್ದ ಪತ್ರವನ್ನ ಓದಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ನಾನೇನು ತಪ್ಪು‌ ಮಾಡಿದೆ? ಜಿಲ್ಲೆಯ ಜನರನ್ನ ನಾನು ನಂಬಿದ್ದೆ. ಆದ್ರೆ ನೀವೇ ನನ್ನ ಕೈ ಬಿಟ್ರಿ ಎಂದು ಮಗನ ಸೋಲನ್ನು ನೆನೆದು ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.

ಕಣ್ಣೀರು ಹಾಕುತ್ತಲೇ ಹೆಚ್​ಡಿಕೆ ಮಾತು:
ಜಿಲ್ಲೆಯ ಜನರೇ ಕೈ ಬಿಟ್ಟ ಮೇಲೆ ನಾನು ಅಧಿಕಾರದಲ್ಲಿರಬೇಕಾ? ಜನರ ಪ್ರೀತಿಯೇ ಇಲ್ಲದ ಮೇಲೆ ಉಳಿದ ಅಧಿಕಾರ ಯಕಶ್ಚಿತ. ಪದೇ ಪದೆ ಜಿಲ್ಲೆಯ ಜನರೇ ನನ್ನ ಕೈ ಬಿಟ್ಟ ಮೇಲೆ ಸ್ವಾಭಿಮಾನ ಎಲ್ಲಿಂದ ಬಂತು. ಜಿಲ್ಲೆಯ ಜನರಿಗೆ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ನಾನು ಮಾಡಿದ್ದು ತಪ್ಪಾ? ಮಹಿಳೆಯರನ್ನ ನೋಡಿ ನನಗೆ ಕಣ್ಣೀರು ತುಂಬಿಕೊಂಡಿದೆ ಎನ್ನತ್ತಲೇ ಮತ್ತೆ ನಾರಾಯಣಗೌಡ ಬರೆದಿದ್ದ ಪತ್ರ ಓದಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.

ತಪ್ಪು ಮಾಡಿದ್ರೆ ಬಹಿರಂಗ ಕ್ಷಮೆ ಕೇಳ್ತೀನಿ:
ಕುಮಾರಸ್ವಾಮಿ ಜಿಲ್ಲೆಯ ಜನರ ಕ್ಷಮೆ ಕೇಳಬೇಕೆಂದು ಪಕ್ಕದ ಜಿಲ್ಲೆಯವನು ಕೇಳ್ತಾನೆ. ನಾನು‌ ನಿಜವಾಗಲೂ ತಪ್ಪು ಮಾಡಿದ್ರೆ ಜಿಲ್ಲೆಯ ಜನರನ್ನ ಬಹಿರಂಗವಾಗಿ ಕ್ಷಮೆ ಕೇಳ್ತೀನಿ ಎನ್ನುವ ಮೂಲಕ ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಗುಲಾಮನ ರೀತಿ ನಡೆಸಿಕೊಂಡ್ರು:
ನಾನು ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ಕಾಂಗ್ರೆಸ್ ನಾಯಕರ ಸರ್ಕಾರದ ಅವಧಿಯಲ್ಲಿ ನನ್ನನ್ನ ಗುಲಾಮನ ರೀತಿಯಲ್ಲಿ ನಡೆಸಿಕೊಂಡ್ರು ಎಂದು ಮೈತ್ರಿ ಸರ್ಕಾರದ ಅವಧಿಯ ದಿನಗಳನ್ನು ನೆನೆದು ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ಗುಡುಗಿದ್ದಾರೆ.

ನನ್ನ ಮೇಲೆ ಆರೋಪ ಮಾಡಿದ್ರೆ ದೇವರು ಮೆಚ್ಚುತ್ತಾನ: 
ಬಾಂಬೆ ಕಳ್ಳ ಎಂದು ಕರೆಯುವ ಈತನಿಗೆ 2013ರಲ್ಲಿ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಲಾಯ್ತು. 2018 ರಲ್ಲಿ ನನ್ನ ಕರ್ಮ ನನ್ನ ತಂದೆಯ ವಿರೋಧದ ನಡುವೆಯೂ ನಾನು ಟಿಕೆಟ್ ನೀಡಿದೆ. 2019 ರ ಫೆಬ್ರವರಿಯಲ್ಲಿ ನಾನು ಬಜೆಟ್ ಸಿದ್ಧತೆಯಲ್ಲಿದ್ದೆ. ಆಗ ಜಿಲ್ಲೆಗೆ ಏನು ಕೊಡಬೇಕೆಂದು ಚಿಂತನೆ ಮಾಡ್ತಿದ್ದೆ. ಆದ್ರೆ ಆಗ ಇವನು ಬಾಂಬೆಯಲ್ಲಿ ನಾಟಕವಾಡಿ ಆಸ್ಪತ್ರೆಯಲ್ಲಿದ್ದ. ಬಿಜೆಪಿಯವರಿಂದ ಹಣ ಪಡೆದು ಮಲಗಿದ್ದ. ಈಗ ನನ್ನ ಮೇಲೆ ಆರೋಪ‌ ಮಾಡ್ತಿರೋದು ದೇವರು ಮೆಚ್ಚುತ್ತಾನಾ ಎಂದು ಕೆ.ಸಿ.ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನನ್ನ ಕುತ್ತಿಗೆ ಕುಯ್ದು ಸರ್ಕಾರ ತೆಗೆದ್ರು:
ನನ್ನ ಕುತ್ತಿಗೆ ಕುಯ್ದು ಸಮ್ಮಿಶ್ರ ಸರ್ಕಾರವನ್ನು ತೆಗೆದರು. ಹೀಗಾಗಿ ಮಹಾರಾಷ್ಟ್ರದಲ್ಲಿ ದೇವರೇ ಸರ್ಕಾರ ಬೀಳಿಸಿದ್ದಾರೆ. ರಾಜ್ಯದ ಉಪಚುನಾವಣೆಯಲ್ಲಿ 15ಸೀಟು ನಾವೇ ಗೆಲ್ತೀವಿ ಅಂತಾರೆ. ರಾಜಕೀಯದಿಂದಲೇ ನಾನು ನಿವೃತ್ತಿಯಾಗಬೇಕೆಂದುಕೊಂಡಿದ್ದೆ. ಆದ್ರೆ ಬಡವರ ಪ್ರೀತಿ ಮತ್ತು ಪಕ್ಷದ ಕಾರ್ಯಕರ್ತರಿಗಾಗಿ ರಾಜಕೀಯದಲ್ಲಿ ಉಳಿದಿದ್ದೀನಿ. ನಾನು ಹೆದರಿ ರಾಜಕೀಯ ಬಿಟ್ರೆ ನಿಮಗೆ ನಿಮಗೆ ಮಾಡಿದ ದ್ರೋಹವಾಗುತ್ತದೆ ಎಂದರು. 

Related Posts :

Category:

error: Content is protected !!

This website uses cookies to ensure you get the best experience on our website. Learn more