ಇಂದು SSLC ಪರೀಕ್ಷೆ ವೇಳೆ ಒಂದಷ್ಟು ಕೊರೊನಾ ರಾದ್ಧಾಂತಗಳು, ಬಾಲಕಿಯ ಕರೆದೊಯ್ದ ಸಿಬ್ಬಂದಿ

ಮಂಡ್ಯ: ಇಂದು sslc ಪರೀಕ್ಷೆ ನಡೆಯುತ್ತಿದೆ. ಈ ವೇಳೆ ರಾಜ್ಯದಲ್ಲಿ ಕೆಲ ಕಡೆ ಒಂದಷ್ಟು ಕೊರೊನಾ ರಾದ್ಧಾಂತಗಳು ಘಟಿಸಿವೆ. ಕೊಪ್ಪಳ ಜಿಲ್ಲೆಯಲ್ಲಿ ಪಾಸಿಟೀವ್ ರಿಪೋರ್ಟ್ ಬಂತೆಂದು, ಒಬ್ಬ ವಿದ್ಯಾರ್ಥಿನಿಯನ್ನು ಪರೀಕ್ಷೆ ಮಧ್ಯೆಯೇ ಕರೆದೊಯ್ಯಲಾಗಿದೆ. ಹಾಗೆಯೇ, ಮಂಡ್ಯದಲ್ಲೂ ಅಪ್ಪನಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಮಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕರೆದು ಕೊಂಡು ಹೋದ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಪೇಟೆ ಬೀದಿ ನಿವಾಸಿ‌ 50 ವರ್ಷದ ವ್ಯಕ್ತಿಗೆ‌ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಇಂದು ಪಾಂಡವಪುರದ ಖಾಸಗಿ ಶಾಲೆಯಲ್ಲಿ sslc ಪರೀಕ್ಷೆ ಬರೆಯುತ್ತಿದ್ದ ಸೋಂಕಿತನ ಮಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷಾ ಅವಧಿ ಮುಗಿವ ಮೊದಲೇ ಕರೆದೋಯ್ದಿದ್ದಾರೆ. ಸೋಂಕಿತನ ಮನೆ ಇರೋ ಪೇಟೆ ಬೀದಿಯನ್ನು ಸೀಲ್​ಡೌನ್ ಮಾಡಲಾಗಿದೆ. ಮಗಳು ಸೇರಿದಂತೆ ಮಗ ಹಾಗೂ ಪತ್ನಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ವಾಂತಿ
ಇನ್ನು ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬರು SSLC ಪರೀಕ್ಷಾ ಕೇಂದ್ರದಲ್ಲಿ ತಲೆ ನೋವು ಮತ್ತು ಕೆಮ್ಮಿನಿಂದ ಬಳಲುತ್ತಿದ್ದು ಕೊಠಡಿಯಲ್ಲಿ ವಾಂತಿ ಮಾಡಿಕೊಂಡ್ರು. ಮಲ್ಲೇಶ್ವರಂ ‌ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪರೀಕ್ಷೆ ಬರೆಯಲು ಒಂದ ವಿದ್ಯಾರ್ಥಿ ಎಕ್ಸಾಂ ಶುರುವಾದ ಒಂದು ಗಂಟೆಯೊಳಗೆ ತಲೆ ನೋವು ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ನಂತರ ತುಸು ಅಸ್ವಸ್ಥಗೊಂಡ ವಿದ್ಯಾರ್ಥಿ ಕೊಠಡಿಯಲ್ಲೇ ವಾಂತಿ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಕೊಠಡಿಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿತ್ತು. ಕೂಡಲೇ ಪೋಷಕರಿಗೆ ಮಾಹಿತಿ ನೀಡಿ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿದ್ದಾರೆ.

Related Tags:

Related Posts :

Category:

error: Content is protected !!