ಅಧಿಕಾರಿಗಳ ಮಹಾ ಎಡವಟ್ಟು: ನೆಗೆಟಿವ್ ಬಂದ ಯುವಕನನ್ನ ಕೊವಿಡ್​ ಸೆಂಟರ್​ಗೆ ಸೇರಿಸಿದ್ರು

ಕೊಪ್ಪಳ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಹಾ ಎಡವಟ್ಟು ಮಾಡಿದ್ದಾರೆ. ನೆಗೆಟಿವ್ ಬಂದ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊಸಹಳ್ಳಿಯ ಕೊವಿಡ್​ ಸೆಂಟರ್​ಗೆ ದಾಖಲಿಸಿದ್ದ ಘಟನೆ ಯಲಬುರ್ಗಾ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊರೊನಾ ನೆಗೆಟಿವ್ ಇರುವ ಯುವಕನನ್ನು ಕೊವಿಡ್​ ಸೆಂಟರ್​ಗೆ ದಾಖಲಿಸಿದ್ರು. ಈ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ಬಳಿಕ ಯುವಕನನ್ನು ಬಿಟ್ಟುಕಳಿಸಿರುವ ಘಟನೆ ನಡೆದಿದೆ. ಆರೋಗ್ಯ ಇಲಾಖೆಯ ಎಡವಟ್ಟಿಗೆ ಯುವಕ ಕಣ್ಣೀರು ಹಾಕಿದ್ದಾನೆ. ಕೊರೊನಾ ನೆಗೆಟಿವ್ ಎಂದು ಎಸ್​ಎಂಎಸ್ ಬಂದಿತ್ತು.

SMS​ ತೋರಿಸಿದರೂ ಆರೋಗ್ಯ ಇಲಾಖೆ ಸಿಬ್ಬಂದಿ ನನ್ನನ್ನು ಬಿಡದೆ ಕರೆದುಕೊಂಡು ಹೋಗಿದ್ದರು. ಕೊವಿಡ್ ಸೆಂಟರ್​ನಲ್ಲಿ ಪಾಸಿಟಿವ್ ಬಂದವರು ಇದ್ದರು. ನನಗೂ ಕೊರೊನಾ ಸೋಂಕು ತಗುಲಿದರೆ ಯಾರು ಹೊಣೆ. ಇದೀಗ ನನಗೆ ಕೊರೊನಾ ಸೋಂಕು ಭಯ ಕಾಡುತ್ತಿದೆ. ಗ್ರಾಮದಿಂದ ಹೊರಗಡೆ ಹೋದರೆ ಜನರು ಬೈಯ್ಯುತ್ತಿದ್ದಾರೆ. ಎಂದು ವಿಡಿಯೋ ಮಾಡಿ ಯುವಕ ಅಳಲು ತೋಡಿಕೊಂಡಿದ್ದಾನೆ.

Related Tags:

Related Posts :

Category:

error: Content is protected !!