ಆರೋಗ್ಯ ಇಲಾಖೆ ಎಡವಟ್ಟು: ಡಿಸ್ಚಾರ್ಜ್ ಆದ ವ್ಯಕ್ತಿಯ ಮನೆ ಸೀಲ್​​ಡೌನ್

ಧಾರವಾಡ: ಕೊರೊನಾ ವಿಷಯದಲ್ಲಿ ಪದೇ ಪದೇ ಎಡವುತ್ತಿರೋ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದಾರೆ. ಸೋಂಕಿತನೊಬ್ಬ ಗುಣಮುಖನಾಗಿ ಡಿಸ್ಚಾರ್ಜ್ ಆದ ಬಳಿಕ ಅವನ ಮನೆ ಸೀಲ್​​ಡೌನ್ ಮಾಡಿರುವ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಜುಲೈ 25ರಂದು 32 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಧಾರವಾಡದ ಬಿಸಿಎಂ ಹಾಸ್ಟೆಲ್​ನಲ್ಲಿ ಸೋಂಕಿತ  ಚಿಕಿತ್ಸೆ ಪಡೆದಿದ್ದರು. ಆಗಸ್ಟ್ 3ರಂದು ಕೊರೊನಾದಿಂದ ಗುಣಮುಖನಾಗಿ ಡಿಸ್ಚಾರ್ಜ್ ಸಹ ಆದ್ರು. ಆದರೆ ಇಂದು ಆರೋಗ್ಯ ಅಧಿಕಾರಿಗಳು ಈತನ ಮನೆ ಸೀಲ್​ಡೌನ್ ಮಾಡಿದ್ದಾರೆ.

ಹಾಗಾಗಿ, ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರೈನ್ ಹೋದ ಮೇಲೆ ಟಿಕೆಟ್ ತಗೊಂಡ್ರೂ ಎಂಬಂತೆ. ಸೋಂಕಿನಿಂದ ಗುಣಮುಖರಾದ ಬಳಿಕ ಮನೆ ಸೀಲ್​ಡೌನ್ ಮಾಡಲು ಅದೀಕಾರಿಗಳು ಬಂದಿದ್ದು ನಿಜಕ್ಕೂ ವಿಪರ್ಯಾಸ.

Related Tags:

Related Posts :

Category: