Sugarcane Juice: ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ
ಬೇಸಿಗೆಯಲ್ಲಿ ಕಬ್ಬಿನ ರಸ ಅಥವಾ ಕಬ್ಬಿನ ಹಾಲನ್ನು ಕುಡಿಯಲು ಬಯಸುತ್ತಾರೆ. ಈ ರಸದಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿದೆಯಾದರೂ ಆಗಾಗ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕಬ್ಬಿನ ರಸ ಅತಿಯಾದರೆ ದೇಹಕ್ಕೆ ಆರೋಗ್ಯಕರವಲ್ಲ ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಇದನ್ನು ಮಿತಿಮೀರಿ ಕುಡಿಯಬಾರದು ಎಂದು ಹೇಳುತ್ತದೆ. ಆದರೆ ಸುಡುವ ಬಿಸಿಲಿನಲ್ಲಿ, ಬಾಯಾರಿಕೆ ಆದಾಗ ಕಬ್ಬಿನ ರಸವನ್ನು ಕುಡಿಯಬಹುದು. ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚಾಗಿ ಕುಡಿಯದಿದ್ದರೆ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಿದ್ದು ಪ್ರಕೃತಿಯಲ್ಲಿ ಬೇಸಿಗೆಯ ಶಾಖವು ಕ್ರಮೇಣ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ತಾಪಮಾನ ಹೆಚ್ಚಾದಂತೆ ಬಾಯಾರಿಕೆ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ತಂಪು ಪಾನೀಯವನ್ನು ಆಗಾಗ ಕುಡಿಯಬೇಕು ಎಂದು ಮನಸ್ಸಿಗೆ ಅನಿಸುವುದು ಬಹಳ ಸಹಜ. ಹಾಗಾಗಿ ಅನೇಕರು ಕಬ್ಬಿನ ರಸ(Sugarcane Juice) ಅಥವಾ ಕಬ್ಬಿನ ಹಾಲನ್ನು ಕುಡಿಯಲು ಬಯಸುತ್ತಾರೆ. ಈ ರಸದಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿದೆಯಾದರೂ ಆಗಾಗ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕಬ್ಬಿನ ರಸ ಅತಿಯಾದರೆ ದೇಹಕ್ಕೆ ಆರೋಗ್ಯಕರವಲ್ಲ ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಇದನ್ನು ಮಿತಿಮೀರಿ ಕುಡಿಯಬಾರದು ಎಂದು ಹೇಳುತ್ತದೆ. ಆದರೆ ಸುಡುವ ಬಿಸಿಲಿನಲ್ಲಿ, ಬಾಯಾರಿಕೆ ಆದಾಗ ಕಬ್ಬಿನ ರಸವನ್ನು ಕುಡಿಯಬಹುದು. ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚಾಗಿ ಕುಡಿಯದಿದ್ದರೆ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಹಾಗಾಗಿ ಯಾವುದನ್ನೂ ಅತಿಯಾಗಿ ಸೇವನೆ ಮಾಡುವುದು ಸೂಕ್ತವಲ್ಲ. ಇದು ಕಬ್ಬಿನ ರಸಕ್ಕೂ ಕೂಡ ಅನ್ವಯವಾಗುತ್ತದೆ. ಆದರೆ ಇದನ್ನು ಮಿತವಾಗಿ ಸೇವನೆ ಮಾಡಿದಲ್ಲಿ ಅನೇಕ ರೀತಿಯ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು. ಅದಲ್ಲದೆ ಕಬ್ಬಿನ ರಸವು ಪೌಷ್ಠಿಕಾಂಶದ ಪ್ರಯೋಜನಗಳನ್ನು ಸಹ ಹೊಂದಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಬೇಸಿಗೆಯಲ್ಲಿ ಕಬ್ಬಿನ ರಸವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು. ಜೊತೆಗೆ ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದಲ್ಲದೆ, ಕಬ್ಬಿನ ರಸದಲ್ಲಿರುವ ಖನಿಜಗಳು ಮೂಳೆಗಳನ್ನು ಬಲಪಡಿಸುತ್ತವೆ.
ಇದನ್ನೂ ಓದಿ: ಅಡುಗೆಗೆ ಯಾವ ಎಣ್ಣೆ ಬಳಕೆ ಮಾಡಬೇಕು ಎನ್ನುವ ಗೊಂದಲಕ್ಕೆ ಡಾ. ಜಯೇಶ್ ಶರ್ಮಾ ನೀಡಿರುವ ಸಲಹೆ ಇಲ್ಲಿದೆ
ಕಬ್ಬಿನ ರಸದ ಪ್ರಯೋಜನಗಳೇನು?
*ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
*ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
*ಹಲ್ಲುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
*ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
*ರಕ್ತದೊತ್ತಡವನ್ನು ಸ್ಥಿರಗೊಳಿಸುತ್ತದೆ.
*ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.
*ಪಾರ್ಶ್ವವಾಯುವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
*ವೃದ್ಧಾಪ್ಯವನ್ನು ನಿಧಾನಗೊಳಿಸುತ್ತದೆ.
*ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆದರೆ ಇದನ್ನು ಪ್ರತಿನಿತ್ಯ ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತದೆ. ಹಾಗಾಗಿ ಇದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸೇವನೆ ಮಾಡಬೇಡಿ. ಬಿಸಿಲು ಹೆಚ್ಚಿದ್ದಾಗಲೂ ಇದರ ಪ್ರಮಾಣ ಮಿತಿಯಲ್ಲಿರಲಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ