Art Of Yoga: ಪಂಚ ಮಹಾಪ್ರಾಣ ಎಂದರೇನು? ದೇಹಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

Art Of Yoga: ಪಂಚ ಮಹಾಪ್ರಾಣ ಎಂದರೇನು? ದೇಹಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ
Pancha Maha Prana

Art Of Yoga: ಪ್ರಾಣ ಎಂದರೆ ವಾಯು, ದೇಹದಲ್ಲಿ ಪ್ರಾಣ ಐದು ವಿಧಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಈ ಪಂಚ ವಾಯು ಅಂದರೆ ಪ್ರಾಣ ವಾಯು, ಸಮಾನ ವಾಯು, ಉದಾನ ವಾಯು, ಅಪಾನ ವಾಯು, ಹಾಗೂ ವ್ಯಾನ ವಾಯು- ಮಾನವ ಕಾರ್ಯವಿಧಾನದ ವಿಭಿನ್ನ ಅಂಶಗಳನ್ನು ನಿರ್ದೇಶಿಸುತ್ತವೆ.

TV9kannada Web Team

| Edited By: Apurva Kumar Balegere

May 25, 2022 | 3:27 PM

ಪ್ರಾಣ ಎಂದರೆ ವಾಯು, ದೇಹದಲ್ಲಿ ಪ್ರಾಣ ಐದು ವಿಧಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಈ ಪಂಚ ವಾಯು ಅಂದರೆ ಪ್ರಾಣ ವಾಯು, ಸಮಾನ ವಾಯು, ಉದಾನ ವಾಯು, ಅಪಾನ ವಾಯು, ಹಾಗೂ ವ್ಯಾನ ವಾಯು- ಮಾನವ ಕಾರ್ಯವಿಧಾನದ ವಿಭಿನ್ನ ಅಂಶಗಳನ್ನು ನಿರ್ದೇಶಿಸುತ್ತವೆ. ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಈ ಜ್ವಾಲೆ ಮೇಲ್ಮುಖವಾಗಿ ಹರಿಯುವಂತದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋಶ. ಉಸಿರಾಟದ ಪ್ರಕ್ರಿಯೆಯನ್ನು ನಿರ್ವಹಿಸುವುದೇ ಈ ಪ್ರಾಣ ವಾಯು. ಚಕ್ರ ಹಾಗೂ ಪಂಚ ಪ್ರಾಣವಾಯುವಿನ ನಡುವೆ ಇರುವ ಸಂಬಂಧದ ಕುರಿತು ಇಲ್ಲಿ ವಿವರಿಸಲಾಗಿದೆ.

ಉಸಿರಾಟದ ಅಂಗಾಂಗಗಳು, ಮತ್ತು ಇವುಗಳಿಗೆ ಸಂಬಂಧಿಸಿದ ಮಾಂಸಖಂಡಗಳನ್ನು ಇದು ನಿಯಂತ್ರಿಸುತ್ತದೆ. ಪ್ರಾಣ ವಾಯುವಿನ ಹರಿವಿನಿಂದ ಸಂವೇದನೆಯ, ಭಾವನೆಗಳ ಅನುಭವ ಆಗುತ್ತದೆ. ಇಷ್ಟೇ ಅಲ್ಲದೆ ಈ ಪ್ರಾಣ ವಾಯುವು ಮನಸ್ಸು ಹಾಗೂ ದೇಹದ ಹತೋಟಿಗೆ ಕಾರಣವಾಗಿದೆ. ಉಳಿದ ನಾಲ್ಕು ವಾಯುಗಳೂ  ಕೂಡಾ,  ಈ ಪ್ರಾಣ ವಾಯುವಿನಿಂದಲೇ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಪ್ರಾಣಾಯಾಮ ಹಾಗೂ ಯೋಗದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.

ಒಮ್ಮೆ ಪ್ರಾಣದ ಮೇಲೆ ನಿಯಂತ್ರಣ ಹೊಂದಿದರೆಂದರೆ, ಅವರು ನೂರು ಪ್ರತಿಶತ ಮಾನಸಿಕ ಸಮತೋಲನ ಹೊಂದಿರುತ್ತಾರೆ. ಇದರಿಂದ ನಿಮ್ಮ ದೈಹಿಕ ಕಾಯಿಲೆಗಳನ್ನೂ ಬಹಳಷ್ಟು ಮಟ್ಟಕ್ಕೆ ನಿಯಂತ್ರಿಸಬಹುದು. ಆದರೂ ನಾವು ದಿನನಿತ್ಯ ಪ್ರಭಾವಕ್ಕೊಳಗಾಗುವ ಸೋಂಕು ಮತ್ತು ಹಲವು ರೀತಿಯ ರಾಸಾಯನಿಕಗಳು ಮತ್ತು ವಿಷಗಳು ಸೇರಿದಂತೆ ವಿವಿಧ ರೀತಿಯ ಅಪಾಯ ಇದ್ದೇ ಇರುತ್ತದೆ.

ಗಾಳಿ, ನೀರು ಮತ್ತು ಆಹಾರದ ಮೂಲಕ ನಾವೇನು ನಮ್ಮೊಳಗೆ ತೆಗೆದುಕೊಳ್ಳುತ್ತೇವೆ ಎಂಬುದರ ಕುರಿತು ಪೂರ್ಣ ನಿಯಂತ್ರಣ ಅಸಾಧ್ಯ. ಆದರೆ, ಈ ಅಂಶಗಳು ನಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿಸುತ್ತದೆ.

 • ಪಂಚ ಮಹಾಪ್ರಾಣಗಳು ಯಾವುವು? ಪಂಚ ವಾಯುಗಳು ಮತ್ತು ಅದಕ್ಕೆ ಸಂಬಂಧಿಸಿದ ಚಕ್ರಗಳ ಬಗ್ಗೆ ಮಾಹಿತಿ ಇಲ್ಲಿದೆ ಅಪಾನವಾಯು: ಅಪಾನವಾಯು ಸ್ಥಳ: ಮೂತ್ರಪಿಂಡ
 • ತತ್ವ: ಭೂಮಿ
 • ಚಕ್ರ: ಮೂಲಾಧಾರ ಚಕ್ರ
 • ಸಕ್ರಿಯಗೊಳಿಸುವುದು ಹೇಗೆ: ನೌಲಿ ಕ್ರಿಯಾ, ಅಗ್ನಿಸಾರ ಕ್ರಿಯಾ, ಅಶ್ವಿನಿ ಮುದ್ರ ಹಾಗೂ ಮೂಲಬಂಧ

ಶ್ವಾಸಕೋಶಗಳು ಮತ್ತು ವಿಸರ್ಜನಾ ವ್ಯವಸ್ಥೆಯ ಮೂಲಕ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವುದು ಅಪಾನವಾಯುವಿನ ಕಾರ್ಯಭಾರವಾಗಿದೆ. ಹೊಟ್ಟೆಯನ್ನು, ಹೊಕ್ಕುಳ ಪ್ರದೇಶದ ಕೆಳಗೆ, ಮತ್ತು ದೊಡ್ಡ ಕರುಳು, ಮೂತ್ರಪಿಂಡಗಳು, ಗುದದ್ವಾರ ಮತ್ತು ಜನನಾಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇದು ದೇಹದಿಂದ ತ್ಯಾಜ್ಯವನ್ನು ಹೊರಹಾಕುವುದಕ್ಕೆ ಸಂಬಂಧಿಸಿದೆ.

 • ಸಮಾನವಾಯು
 • ಸ್ಥಳ: ಸೋಲಾರ್ ಪ್ಲೆಕ್ಸಸ್
 • ತತ್ವ:ಅಗ್ನಿ
 • ಚಕ್ರ: ಮಣಿಪುರ ಚಕ್ರ
 • ಸಕ್ರಿಯಗೊಳಿಸುವುದು ಹೇಗೆ: ಕ್ರಿಯಾ ಯೋಗ, ಅಗ್ನಿಸಾರ ಕ್ರಿಯಾ.

ಸಮಾನವಾಯು ಹೃದಯ ಮತ್ತು ಹೊಕ್ಕುಳ ನಡುವೆ ಇದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿಯಂತ್ರಿಸುತ್ತದೆ: ಯಕೃತ್ತು, ಕರುಳುಗಳು, ಮೇದೋಜ್ಜೀರಕ ಗ್ರಂಥಿ ಮತ್ತು ಹೊಟ್ಟೆ, ಮತ್ತು ಅವುಗಳ ಸ್ರವಿಸುವಿಕೆ. ಪರಿವರ್ತನೆಗೆ ಸಮಾನವಾಯು ಕಾರಣವಾಗಿದೆ. ಭೌತಿಕ ಮಟ್ಟದಲ್ಲಿ ಇದು ಪೋಷಕಾಂಶಗಳ ಸಮೀಕರಣ ಮತ್ತು ವಿತರಣೆಗೆ ಸಂಬಂಧಿಸಿದೆ.

 • ಪ್ರಾಣವಾಯು
 • ಸ್ಥಳ: ಹೃದಯ
 • ತತ್ವ:ಗಾಳಿ
 • ಚಕ್ರ: ಅನಾಹತ
 • ಸಕ್ರಿಯಗೊಳಿಸುವುದು ಹೇಗೆ: ಭಸ್ತ್ರಿಕಾ, ನಾಡಿಶುದ್ಧಿ ಹಾಗೂ ಉಜ್ಜಯಿ ಪ್ರಾಣಾಯಾಮ

ಹೃದಯದ ಬಡಿತ ಮತ್ತು ಉಸಿರಾಟ ಪ್ರಾಣವಾಯುವಿನ ಕಾರ್ಯಭಾರವಾಗಿದೆ. ಪ್ರಾಣವು ಉಸಿರಿನ ಮೂಲಕ ಶರೀರವನ್ನು ಪ್ರವೇಶಿಸುತ್ತದೆ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಪ್ರತಿ ಜೀವಕೋಶಕ್ಕೆ ಕಳಿಸಲ್ಪಡುತ್ತದೆ.

 • ಉದಾನವಾಯು
 • ಸ್ಥಳ: ಗಂಟಲು ಅಥವಾ ತಲೆ
 • ತತ್ವ:ಸ್ವಚ್ಛ ಆಕಾಶ
 • ಚಕ್ರ: ವಿಶುದ್ಧ, ಆಜ್ಞಾ
 • ಸಕ್ರಿಯಗೊಳಿಸುವುದು ಹೇಗೆ: ಉಜ್ಜಯಿ, ಭ್ರಮರಿ, ವಿಪರೀತ ಕರಣಿ

ಧ್ವನಿ ಉಪಕರಣದ ಮೂಲಕ ಧ್ವನಿ ಉತ್ಪಾದನೆಯು ಉದಾನವಾಯುವಿನ ಕಾರ್ಯಭಾರವಾಗಿದೆ, ಉದಾ. ಮಾತಾಡುವುದು, ಹಾಡುವುದು, ನಗುವುದು ಮತ್ತು ಅಳುವುದು. ಜೊತೆಗೆ ಇದು ಜೀವಿಯ ಉದ್ದೇಶಕ್ಕೆ ಅನುಗುಣವಾದ ಧ್ವನಿಗಳನ್ನು ಉತ್ಪಾದಿಸಲು ಅಗತ್ಯವಾದ ಜಾಗೃತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಉದಾನವು ಉನ್ನತ ಕೇಂದ್ರಗಳಿಗೆ ದೇಹದ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ.

 • ವ್ಯಾನವಾಯು
 • ಸ್ಥಳ: ಉಸಿರಾಟ
 • ತತ್ವ: ನೀರು
 • ಚಕ್ರ: ಸ್ವಾಧಿಷ್ಠಾನ
 • ಕ್ರಿಯಾಶೀಲವಾಗಿಸುವುದು: ದೀರ್ಘವಾಗಿ ಉಸಿರು ತೆಗೆದುಕೊಳ್ಳಿ ದೀರ್ಘವಾಗಿ ಉಸಿರು ಬಿಡಿ, ದೀರ್ಘವಾಗಿ ಉಸಿರು ತೆಗೆದುಕೊಳ್ಳಿ ಉಸಿರಾಡುವಾಗ

ನಾಲ್ಕು ವಿಧಗಳಿವೆ ಅವುಗಳು ಅಂತರ್ ಪೂರಕ, ಅಂತರ್ ​ಕುಂಭಕ, ಉಸಿರನ್ನು ಬಿಡುವುದು ರೇಚಕ,ಉಸಿರನ್ನು ಬಿಗಿ ಹಿಡಿಯುವುದು ಬಾಹಿರ್​ ಕುಂಭಕ.

 1. -ಮೊದಲು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ ನಿಧಾನವಾಗಿ ಉಸಿರನ್ನು ಬಿಡಿ
 2. -ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳಿ- ಅಂತರ್​ ಕುಂಭಕ
 3. -ಉಸಿರನ್ನು ತೆಗೆದುಕೊಳ್ಳುವುದು ಪೂರಕ, ಉಸಿರನ್ನು ತೆಗೆದುಕೊಂಡ ಬಳಿಕ ಅದು ಅಂತರ್​ಕುಂಭಕ, ಉಸಿರನ್ನು ಬಿಡುವುದು ರೇಚಕ, ಉಸಿರನ್ನು ಬಿಟ್ಟ

ಬಳಿಕ ಉಸಿರನ್ನು ಬಿಗಿ ಹಿಡಿಯುವುದು ಬಾಹಿರ್​ ಕುಂಭಕ.

ವ್ಯಾನವು ಇಡೀ ದೇಹವನ್ನು ವ್ಯಾಪಿಸುತ್ತದೆ, ಎಲ್ಲಾ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಇತರ ಪ್ರಾಣಗಳನ್ನು ಸಂಯೋಜಿಸುತ್ತದೆ. ಇದು ಇತರ ಪ್ರಾಣಗಳಿಗೆ ಮೀಸಲು ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ.

ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ. ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada