Back Pain: ಬೆನ್ನು ನೋವಿದಿಯೇ? ಹಾಗಾದರೆ ಈ ಆಹಾರಗಳನ್ನು ತಿನ್ನಲೇಬೇಡಿ

ಬೆನ್ನು ನೋವು (Back pain)ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಕಚೇರಿಯಲ್ಲಿ ದಿನದ 8 ರಿಂದ 10 ಗಂಟೆಗಳ ಕಾಲ ಲ್ಯಾಪ್​ಟಾಪ್​ ಮುಂದೆ ಕೂರುವ ಬಹುತೇಕರಿಗೆ ಬೊಜ್ಜು ಜತೆಯಲಿ ಬರುವ ಫ್ರೀ ಕಾಯಿಲೆ ಎಂದರೆ ಈ ಬೆನ್ನು ನೋವು.

Back Pain: ಬೆನ್ನು ನೋವಿದಿಯೇ? ಹಾಗಾದರೆ ಈ ಆಹಾರಗಳನ್ನು ತಿನ್ನಲೇಬೇಡಿ
Back Pain
Follow us
TV9 Web
| Updated By: ನಯನಾ ರಾಜೀವ್

Updated on: Jun 15, 2022 | 8:00 AM

ಬೆನ್ನು ನೋವು (Back pain)ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಕಚೇರಿಯಲ್ಲಿ ದಿನದ 8 ರಿಂದ 10 ಗಂಟೆಗಳ ಕಾಲ ಲ್ಯಾಪ್​ಟಾಪ್​ ಮುಂದೆ ಕೂರುವ ಬಹುತೇಕರಿಗೆ ಬೊಜ್ಜು ಜತೆಯಲಿ ಬರುವ ಫ್ರೀ ಕಾಯಿಲೆ ಎಂದರೆ ಈ ಬೆನ್ನು ನೋವು. ಬೆನ್ನು ನೋವು ಬಂದಾಗ ಬೆನ್ನುಹುರಿಯಲ್ಲಿ ಅತಿಯಾದ ನೋವು ಉಂಟಾಗುತ್ತದೆ. ಬೆನ್ನು ನೋವು ಉಂಟಾದರೆ ಇಡೀ ದೇಹದಲ್ಲೇ ನೋವಿರುವಂತೆ ಭಾಸವಾಗುತ್ತದೆ.

ಬೆನ್ನು ನೋವು ಎಂಬುದು ಯಾವ ವಯಸ್ಸಿನವರನ್ನಾದರೂ ಕಾಡಬಹುದು. 2018ರ ಲ್ಯಾನ್ಸೆಟ್ ವರದಿ ಪ್ರಕಾರ ಬೆನ್ನು ನೋವು ಎಂಬುದು ಇಡೀ ವಿಶ್ವಾದ್ಯಂತ ಬಹುತೇಕ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ.

ಈ ಬೆನ್ನು ನೋವಿನ ಸಮಸ್ಯೆ ನಿವಾರಿಸಿಕೊಳ್ಳಲು ಸಾಕಷ್ಟು ಕಷ್ಟಪಡುತ್ತಾರೆ, ವ್ಯಾಯಾಮಗಳನ್ನು ಮಾಡುತ್ತಾರೆ, ನ್ಯಾಚ್ಯುರೋಪತಿಯಂತಹ ಚಿಕಿತ್ಸೆಗಳನ್ನು ಪಡೆಯುತ್ತಾರೆ. ಅದನ್ನು ಆಹಾರದಿಂದಲೂ ನಿಯಂತ್ರಿಸಬಹುದು ಎಂಬುದು ಸಾಕಷ್ಟು ಮಂದಿಗೆ ತಿಳಿದಿಲ್ಲ.

ಗ್ಲುಟೆನ್: ಮೆಡಿಕಲ್ ಹೈಪೋಥೀಸೀಸ್ ಜರ್ನಲ್​ನ 2022ರ ವರದಿ ಪ್ರಕಾರ , ಗ್ಲುಟೆನ್ ಹೆಚ್ಚಿರುವ ಗೋಧಿ, ಬಾರ್ಲಿಯಂತಹ ಆಹಾರವನ್ನು ಹೆಚ್ಚು ಸೇವಿಸಬೇಡಿ, ಗ್ಲುಟೆನ್ ಮುಕ್ತ ಆಹಾರವನ್ನು ಸೇವಿಸುವಂತೆ ತಿಳಿಸಲಾಗಿದೆ.

ಕೊಬ್ಬು: ಆರೋಗ್ಯಕ್ಕೆ ಆರೋಗ್ಯಕರ ಕಬ್ಬಿನ ಅವಶ್ಯಕತೆ ಇದೆ, ಆದರೆ ಕುರುಕುಲು ತಿಂಡಿಗಳು, ಕರಿದ ಪದಾರ್ಥ, ಮೈದಾ ಹೆಚ್ಚು ಬಳಕೆಯಿಂದಾಗಿ ದೇಹದಲ್ಲಿ ಬೇಡದ ಕೊಬ್ಬು ಹೆಚ್ಚಾಗಿ ಅದು ಕೂಡ ಬೆನ್ನು ನೋವಿಗೆ ಕಾರಣವಾಗಬಹುದು. ಹೀಗಾಗಿ ಅಂತಹ ಆಹಾರಗಳನ್ನು ಬಿಟ್ಟುಬಿಡಿ.

ಸಕ್ಕರೆ: ಸಕ್ಕರೆ ಎಂಬುದು ಹೆಲ್ದಿ ಡಯೆಟ್​ನಲ್ಲಿ ಇರಲೇಬೇಕು, ಆದರೆ ಸಕ್ಕರೆಯು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ತೂಕ ಹೆಚ್ಚಳ, ಒಬೆಸಿಯಂತಹ ತೊಂದರೆಗಳು ಹೆಚ್ಚಾಗುತ್ತದೆ. ಹೀಗಾಗಿ ಸಕ್ಕರೆಯನ್ನು ಮೊದಲು ಬಿಟ್ಟುಬಿಡಿ. ಗಾಯ ಊತ, ಕ್ಯಾನ್ಸರ್ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಹಲವು ಕಾರಣಗಳಿಂದ ಬೆನ್ನು ನೋವು ಉಂಟಾಗುತ್ತದೆ. ಕೆಳಬೆನ್ನಿನಲ್ಲಿ ಅಥವಾ ಸೊಂಟದಲ್ಲಿ ನೋವು ಹೆಚ್ಚಾಗಿರುತ್ತದೆ.

ಸಾಕಷ್ಟು ಪ್ರಕರಣಗಳಲ್ಲಿ ಬೆನ್ನಿನ ಮಾಂಸಖಂಡಗಳು ದುರ್ಬಲವಾಗುತ್ತವೆ. ವೃದ್ಧಾಪ್ಯವೂ ಬೆನ್ನು ನೋವಿಗೆ ಕಾರಣವಾಗಬಹುದು. ವಯಸ್ಸಾಗುತ್ತಿರುವಂತೆ ಬೆನ್ನು ಮೂಳೆಯ ಮೇಲೆ ಹೆಚ್ಚಿನ ಭಾರ ಬಿದ್ದು, ನೋವು ಕಾಲುಗಳಿಗೂ ವಿಸ್ತರಿಸಬಹುದು. ಹೀಗೆ ಮಾಡಿ

ಐಸ್ ಪ್ಯಾಕ್ ಇಟ್ಟುಕೊಳ್ಳಿ ದಿನಕ್ಕೆ  ಕನಿಷ್ಟ 2-3 ಬಾರಿ ಐಸ್ ಪ್ಯಾಕ್ ಇರಿಸಿಕೊಂಡರೆ ಸ್ವಲ್ಪ ಕಡಿಮೆಯಾಗುತ್ತದೆ. ನೋವಿನಿಂದ ಊತವುಂಟಾಗಿದ್ದರೂ ಕಡಿಮೆಯಾಗುತ್ತದೆ.

ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ ನಡೆದಾಡುವಾಗಲೂ ಸರಿಯಾದ ಭಂಗಿ ಅನುಸರಿಸುವುದು ಮುಖ್ಯ. ಸೂಕ್ತವಾದ ರೀತಿಯಲ್ಲಿ ಕುಳಿತಕೊಳ್ಳುವುದರಿಂದ ಹಿಂಭಾಗದ ಮಾಂಸಖಂಡಗಳ ಮೇಲೆ ಹೆಚ್ಚಿನ ಒತ್ತಡವುಂಟಾಗುವುದಿಲ್ಲ. ಕಾಲು ಹಾಗೂ ಬೆನ್ನನ್ನು ನೇರವಾಗಿಟ್ಟುಕೊಳ್ಳಬೇಕು ಇದರಿಂದ ಬೆನ್ನು ನೋವು ಬಾರದಂತೆಯೂ ತಡೆಯಬಹುದು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ