Blood Pressure: ಮನೆಯಲ್ಲಿಯೇ ರಕ್ತದೊತ್ತಡ ಸಮಸ್ಯೆಗೆ ಚಿಕಿತ್ಸೆ ಮಾಡಲು ಇಲ್ಲಿದೆ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2022 | 2:43 PM

ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಮಗೆ ಸಹಾಯ ಮಾಡುವ ಕೆಲವು ತಂತ್ರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಮನೆಯಲ್ಲಿಯೇ ಕೆಲವು ಸರಳ ಹಂತಗಳ ಮೂಲಕ ನಿಮ್ಮ ಬಿಪಿಯನ್ನು ತಕ್ಷಣವೇ ಹೇಗೆ ಕಡಿಮೆ ಮಾಡಬಹುದು ಎಂಬುವುದನ್ನು ತಿಳಿಯಲು ಇಲ್ಲಿದೆ ಸಲಹೆ.

Blood Pressure: ಮನೆಯಲ್ಲಿಯೇ ರಕ್ತದೊತ್ತಡ ಸಮಸ್ಯೆಗೆ ಚಿಕಿತ್ಸೆ ಮಾಡಲು ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
Image Credit source: google images
Follow us on

ಅಧಿಕ ರಕ್ತದೊತ್ತಡವು ಹೃದ್ರೋಗದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದನ್ನು ಹಾಗೆಯೇ ಬಿಟ್ಟರೆ, ಇದು ಅನೇಕ ಅಪಾಯಕಾರಿ ಕಾಯಿಲೆಗಳು, ಹೃದಯ, ಮೆದುಳು ಮತ್ತು ಮೂತ್ರ ಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಮತ್ತು ಇದು ಮಾರಣಾಂತಿಕವಾಗಿ ಪರಿಣಮಿಸಬಹುದು. ಆದ್ದರಿಂದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಮಗೆ ಸಹಾಯ ಮಾಡುವ ಕೆಲವು ತಂತ್ರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಮನೆಯಲ್ಲಿಯೇ ಕೆಲವು ಸರಳ ಹಂತಗಳ ಮೂಲಕ ನಿಮ್ಮ ಬಿಪಿಯನ್ನು ತಕ್ಷಣವೇ ಹೇಗೆ ಕಡಿಮೆ ಮಾಡಬಹುದು ಎಂಬುವುದನ್ನು ತಿಳಿಯಲು ಇಲ್ಲಿದೆ ಸಲಹೆ.

ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಅಪಧಮನಿಗಳ ಮೇಲೆ ಪರಿಣಾಮವನ್ನು ಬೀರುವ ಸ್ಥಿತಿಯಾಗಿವೆ. ಹೈಪರ್ ಟೆನ್ಷನ್ ಅಂತಲೂ ಕರೆಯಲ್ಪಡುವ ರಕ್ತದೊತ್ತಡವನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ ಅದು ಅಪಾಯಕಾರಿಯಾಗಿ ಪರಿಣಮಿಸಬಹುದು. ಅಧಿಕ ರಕ್ತದೊತ್ತಡವು ಹೃದ್ರೋಗದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ, ಅಪಧಮನಿಯ ಗೋಡೆಗಳ ವಿರುದ್ಧ ರಕ್ತದ ಒತ್ತಡವು ಸ್ಥಿರವಾಗಿ ಹೆಚ್ಚಾಗುತ್ತದೆ. ಆಗ ರಕ್ತವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕು. ಅನಿಯಂತ್ರಿತ ಅಧಿಕ ರಕ್ತದೊತ್ತಡವು ಅಂಗ ವೈಕಲ್ಯ, ಕಳಪೆ ಗುಣಮಟ್ಟದ ಜೀವನ ಅಥವಾ ಮಾರಣಾಂತಿಕ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡವು ಯಾವ ಹಾನಿಯನ್ನು ಉಂಟು ಮಾಡುತ್ತದೆ ?

ಮೇಯೊ ಕ್ಲಿನಿಕ್ ಪ್ರಕಾರ ಅನಿಯಂತ್ರಿತ ಅಧಿಕ ರಕ್ತದೊತ್ತಡವು ಅಪಾರ ಹಾನಿಯನ್ನು ಉಂಟು ಮಾಡುತ್ತದೆ.
ಅಪಧಮನಿಗಳು: ಹೃದಯದ ಅಪಧಮನಿಗಳು ಆರೋಗ್ಯಕರ ಮತ್ತು ಹೊಂದಿಕೊಳ್ಳುವ ಬಲವಾದ ಸ್ಥಿತಿಸ್ಥಾಪಕವಾಗಿದೆ. ಅವುಗಳ ಒಳ ಪದರವು ಮೃದುವಾಗಿರುತ್ತದೆ. ಇದರಿಂದಾಗಿ ರಕ್ತವು ಮುಕ್ತವಾಗಿ ಹರಿಯುತ್ತದೆ. ಪ್ರಮುಖ ಅಂಗಗಳು ಮತ್ತು ಅಂಗಾಂಶಗಳಿಗೆ ಪೋಷಕಾಂಶ ಹಾಗೂ ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡ ಹಾಗೂ ಹೈಪರ್ ಟೆನ್ಷನ್ ಹಾನಿಗೊಳಗಾದ ಮತ್ತು ಕಿರಿದಾದ ಅಪಧಮನಿಗಳನ್ನು ಉಂಟು ಮಾಡುತ್ತದೆ. ಮತ್ತು ಇದರಿಂದ ಅಪಧಮನಿಗಳ ಒಳ ಪದರದ ಜೀವಕೋಶಗಳಿಗೆ ಸಂಪೂರ್ಣ ಹಾನಿಯಾಗುತ್ತದೆ.

ಅಲ್ಲದೆ ದುರ್ಬಲಗೊಂಡ ಅಪಧಮನಿಯ ಮೂಲಕ ಚಲಿಸುವ ರಕ್ತದ ನಿರಂತರ ಒತ್ತಡವು ಅದರ ಗೋಡೆಯ ಒಂದು ಭಾಗವನ್ನು ವಿಸ್ತರಿಸಲು ಮತ್ತು ಉಬ್ಬುವಿಕೆಯನ್ನು ರೂಪಿಸಲು ಕಾರಣವಾಗುತ್ತದೆ. ಇದನ್ನು ಅನ್ಯೂರಿಮ್ ಎಂದು ಕರೆಯುತ್ತಾರೆ. ಇದು ಅತ್ಯಂತ ಅಪಾಯಕಾರಿ ಮತ್ತು ಜೀವಕ್ಕೆ ಅಪಾಯಕಾರಿಯಾಗುವಂತಹ ಆಂತರಿಕ ರಕ್ತಸ್ರಾವವನ್ನು ಉಂಟು ಮಾಡುತ್ತದೆ.

ಹೃದಯ: ಹೃದಯವು ಅತ್ಯಂತ ಪ್ರಮುಖವಾದ ಹಾಗೂ ಅತೀ ಸೂಕ್ಷ್ಮವಾದ ಅಂಗಗಳಲ್ಲಿ ಒಂದಾಗಿದೆ. ನೀವು ಧೀರ್ಘಕಾಲದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಿಮ್ಮ ಅಪಧಮನಿಗಳು ರಕ್ತವನ್ನು ಪೂರೈಸುವಾಗ ತೊಂದರೆ ಉಂಟಾಗಿ ಅದು ನೋವು ಅಥವಾ ಅಂಜಿನಾ ಹಾಗೂ ಹೃದಯಾಘಾತಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡವು ಹೃದಯದ ಸ್ನಾಯುವಿನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಮತ್ತು ಅವುಗಳನ್ನು ದುರ್ಬಲಗೊಳಿಸುತ್ತವೆ ಹಾಗೂ ಅಚಿತಿಮವಾಗಿ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಮೆದುಳು: ಹೃದಯವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅದು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡದ ಕಾರಣ ನೀವು ಮಿನಿ ಸ್ಟೊಕ್‌ಗೆ ತುತ್ತಾಗಬಹುದು. ಇದು ಮೆದುಳಿನ ರಕ್ತ ಪೂರೈಕೆಯ ಸಂಕ್ಷಿಪ್ತ ಹಾಗೂ ತಾತ್ಕಾಲಿಕ ಅಡ್ಡಿಯಾಗಿವೆ. ಅಲ್ಲದೆ ಮೆದುಳಿನ ಭಾಗವು ಸಾಕಷ್ಟು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯದಿದ್ದಾಗ ಪೂರ್ಣ ಪ್ರಮಾಣದ ಪಾರ್ಶ್ವವಾಯು ಸಂಭವಿಸಬಹುದು. ಇದರಿಂದ ಮೆದುಳಿನ ಜೀವಕೋಶಗಳು ಸಾಯುತ್ತವೆ.

ಲೈಂಗಿಕ ಅಸಾಮಾನ್ಯ ಕ್ರಿಯೆ: ಹೆಚ್ಚಿದ ರಕ್ತದೊತ್ತಡವು ನಿಮಿರುವಿಕೆಯನ್ನು ಹೊಂದಲು ಮತ್ತು ನಿರ್ವಹಿಸಲು ಅಸಮರ್ಥವಾಗಬಹುದು. ಇದನ್ನು ನಿಮಿರುವಿಕೆಯ ಅಸಾಮಾನ್ಯ ಕ್ರಿಯೆ ಎಂದು ಕರೆಯುತ್ತಾರೆ. ಅಧಿಕ ರಕ್ತದೊತ್ತಡದಿಂದಾಗಿ ಶಿಶ್ನಕ್ಕೆ ರಕ್ತದ ಹರಿವು ಸೀಮಿತ ಪೂರೈಕೆಯನ್ನು ಮಾಡುವುದರಿಂದ ಇದು ಸಂಭವಿಸುತ್ತದೆ.

ಇದನ್ನು ಓದಿ:ನೀವು low blood pressure ದಿಂದ ಬಳಲುತ್ತಿದ್ದರೆ ಈ ಸಲಹೆಗಳನ್ನು ಅನುಸರಿಸಿ

ರಕ್ತದೊತ್ತಡವನ್ನು ತಕ್ಷಣವೇ ಕಡಿಮೆ ಮಾಡುವುದು ಹೇಗೆ?

1.ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ವಿಶ್ರಾಂತಿ ಪಡೆಯಿರಿ. ಒತ್ತಡವು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುವ ಆತಂಕಕ್ಕೆ ಕಾರಣವಾಗುತ್ತದೆ. ಹಾಗಾಗಿ ಶಾಂತಗೊಳಿಸುವ ಪ್ರಕ್ರಿಯೆಯು ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

2.ನಿಮ್ಮ ಹೃದಯ ಬಡಿತವನ್ನು ನಿಧಾನಗೊಳಿಸುವ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುವ ಉಸಿರಾಟದ ವ್ಯಾಯಮವನ್ನು ಮಾಡಿರಿ.

3.ನಿರ್ಜಲೀಕರಣವಾಗಿ ನೀರು ಕುಡಿಯುವುದು ಅಧಿಕ ರಕ್ತದೊತ್ತಡದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯವಾಗುವ ದೈಹಿಕ ಚಟುವಟಿಕೆಗಳನ್ನು ಮಾಡುವುದು ಹಾಗೂ ಸ್ವಲ್ಪ ನಡೆಯಲು ಪ್ರಯತ್ನಿಸಿ.

4.ನಿಮ್ಮ ಬಾಯಲ್ಲಿ ಸ್ವಲ್ಪ ಡಾರ್ಕ್ ಚಾಕೊಲೇಟ್‌ಗಳನ್ನು ಹಾಕಿಕೊಳ್ಳಿ. ಇದು ಫ್ಲೇವನಾಯ್ಡ್​ಗಳಿಂದ ತುಂಬಿರುತ್ತದೆ. ಈ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

5.ರತ್ತದೊತ್ತಡದ ಸಂದರ್ಭದಲ್ಲಿ ತಕ್ಷಣವೇ ತಣ್ಣೀರಿನ ಶವರ್ ತೆಗೆದುಕೊಳ್ಳಿ. ಏಕೆಂದರೆ ಅದು ನಿಮ್ಮ ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು, ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

6.ಧೂಮಪಾನ ಮತ್ತು ಮಧ್ಯಪಾನವನ್ನು ನಿಲ್ಲಿಸಿ.

ಅಧಿಕ ರಕ್ತದೊತ್ತಡದ ಲಕ್ಷಣಗಳೇನು?

*ವಿಭಜಿಸುವ ತಲೆನೋವು

*ಮೂಗಿನಲ್ಲಿ ರಕ್ತಸ್ರಾವ

*ತಲೆ ತಿರುಗುವಿಕೆ

*ಮೂತ್ರದಲ್ಲಿ ರಕ್ತ ಬರುವಿಕೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ